ರಾಷ್ಟ್ರೀಯ

ಜಿಯೋ 4ಜಿ ಇಂಟರ್’ನೆಟ್ ಸ್ಪೀಡ್’ನ ಮಿತಿಯನ್ನು ಬಹಿರಂಗ ಪಡಿಸಿದ ಟ್ರಾಯ್ !

Pinterest LinkedIn Tumblr

jio-sim-card

ಮುಂಬೈ: ದೇಶದಲ್ಲಡೆ ಸಂಚಲನ ಮೂಡಿಸಿ ಅತೀ ಕಡಿಮೆ ಅವಧಿಯಲ್ಲಿ ದಾಖಲೆ 4ಜಿ ಗ್ರಾಹಕರನ್ನು ಹೊಂದಿದ ರಿಲಯನ್ಸ್ ಜಿಯೋದ ಸತ್ಯವನ್ನು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವಾಸ್ತವಾಂಶವನ್ನು ಬಿಚ್ಚಿಟ್ಟಿದೆ.

ಆರಂಭದಲ್ಲಿದ್ದ ವೇಗದ ಮಿತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ಬಳಕೆದಾರರ ಪ್ರಕಾರ ಉಳಿದ ಸಂಸ್ಥೆಗಳ 2ಜಿ ವೇಗವೆ ಪರವಾಗಿಲ್ಲ ಎನ್ನುವಂತಾಗಿದೆ. ಟ್ರಾಯ್ ನೀಡಿರುವ ಅಂಕಿಅಂಶದ ಪ್ರಕಾರ ಇಂಟರ್’ನೆಟ್ ಸೇವಾ ಕಂಪನಿಗಳಲ್ಲಿ 4 ಜಿ ಸೇವೆಯಲ್ಲಿ ಅತೀ ಹೆಚ್ಚು ವೇಗವನ್ನು ನೀಡುತ್ತಿರುವುದು ಏರ್’ಟೆಲ್. ನಂತರದ ಸ್ಥಾನದಲ್ಲಿ ಐಡಿಯಾ, ವೊಡಾಫೋನ್ ಸಂಸ್ಥೆಗಳಿವೆ.

ಜಿಯೋ’ಗೆ ಒದಗಿಸಬೇಕಾದ ಗುಣಮಟ್ಟದ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಏರ್ ಟೇಲ್, ವಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳಿಗೆ 3.050 ಕೋಟಿ ರೂ. ದಂಡ ವಿಧಿಸಲು ದೂರ ನಿಯಂತ್ರಣ ಇಲಾಖೆಗೆ ಶಿಫಾರಸ್ಸು ಮಾಡಿದೆ. ಈ ದಂಡದಲ್ಲಿ ಏರ್’ಟೆಲ್ ಹಾಗೂ ವೊಡಾಫೋನ್ ಸಂಸ್ಥೆಗಳಿಗೆ 21 ಹಾಗೂ 21 ಪರವಾನಗಿ ಸೇವಾ ವಲಯಗಳಿಂದ 1050 ಕೋಟಿ ರೂ. ಹಾಗೂ ಐಡಿಯಾ ಸಂಸ್ಥೆಗೆ 19 ಪರವಾನಗಿ ಸೇವಾ ವಲಯದಿಂದ 950 ಕೋಟಿ ರೂ. ದಂಡ ಪಾವತಿಸಬೇಕು ಎಂದು ಶಿಫಾರಸ್ಸು ನೀಡಿದೆ.

Comments are closed.