ಬೆಂಗಳೂರು: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಟ್ವಿಟ್ಟರ್ ಖಾತೆಯಲ್ಲಿ 2 ಸಾವಿರ ರುಪಾಯಿ ಹೊಸ ನೋಟಿನ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಉಕ್ಕಿನ ಸೇತುವೆ ಪರವಾಗಿ ಟ್ವೀಟ್ ಮಾಡಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಮ್ಯಾ ಈಗ ಹೊಸ ರು.2000 ನೋಟಿನ ಗುಣಮಟ್ಟ ಪರೀಕ್ಷೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಹೊಸ ನೋಟಿನ ಗುಣಮಟ್ಟ ಸರಿ ಇಲ್ಲ. ಬಣ್ಣ ಸುಲಭವಾಗಿ ಅಳಿಸಿ ಹೋಗುತ್ತದೆ. ಹುಡುಗಿಯರು ಲಿಪ್ ಸ್ಟಿಕ್ ಮರೆತರೆ ಚಿಂತಿಸಬೇಕಾಗಿಲ್ಲ. ರು. 2000 ನೋಟಿಗೆ ಮುತ್ತು ಕೊಟ್ಟರೆ ಸಾಕು ನಿಮ್ಮ ತುಟಿಗಳಿಗೆ ಬಣ್ಣ ಆಗುತ್ತದೆ, ಎಂದು ಹೇಳಿರುವ ರಮ್ಯಾ ನಟಿ ಐಶ್ವರ್ಯ ರೈ ನೇರಳೆ ಬಣ್ಣದ ಲಿಪ್ ಸ್ಟಿಕ್ ಹಾಕಿರುವ ಫೋಟೋ ಅಪ್ ಲೋಡ್ ಮಾಡಿದ್ದಾರೆ. ರಮ್ಯಾ ಟ್ವೀಟ್ ಗೆ ಅನೇಕ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.