ಪ್ರಮುಖ ವರದಿಗಳು

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅಬುಧಾಬಿಯ ಯುವರಾಜ ಅತಿಥಿ !

Pinterest LinkedIn Tumblr

sheikh

ನವದೆಹಲಿ: ಮುಂದಿನ ವರ್ಷದ ಗಣರಾಜ್ಯೋತ್ಸವದ ಪರೆಡ್‌ಗೆ ಮುಖ್ಯ ಅತಿಥಿಯಾಗಿ ಅಬುಧಾಬಿಯ ಯುವರಾಜ ಹಾಗೂ ಯುಎಇನ ಸಶಸ್ತ್ರ ಪಡೆಗಳ ಪರಮೋನ್ನತ ಕಮಾಂಡರ್ ಶೇಖ್‌ ಮೊಹ್ಮದ್‌ ಬಿನ್ ಝಾಯೆದ್ ಅಲ್ ನಹ್ಯಾನ್ ಭಾಗವಹಿಸಲಿದ್ದಾರೆ. ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟರ್‌ನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸರಕಾರ ನೀಡಿದ್ದ ಆಹ್ವಾನದ ಮೇರೆಗೆ ಯುಎಇ ದೊರೆ ರಿಪಬ್ಲಿಕ್‌ ಡೇ ಪರೇಡ್‌ನಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಅವರು ಭಾನುವಾರ ಟ್ವೀಟ್‌ ಮಾಡುವ ಮೂಲಕ ಈ ವಿಷಯ ಪ್ರಕಟಿಸಿದರು.

ಯುಎಇ ರಾಷ್ಟ್ರವು ಪಾಕಿಸ್ತಾನದ ಆಪ್ತ ಸ್ನೇಹಿತನಾಗಿ ಗುರುತಿಸಿಕೊಂಡಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕ್‌ಅನ್ನು ಅಂತಾರಾಷ್ಟ್ರೀಯವಾಗಿ ಏಕಾಂಗಿಯಾಗಿಸಬೇಕೆಂಬ ಮೋದಿಯವರ ದೂರಾಲೋಚನೆಯ ನಡೆಯಾಗಿ ಯುಎಇ ದೊರೆಯನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಯುಎಇ ಸಶಸ್ತ್ರ ಪಡೆಗಳ ಡೆಪ್ಯೂಟಿ ಸುಪ್ರೀಂ ಕಮಾಂಡರ್‌ ಆಗಿರುವ ನಹಯಾನ್‌ ಅವರ ಆಗಮನವು ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಭದ್ರತೆ ಕ್ಷೇತ್ರಗಳಲ್ಲಿ ಹೊಸ ಸುಧಾರಣೆಗಳನ್ನು ತರಲಿದೆ ಎನ್ನಲಾಗುತ್ತಿದೆ.

Comments are closed.