ಕರ್ನಾಟಕ

ಗಿಫ್ಟ್‌ನ್ನು ಸ್ವೀಕರಿಸಲು ವೇದಿಕೆಯಲ್ಲೇ ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ !

Pinterest LinkedIn Tumblr

siddu

ಬೆಂಗಳೂರು: ದುಬಾರಿ ಹ್ಯೂಬ್ಲೆಟ್ ವಾಚ್ ಗಿಫ್ಟ್ ಪಡೆದು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಲ್ಕ್ ಬೋರ್ಡ್ ನಿರ್ದೇಶಕಿ ನೀಲಾ ಮಂಜುನಾಥ್ ನೀಡಿದ ಪ್ಯಾಕ್ ಮಾಡಿದ್ದ ಗಿಫ್ಟ್‌ನ್ನು ಸ್ವೀಕರಿಸಲು ವೇದಿಕೆಯಲ್ಲೇ ನಿರಾಕರಿಸಿದ ಘಟನೆ ಮಂಗಳವಾರ ನಡೆಯಿತು.

ಇಂದು ವಿಧಾನಸೌಧದಲ್ಲಿ ನಡೆದ ಕರ್ನಾಟಕ ರೇಷ್ಮೆ ನಿಗಮದ ಕಾರ್ಯಕ್ರಮದಲ್ಲಿ ಸಚಿವ ಎ.ಮಂಜು ಅವರು ನಿಗಮದ ವಿಮೋಚನಾ ಷೇರು ಬಂಡವಾಳದ 22 ಕೋಟಿ ರುಪಾಯಿಗಳ ಚೆಕ್‌ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು. ಬಳಿಕ ನೀಲಾ ಮಂಜುನಾಥ್ ನೀಡಿದ ಪ್ಯಾಕ್ ಮಾಡಿದ್ದ ಗಿಫ್ಟ್ ಬಾಕ್ಸಗಳನ್ನು ಸಿಎಂ ಕೈಗೆ ಮಂಜು ನೀಡಿದರು. ಕೂಡಲೇ ಇದರಲ್ಲೇನಿದೆ ಎಂದು ಸಿಎಂ ಪ್ರಶ್ನಿಸಿದರು. ರೇಷ್ಮೆ ಜುಬ್ಬಾ ಎಂದು ಮಂಜು ಉತ್ತರಿಸಿದಾಗ..ಬೇಡ…ಬೇಡ.. ನಾನು ರೇಷ್ಮೆ ಜುಬ್ಟಾ ಧರಿಸುವುದಿಲ್ಲ.. ಎಂದು ಸ್ವೀಕರಿಸಲು ನಿರಾಕರಿಸಿದರು.

ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯೂಬ್ಲೆಟ್ ವಾಚ್ ಗಿಫ್ಟ್ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಗಿಫ್ಟ್ ಪಡೆಯಲು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.