ಮನೋರಂಜನೆ

ಇಂದು ಬಿಗ್‌ಬಾಸ್‌ ಮನೆಯಿಂದ ಹೊರಬೀಳುವವರು ಯಾರು…?

Pinterest LinkedIn Tumblr

big

ನಿನ್ನೆಯಿಂದ ಬಿಗ್‌ಬಾಸ್‌ ಮನೆ ಗಲಾಟೆ, ಬೊಬ್ಬೆ, ಚೀರಾಟ-ಕೂಗಾಟದಿಂದ ಗೊಂದಲದ ಗೂಡಾಗಿದೆ. ಈವತ್ತು ಶನಿವಾರ. ಬಿಗ್‌ಬಾಸ್‌ ಮನೆಯಿಂದ ಯಾರು ಹೊರಬೀಳಬಹುದು….?

ಬಿಗ್‌ಬಾಸ್‌ನ ಎರಡನೇ ವಾರದ ಎಲಿಮಿನೇಷನ್‌ಗೆ ಕ್ಷಣಗಣನೆ ಈಗಾಗಲೇ ಶುರುವಾಗಿದ್ದು, ಎರಡನೇ ವಾರ ಎಲಿಮಿನೇಷನ್‌ಗೆ ನಾಮಿನೇಟ್‌ ಆಗಿರೋದು ಒಟ್ಟು ಐದು ಜನ ಸ್ಪರ್ಧಿಗಳು. ಪ್ರಥಮ್‌, ಕಾವ್ಯಾ, ದೊಡ್ಡ ಗಣೇಶ್‌, ಶೀತಲ್‌ ಶೆಟ್ಟಿ ಮತ್ತು ಸಂಜನಾ ಈ ವಾರ ನಾಮಿನೇಟ್‌ ಆದ ಸದಸ್ಯರು. ಅದರಲ್ಲೂ ಪ್ರಥಮ್‌ ಮತ್ತು ಸಂಜನಾ ಕಳೆದ ವಾರವೂ ನಾಮಿನೇಟ್‌ ಆಗಿದ್ದವರು.

ಈ 5 ಮಂದಿಯಲ್ಲಿ ಯಾರು ಹೊರಗೆ ಹೋಗಬಹುದುದ್ ಎಂಬ ಕಾತುರದಲ್ಲಿಇದ್ದಾರೆ ಜನ. ಬಿಗ್‌ಬಾಸ್‌ ಮನೆಯಲ್ಲಿ ನಡೆಯುತ್ತಿರೋ ಕೆಲ ಚಟುವಟಿಕೆಗಳನ್ನು ಗಮನಿಸಿದರೆ, ಈ ವಾರ ದೊಡ್ಡ ಗಣೇಶ್‌ ಬಹುತೇಕ ಹೊರಗೆ ಹಾಗಬಹುದು. ಇಲ್ಲದಿದ್ದರೆ ಕಾವ್ಯಾ ಮನೆಯಿಂದ ಹೊರ ಹೋಗೂದುದ್ ಖಚಿತ.

ಇನ್ನುಳಿದಂತೆ ಪ್ರಥಮ್‌ ಬಿಗ್‌ಬಾಸ್‌ಗೆ ಬೇಕೆ ಬೇಕು. ಸಂಜನಾ ಬಿಗ್‌ಬಾಸ್‌ ಮನೆಯಲ್ಲಿರೋ ಗ್ಲ್ಯಾಮರ್‌ ಗೊಂಬೆ. ಇನ್ನು ಶೀತಲ್‌ ಶೆಟ್ಟಿ ಸಹ ಈ ವಾರ ಸೇಫ್‌ ಆಗೋದು ಖಂಡಿತ ಅಂತಿದ್ದಾರೆ ವೀಕ್ಷಕರು.

ಪ್ರಥಮ್ ವಿರುದ್ಧ ಕಿಚ್ಚ ಸುದೀಪ್ ಗೆ ದೂರು ನೀಡಲು ಒಂದುಗೂಡಿದ ಮನೆಮಂದಿ !

ನಿನ್ನೆ ಲಕ್ಸುರಿ ಬಜೆಟ್‌ ಪಾಯಿಂಟ್‌ಗಳಿಂದಾಗಿ ಬಿಗ್‌ಬಾಸ್‌ ಮನೆಯ ವಾತಾವರಣ ಗೊಂದಲದ ಗೂಡಾಗಿತ್ತು. ಅದರಲ್ಲೂ ಪ್ರಥಮ್‌ ಹಾಗೂ ನಿರಂಜನ್‌ ಮಧ್ಯೆ ನಡೆದ ಜಗಳ ಮನೆಯ ಸದಸ್ಯರ ತಾಳ್ಮೆಯನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಿತ್ತು.

ಬಿಗ್‌ಬಾಸ್‌ ಮನೆಯಲ್ಲಿ ಆರಂಭದಿಂದಲೂ ಪ್ರಥಮ್‌ ಎಲ್ಲರ ಕೆಂಗಣ್ಣಿಗೆ ಗುರಿ ಆಗುತ್ತಲೇ ಬಂದಿದ್ದಾರೆ. ನಿನ್ನೆ ಪ್ರಥಮ್ ವಿರುದ್ಧ ಎಲ್ಲರೂ ಕೂಗಾಡಿದ್ದೆ ಕೂಗಾಡಿದ್ದು. ಈಗ ಎಲ್ಲರೂ ಸೇರಿ ಕಿಚ್ಚ ಸುದೀಪ್ ಗೆ ದೂರು ನೀಡಲು ಮುಂದಾಗಿದ್ದಾರೆ. ಮುಂದೆ ಏನಾಗುತ್ತೋ ಕಾಡು ನೋಡೋಣ…

Comments are closed.