ಪ್ರಮುಖ ವರದಿಗಳು

ಬಿಗ್‌ಬಾಸ್‌  ಮನೆಯಲ್ಲಿನ ಭೂತದ ಕುರಿತು ಕಿಚ್ಚ ಸುದೀಪ್ ಹೇಳಿದ್ದೇನು…?

Pinterest LinkedIn Tumblr

biiiii

ಕಳೆದ ರವಿವಾರ ಬಿಗ್‌ಬಾಸ್‌ ಮನೆಯಲ್ಲಿ ಸಂಜನಾ ಹಾಗು ಕಾರುಣ್ಯ ಕನ್ನಡಿಯಲ್ಲಿ ನೋಡಿದ್ದ ಭೂತ ಏನಾಯಿತು. ವಾರದ ಜೊತೆ ಕಿಚ್ಚನ ಜೊತೆಯಲ್ಲಿ ಸುದೀಪ್ ಭೂತದ ಸುದ್ದಿಗೆ ತೆರೆ ಎಳೆದಿದ್ದಾರೆ.

ಸಂಜನಾ ಹಾಗು ಕಾರುಣ್ಯ ಕನ್ನಡಿ ನೋಡುತ್ತಿದ್ದ ವೇಳೆ ಯಾವುದೋ ಒಂದು ವಸ್ತು ಹಾದುಹೋಗುದನ್ನು ಕಂಡು ಇಬ್ಬರು ಕೂಗಾಡಿದ್ದು, ಚೀರಾಡಿದ್ದು ದೊಡ್ಡ ಸುದ್ದಿ ಆಗಿತ್ತು. ಬಿಗ್‌ಬಾಸ್‌ ಮನೆಯಲ್ಲಿ ಭೂತ ಇದೆ ಎಂಬಿತ್ಯಾದಿ ಮಾತುಗಳು ಕೂಡ ಈ ವೇಳೆ ಕೇಳಿ ಬಂದಿದ್ದವು.

ಆದ್ರೆ ಸುದೀಪ್ ಇಂಥ ಯಾವುದೇ ಭೂತ ಕಾಣಿಸಿಲ್ಲ. ನಾವು ಎಲ್ಲ ಕ್ಯಾಮರಾಗಳನ್ನು ಪರಿಶೀಲಿಸಿದ್ದಾಗಲೂ ಎಲ್ಲೂ ಕಂಡು ಬಂದಿಲ್ಲ ಎಂದು ಹೇಳುವ ಮೂಲಕ ಕಾರುಣ್ಯ, ಸಂಜನಾ ಅವರ ಮಾತನ್ನು ಸುಳ್ಳು ಎಂದರು.

ಯಾರೂ ಏನೂ ನೋಡಿದ್ದಾರೋ ಗೊತ್ತಿಲ್ಲ. ಕೆಲವೊಮ್ಮೆ ಕಂಡಿದ್ದು, ಕೇಳಿದ್ದು ಸುಳ್ಳಾಗುತ್ತೇ ಅಂತಾ ಸುದೀಪ್‌ ಹೇಳಿದರು. ಹಾಗಾಗಿ ಕಾರುಣ್ಯ, ಸಂಜನಾ ದೆವ್ವ ನೋಡಿದ್ದಾರೆ ಅನ್ನೋದಕ್ಕೆ ಕ್ಯಾಮಾರದಲ್ಲೂ ಯಾವುದೇ ಸಾಕ್ಷಿ ಇಲ್ಲ ಅನ್ನೋದು ನಿಜ ಎಂದರು.

Comments are closed.