ರಾಜ್ಕೋಟ್: ದಾಖಲೆಗಳ ಸರದಾರ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿನೂತನ ದಾಖಲೆಯೊಂದನ್ನು ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಸ್ವಯಂಕೃತ ಅಪರಾದ ಎಂಬಂತೆ ತಾವೇ ಹಿಟ್ ವಿಕೆಟ್ ಆಗಿ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.
40 ರನ್ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ ಆದಿಲ್ ರಶೀದ್ ಎಸೆದ ಬಾಲ್ ಅನ್ನು ಆಡುವ ವೇಳೆ ಅವರ ಕಾಲು ವಿಕೆಟ್ ಗೆ ಬಡಿದು ಬೇಲ್ಸ್ ಬಿತ್ತು. ಹೀಗೆ ದುರದುಷ್ಟಕರ ರೀತಿಯಲ್ಲಿ ಕೊಹ್ಲಿ ಔಟಾದರು. ವಿಶೇಷವೆಂದರೆ 14 ವರ್ಷಗಳ ಬಳಿಕ ಭಾರತೀಯ ಬ್ಯಾಟ್ಸ್ ಮನ್ ಒಬ್ಬರು ಟೆಸ್ಟ್ ನಲ್ಲಿ ಹಿಟ್ ವಿಕೆಟ್ ಆಗಿದ್ದು. ಈ ಹಿಂದೆ ವಿವಿಎಸ್ ಲಕ್ಷ್ಮಣ್ ಅವರು ವಿಂಡೀಸ್ ವಿರುದ್ಧದ ಟೆಸ್ಟ್ ನಲ್ಲಿ ಹಿಟ್ ವಿಕೆಟ್ ಆಗಿ ಔಟಾಗಿದ್ದರು.
ಟೀಂ ಇಂಡಿಯಾದ ನಾಯಕರೊಬ್ಬರು ಟೆಸ್ಟ್ ನಲ್ಲಿ ಹಿಟ್ ವಿಕೆಟ್ ಆಗಿದ್ದು ಸರಿಸುಮಾರು 67 ವರ್ಷಗಳ ಹಿಂದೆ. 1949ರಲ್ಲಿ ಭಾರತ ತಂಡದ ನಾಯಕ ಲಾಲಾ ಅಮರನಾಥ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಹಿಟ್ ವಿಕೆಟ್ ಆಗಿದ್ದರು.