ಕರ್ನಾಟಕ

ಗೋವಾದಲ್ಲಿ ಕನ್ನಡಿಗರ ಮನೆ, ಬೈಕ್, ಕಾರುಗಳಿಗೆ ಬೆಂಕಿ ಹಚ್ಚಿ, ಹಲ್ಲೆ ನಡೆಸಿದ ಕಿಡಿಗೇಡಿಗಳು

Pinterest LinkedIn Tumblr

goa

ಪಣಜಿ: ಗೋವಾದ ಪಣಜಿ ಜಿಲ್ಲೆಯ ಉಸಗಾಂವ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೆಲವು ಕಿಡಿಗೇಡಿಗಳು ಕನ್ನಡಿಗರ 7 ಕುಟುಂಬಗಳ ಮೇಲೆ ಹಲ್ಲೆ ನಡೆಸಿದ್ದು, 5 ಮನೆಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.

ಅಕ್ಟೋಬರ್ 15 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 200 ಜನರಿದ್ದ ತಂಡ ಕನ್ನಡಿಗರ ಮೇಲೆ ದಾಳಿ ಮಾಡಿದ್ದು, ಮನೆಗಳಿಗೆ ನುಗ್ಗಿ ವಸ್ತುಗಳನ್ನೆಲ್ಲಾ ಪುಡಿ ಪುಡಿ ಮಾಡಿದ್ದಾರೆ. ಜತೆಗೆ 5 ಮನೆ, 3 ಬೈಕ್ ಮತ್ತು 3 ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಪುಂಡರ ಗುಂಪು ಯುವಕನೋರ್ವನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಸಹ ನಡೆಸಿದೆ.

goa1

ವಲಸಿಗರು ಸ್ಥಳ ಬಿಟ್ಟು ತೆರಳಬೇಕು ಎಂದು ಆಗ್ರಹಿಸಿ ಬುಧವಾರ ಈ ಭಾಗದಲ್ಲಿ ಬಂದ್‌ ನಡೆಸಲಾಗಿತ್ತು. ಆ ಬಳಿಕ ಕನ್ನಡಿಗರ ಮೇಲೆ ಗೂಂಡಾಗಿರಿ ನಡೆಸಲಾಗಿದ್ದು ಕೂಡಲೇ ಸ್ಥಳ ಬಿಟ್ಟು ತೆರಳುವಂತೆ ಆಗ್ರಹಿಸಿದ್ದಾರೆ.ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ.

ಹಲ್ಲೆಗೊಳಗಾದ ಕನ್ನಡಿಗರು ನಮಗೆ ರಕ್ಷಣೆ ನೀಡಲು ಸಹಕರಿಸಬೇಕು ಎಂದು ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.

Comments are closed.