
ಅಹಮದಾಬಾದ್: ಭಾರತದ ಸ್ಟಾರ್ ರೈಡರ್ ಅಜಯ್ ಠಾಕೂರ್ (12) ಅವರ ಶಿಸ್ತುಬದ್ಧ ರೈಡಿಂಗ್ಗೆ ಇರಾನ್ ತಲೆಭಾಗಿತು. 38-29 ಅಂಕಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ಸತತ ಮೂರನೇ ಬಾರಿ ವಿಶ್ವಕಪ್ ಎತ್ತಿಹಿಡಿದ ಸಾಧನೆ ಮಾಡಿತು.


ಕಳೆದೆರಡು ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದ ಇರಾನ್ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿವ ಹಂಬಲದಲ್ಲಿತ್ತು. ಆದರೆ ಸ್ಟಾರ್ ರೈಡರ್ ಅಜಯ್ ಠಾಕೂರ್ ಇರಾನ್ ಕನಸಿಗೆ ನೀರೆರೆದರು. ಮೊದಲಾರ್ಧದಲ್ಲಿ ಐದು ಅಂಕಗಳ ಮುನ್ನಡೆ ಸಾಧಿಸಿದ್ದ ಇರಾನ್ ದ್ವಿತಿಯಾರ್ಧದಲ್ಲಿ ಭಾರತದ ದಾಳಿಗೆ ಬೆಚ್ಚು ಬಿದ್ದಿತು. 25ನೇ ನಿಮಿಷದಲ್ಲಿ ಅಜಯ್ ಠಾಕೂರ್ ಸೂಪರ್ ರೈಡ್ ಮಾಡುವ ಮೂಲಕ ಅಂತರವನ್ನು 17-19ಕ್ಕೆ ಇಳಿಸಿದರು.
30ನೇ ನಿಮಿಷದಲ್ಲಿ ಭಾರತ ಇರಾನ್ ಅನ್ನು ಆಲೌಟ್ ಖೆಡ್ಡಾಕ್ಕೆ ಬೀಳಿಸಿತು. ಇದರಿಂದ ಎರಡು ಲೋನಾ ಅಂಕ ಸಹಿತ 24-21ರ ಮುನ್ನಡೆ ಸಾಧಿಸಿತು. ಇನ್ನು ಪಂದ್ಯದ ಅಂತ್ಯದಲ್ಲಿ ಅಂದರೇ 38ನೇ ನಿಮಿಷದಲ್ಲಿ ಇರಾನ್ ತಂಡ ಎರಡನೇ ಬಾರಿ ಆಲೌಟ್ ಬಲೆಗೆ ಬಿದ್ದಿತು. ಈ ಮೂಲಕ ಭಾರತ 30-24ರ ಮುನ್ನಡೆ ಸಾಧಿಸಿತು. ಅಂತಿಮವಾಗಿ ಭಾರತ 38-29 ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.
ಮೊದಲಾರ್ಧದಲ್ಲಿ ಇರಾನ್ ಪಾರುಪತ್ಯ:
ಟಾಸ್ ಗೆದ್ದ ಇರಾನ್ ಕೋರ್ಟ್ ಆಯ್ಕೆ ಮಾಡಿಕೊಂಡಿತು. ಮೊದಲನೇ ನಿಮಿಷದಲ್ಲೇ ಸಂದೀಪ್ ಕುಮಾರ್ ಒಂದು ಅಂಕ ಬೇಟೆಯಾಡುವ ಮೂಲಕ ಭಾರತದ ಖಾತೆ ತೆರೆದರು. ಮೂರನೇ ನಿಮಿಷದಲ್ಲಿ ಇರಾನ್ ತನ್ನ ಖಾತೆ ತೆರೆಯಿತು. ಹದಿನೇಳನೇ ನಿಮಿಷದವರೆಗೂ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಆದರೆ ಹದಿನೆಂಟನೇ ನಿಮಿಷದಲ್ಲಿ ಭಾರತ ಮೊದಲ ಬಾರಿ ಆಲೌಟ್ ಆಯಿತು. ಈ ಮೂಲಕ ಇರಾನ್ ನಾಲ್ಕು ಅಂಕ ಮುನ್ನಡೆ ಸಾದಸಿತು. ಇದರಿಂದಾಗಿ ಭಾರತ 12-16 ಹಿನ್ನಡೆ ಅನುಭವಿಸಿತು. ಮೊದಲಾರ್ಧದ ಅಂತ್ಯಕ್ಕೆ 13-18, ಅಂದರೇ ಭಾರತ ಐದು ಅಂಕಗಳ ಹಿನ್ನಡೆ ಅನುಭವಿಸಿತು.
Comments are closed.