ಅಂತರಾಷ್ಟ್ರೀಯ

ಬೆಳಕು ನೀಡುವ ಗಿಡಗಳು ! ಹೊಸ ಆವಿಷ್ಕಾರ !

Pinterest LinkedIn Tumblr

3

ದುಬೈ : ಮತ್ತೊಂದು ಹೊಸ ವಂಶವಾಹಿನಿಯೊಂದನ್ನು ಗಿಡಗಳಿಗೆ ಅಳವಡಿಸಿ ಬೆಳಕು ಪಡೆಯುವ ನೂತನ ಯೋಜನೆಯೊಂದನ್ನು ಕಂಡುಹಿಡಿಯಲಾಗಿದೆ.

ಬಹುಮುಖ್ಯವಾಗಿ ಹೊಸ ವಂಶವಾಹಿನಿಗಳನ್ನು ಮನೆಯಲ್ಲಿ ಬೆಳೆಯುವ ಸಾಮಾನ್ಯ ಗಿಡಗಳಿಗೆ ಸೇರಿಸುವ ಮೂಲಕ ಮನೆಗಿಡಗಳು ಬೆಳಕು ನೀಡುವ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸಬಹುದಾಗಿದೆ.

4

3

2

1

ಈ ಯೋಜನೆ ಮೂಲಕ ರಸ್ತೆಗಳಲ್ಲಿ, ಸಾರ್ವಜನಿಕರು ನಡೆದಾಡುವ ಜಾಗದಲ್ಲಿ ದೊಡ್ಡ ದೊಡ್ಡ ಮರಗಳನ್ನು ಬೆಳೆಸುವ ಮೂಲಕ ಬೆಳಕನ್ನು ಪಡೆಯುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ರಸ್ತೆಗಳಲ್ಲಿ ಬೆಳಕಿನ ಉದ್ದೇಶಕ್ಕಾಗಿ ವೆಚ್ಚವಾಗುತ್ತಿರುವ ಇಂಧನ ಶಕ್ತಿ ಉಳಿಸುವುದು ಮತ್ತು ಅದರ ಪ್ರಮಾಣವನ್ನು ಕಡಿತಗೊಳಿಸುವ ಉದ್ದೇಶ ಹೊಂದಲಾಗಿದೆ.

ನಾವು ಇಂಧನದ ಮೂಲಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಹೊಂದಿರುವುದರಿಂದ ನಮಗೆ ಇದು ಸಹಕಾರಿಯಾಗಿ ಪರಿಣಮಿಸಲಿದೆ. ಈ ವಿಷಯ ಸಾರ್ವಜನಿಕರಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ನಮ್ಮ ಪ್ರಕೃತಿ ವಲಯದಲ್ಲಿಯೂ ಇಂತಹ ಗಿಡಗಳ ಬೆಳವಣಿಗೆಯಿಂದ ಆಗಬಹುದಾದ ಪರಿಣಾಮ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

Comments are closed.