ರಾಷ್ಟ್ರೀಯ

ಕಾಶ್ಮೀರದ ಸಾಂಬಾದಲ್ಲಿ ಪಾಕಿಸ್ತಾನಿ ಗೂಢಚಾರನ ಬಂಧನ

Pinterest LinkedIn Tumblr

kash

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಿದ್ದು, ಆತನಿಂದ 2 ಪಾಕಿಸ್ತಾನಿ ಸಿಮ್ ಕಾರ್ಡ್ಗಳು ಮತ್ತು ಭಾರತೀಯ ಸೇನೆಯ ಜಮಾವಣೆಯ ಮಾಹಿತಿ ಇರುವ ನಕ್ಷೆಯನ್ನು ವಶಪಡಿಸಿಕೊಳ್ಳಲಾಗಿದೆ.

ಕಣಿವೆ ರಾಜ್ಯ ಸಾಂಬಾ ಸೆಕ್ಟರ್ ನಲ್ಲಿ ನಿನ್ನೆ ತಡರಾತ್ರಿಯಲ್ಲಿ ಬೋಧ್ ರಾಜ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಪಾಕಿಸ್ತಾನ ಪರ ಭಾರತೀಯ ಗಡಿಯಲ್ಲಿ ಗೂಢಚಾರಿಕೆ ಮಾಡುತ್ತಿರುವ ಕುರಿತು ಸೇನಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಬಂಧನ ವೇಳೆ ಈತನ ಬಳಿ ಪಾಕಿಸ್ತಾನದ 2 ಸಿಮ್ ಕಾರ್ಡ್ ಗಳು ಹಾಗೂ ಭಾರತೀಯ ಸೇನಾ ಪೋಸ್ಟ್ ಗಳ ಮ್ಯಾಪ್ ಪತ್ತೆಯಾಗಿದೆ.

ಸೇನಾ ಮೂಲಗಳ ಪ್ರಕಾರ ಬಂಧಿತ ಬೋಧ್ ರಾಜ್ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಪ್ರದೇಶದ ನಿವಾಸಿಯೆಂದು ತಿಳಿದುಬಂದಿದ್ದು, ಪ್ರಸ್ತುತ ಈತನನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಈ ಹಿಂದೆಯೂ ಕೂಡ ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ರಾಜಸ್ತಾನದಲ್ಲಿ ಓರ್ವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನ ಬಳಿ ಭಾರತೀಯ ಸೇನಾ ಗಡಿಗಳ ಫೋಟೋಗಳು ಹಾಗೂ ಮ್ಯಾಪ್ ಗಳ ಪತ್ತೆಯಾಗಿದ್ದವು.

Comments are closed.