ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್ ಕುರಿತು ಸಾಕ್ಷ್ಯಕ್ಕೆ ಆಗ್ರಹಿಸುವವರು ಪಾಕ್ ನಾಗರಿಕತ್ವ ಪಡೆಯಿಲಿ: ಉಮಾಭಾರತಿ

Pinterest LinkedIn Tumblr

umaಪುಣೆ: ಪಾಕಿಸ್ತಾನ ಆಕ್ರಮಿತ ಕಾಶ್ಮಿರದೊಳಗೆ ನುಗ್ಗಿ ಭಾರತೀಯ ಸೇನಾಪಡೆಗಳು ನಡೆಸಿದ ಸೀಮಿತ ದಾಳಿಯ ಬಗ್ಗೆ ಅನುಮಾನವಿದ್ದವರು ಪಾಕಿಸ್ತಾನದ ನಾಗರಿಕತ್ವ ಪಡೆಯುವುದು ಸೂಕ್ತ ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ ಹೇಳಿದ್ದಾರೆ.

ಒಂದು ವೇಳೆ, ಪಾಕಿಸ್ತಾನ ಸೀಮಿತ ದಾಳಿಯ ಬಗ್ಗೆ ಸಾಕ್ಷ್ಯಗಳನ್ನು ಕೊಡುವಂತೆ ಒತ್ತಾಯಿಸುತ್ತಿದೆ. ಆದ್ದರಿಂದ ಸಾಕ್ಷ್ಯಗಳನ್ನು ನೀಡಿ ಎನ್ನುವ ಜನರು ಪಾಕ್ ನಾಗರಿಕತ್ವ ಪಡೆಯುವುದು ಉತ್ತಮ ಎಂದು ತಿಳಿಸಿದ್ದಾರೆ.

ಸೀಮಿತ ದಾಳಿಯ ಬಗ್ಗೆ ಪಾಕಿಸ್ತಾನ ಅನುಮಾನ ವ್ಯಕ್ತಪಡಿಸುತ್ತಿರುವುದರಿಂದ, ಸೀಮಿತ ದಾಳಿಯ ವಿಡಿಯೋ ಬಹಿರಂಗಪಡಿಸಿ ಪಾಕ್‌ಗೆ ತಿರುಗೇಟು ನೀಡಿ ಎಂದು ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರವನ್ನು ಕೋರಿತ್ತು.

ಕಾಂಗ್ರೆಸ್ ಪಕ್ಷದ ವಕ್ತಾರ ಆನಂದ್ ಶರ್ಮಾ ಮಾತನಾಡಿ, ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದೆ ಎನ್ನುವ ಬಿಜೆಪಿ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಈ ಹಿಂದೆ ಕೂಡಾ ಭಾರತೀಯ ಸೇನೆ ಹಲವಾರು ಬಾರಿ ಸೀಮಿತ ದಾಳಿ ನಡೆಸಿದೆ ಎಂದರು.

ಭಾರತೀಯ ಸೇನೆ ಸೀಮಿತ ದಾಳಿ ವರದಿ ನಕಲಿಯಾಗಿದ್ದು, ಬಿಜೆಪಿ ರಾಷ್ಟ್ರದ ಹಿತಾಸಕ್ತಿಯ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಆರೋಪಿಸಿದ್ದಾರೆ.

Comments are closed.