ಅಂತರಾಷ್ಟ್ರೀಯ

ಇವರು ವಿಶ್ವದ ಅತ್ಯಂತ ಪ್ರತಿಭಾವಂತರು ! ಭಾರತೀಯ ಮೂಲದ ಐವರಿಗೆ ಪ್ರತಿಷ್ಠಿತ ಗ್ಲೋರಿ ಬ್ಯಾರನ್ ಪ್ರಶಿಸ್ತಿ

Pinterest LinkedIn Tumblr

main

ಲೇಖಕ ಟಿ.ಎ. ಬ್ಯಾರನ್ ಅವರಿಂದ ಕೊಡಮಾಡಲ್ಪಡುವ ಪ್ರತಿಷ್ಠಿತಿ ದಿ ಗ್ಲೋರಿ ಬ್ಯಾರನ್ ಪ್ರಶಸ್ತಿಗೆ ಭಾರತೀಯ ಮೂಲದ ಐವರು ಯುವಕರು ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಸಾರ್ವಜನಿಕ ಜನಜೀವನದ ಮೇಲೆ ಉತ್ತಮ ಪರಿಣಾಮ ಬೀರುವಂತೆ ಕಾರ್ಯನಿರ್ವಹಿಸಿರುವ 25 ಯುವಕರನ್ನು ಗುರುತಿಸಿ ಗ್ಲೋರಿಯಾ ಬ್ಯಾರನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಲೇಖಕ ಟಿ.ಎ.ಬ್ಯಾರನ್ ಅವರು 2001ರಲ್ಲಿ ಆರಂಭಿಸಿದ್ದು, ಇಂದಿಗೂ ಯುವಕರನ್ನು ಉತ್ತಮ ಕೆಲಸಗಳಿಗೆ ಉತ್ತೇಜಿಸುವಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರತಿ ವರ್ಷ ಅದ್ವಿತೀಯ ಸಾಧನೆ ಮಾಡಿದ 25 ಯುವಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅವುಗಳಲ್ಲಿ 8ರಿಂದ 18 ವಯೋಮಿತಿಯ 15 ಜನ ವಿಜೇತರು ಹಾಗೂ 10 ಜನರನ್ನು ಗೌರವಾನ್ವಿತರು ಗುರುತಿಸಿ ಪ್ರಶಸ್ವಿ ವಿತರಿಸಲಾಗುತ್ತದೆ.

2016ನೇ ಸಾಲಿನಲ್ಲಿ ಭಾರತ ಮೂಲದ ಯುವಕರಾದ ಅನುರಾಧ, ಗಣೇಸನ್, ರಾಘವ್, ಗಣೇಶ್, ಮೇಘರಾ ರೆಡ್ಡಿ, ಪೂಜಾ ನಾಗ್ಪಾಲ್, ಮಾಯಾ, ಬುರ್ಹಾನ್ ಪುರ್ಕರ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ಆಯ್ಕೆಯನ್ನು ಗ್ಲೋರಿಯಾ ಬ್ಯಾರನ್ ಪ್ರಶಸ್ತಿ ಸಂಸ್ಥೆ ಘೋಷಿಸಿದ್ದು, ಈ ಭಾರತೀಯ ಮೂಲದ ಯುವಕರು ಭಾರತ ದೇಶ ಹೆಮ್ಮೆ ಪಟ್ಟುಕೊಳ್ಳುವಂತಹ ನಾಯಕತ್ವ, ಧೈರ್ಯ ಹಾಗೂ ಅನ್ವೇಷಣೆ ಕೆಲಸಗಳನ್ನು ನಿರ್ವಹಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

anurudh

ಅನುರಾಧ ಗಣೇಶನ್
ಗಣೇಶನ್ ಅವರು ಕ್ಲಾರ್ಕ್‍ಬರ್ಗ್‍ನ ಮೇರಿಲ್ಯಾಂಡ್ ನಿವಾಸಿಯಾಗಿದ್ದು, ಚಕ್ರಗಳುಳ್ಳ ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಬಹುದಾದ ಶೈತ್ಯಾಗಾರವನ್ನು ಅನ್ವೇಷಿಸಿದ್ದಾರೆ. ಇದರಿಂದ ವೈದ್ಯರು ಲಸಿಕೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಲು ಸಹಕಾರಿಯಾಗಿದೆ.

ragav

ರಾಘವ್ ಗಣೇಶ್
ಗಣೇಶ್ 14 ವರ್ಷದವನಾಗಿದ್ದು, ಕ್ಯಾಲಿಫೋರ್ನಿಯಾದ ಸ್ಯಾನ್‍ಜೋಸ್ ನಿವಾಸಿಯಾಗಿದ್ದಾನೆ. ಕುರುಡಲು ಸುಲಭವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಂತೆ ಅನುಕೂಲವಾಗುವಂತೆ ಅವರು ಬಳಸುವ ಎಲೆಕ್ಟ್ರಾನಿಕ್ ಸಾಧನವೊಂದನ್ನು ಅನ್ವೇಷಿಸಿ ಅದನ್ನು ವಾಕಿಂಗ್ ಸ್ಟಿಕ್‍ಗೆ ಅಳವಡಿಸುವ ಮೂಲಕ ಕುರುಡರಿಗೆ ಅನುಕೂಲವಂತೆ ಮಾಡಿದ್ದಾನೆ.

meghana

ಮೇಘನಾ ರೆಡ್ಡಿ
ಕ್ಯಾನಿಫೋರ್ನಿಯಾದ ಸ್ಯಾನ್‍ಡಿಯಾಗೋ ನಿವಾಸಿಯಾಗಿದ್ದು, 17 ವರ್ಷದ ಈಕೆ ಹಲ್ಲು, ಮೂಳೆ, ಕಣ್ಣು ಇತರ ಕೃತಕ ಅಂಗಾಂಗಳನ್ನು ಅನ್ವೇಷಿಸಿದ್ದಾಳೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಿದೆ.

pooja

ಪೂಜಾ ನಾಗ್ಪಾಲ್
ಕ್ಯಾಲಿಫೋರ್ನಿಯಾದ ಮೆನೆಥಾನ್ ಬೀಚ್ ನಿವಾಸಿಯಾಗಿರುವ ಪೂಜಾ 15 ವರ್ಷ ವಯಸ್ಸಿನವಳು. ಮಹಿಳೆಯರು, ಕೊಳಚೆ ನಿವಾಸಿಗಳು, ಗ್ರಾಮೀಣ ಪ್ರದೇಶದವರು ಸೇರಿದಂತೆ ಒಟ್ಟು 800 ಜನರನ್ನು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಅವರು ಸಾಕ್ಷರರಾಗುವಂತೆ ಮಾಡಿದ್ದಾಳೆ. ಇವರಲ್ಲಿ ತಬ್ಬಲಿ ಹಾಗೂ ಅನಾಥ ಮಕ್ಕಳು ಸಹ ಸೇರಿದ್ದಾರೆ.

maaya

ಮಾಯಾ ಬುರ್ಹಾನ್ ಪುರ್ಖಾರ್
ಮಾಯಾ ಕೆನಡಾದ ಆಂಟೊರಿಯೋ ನಿವಾಸಿಯಾಗಿದ್ದು, 17 ವರ್ಷ ವಯೋಮಾನದವಳಾಗಿದ್ದಾಳೆ. ಈಕೆ ಒಂದು ಸಾಕ್ಷ್ಯ ಚಿತ್ರ ನಿರ್ಮಿಸುವ ಮೂಲಕ ಪರಿಸರದಲ್ಲಿ ಉಂಟಾಗುವ ಪ್ರತಿಕೂಲದಿಂದ ಆಗುವ ವಿಪತ್ತು ಕುರಿತು ಚಿತ್ರದ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸಿ, ಕೈಗೊಳ್ಳುಬಹುದಾದ ಮುಂಜಾಗೃತೆ ಕುರಿತು ಮಾಹಿತಿ ನೀಡಿದ್ದಾಳೆ.

Comments are closed.