ಮನೋರಂಜನೆ

‘ಬಾಲಿವುಡ್ ಯಾರ ಅಪ್ಪನದ್ದೇ ..?’ ; ಉಡಾಫೆಯ ಪ್ರಶ್ನೆ ಹಾಕಿದ ಪಾಕ್ ನಟ ಫವಾದ್ ಖಾನ್

Pinterest LinkedIn Tumblr

New Delhi, India-20140915:Bollywood actor Fawad Afzal Khan posing for a profile shoot during an exclusive interview with HTCity-Hindustan Times during the promotion of his upcoming movie Khoobsurat on September 15, 2014 in New Delhi, India.Photo: Raajesh Kashyap/HTCity

ಉರಿ ದಾಳಿಯ ನಂತರ ಪಾಕಿಸ್ತಾನ ನಟರಿಗೆ ಭಾರತೀಯ ಸಿನೆಮಾಗಳಲ್ಲಿ (ಬಾಲಿವುಡ್) ನಿಷೇಧ ಹೇರಿದ ನಂತರ ಇದೀಗ ಪಾಕ್ ನಟ ಫವಾದ್ ಖಾನ್ ಸುದ್ದಿಯಲ್ಲಿದ್ದಾರೆ.

‘ಬಾಲಿವುಡ್ ಯಾರ ಅಪ್ಪನದ್ದೇ ..?’ ಎಂಬ ಉಡಾಫೆಯ ಪ್ರಶ್ನೆಯನ್ನು ಕೇಳುವ ಮೂಲಕ ನಟ ಫವಾದ್ ಖಾನ್ ಮತ್ತೆ ಭಾರತೀಯರನ್ನು ಕೆಣಕಿದ್ದಾರೆ.

ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಕಲಾವಿದರು ಭಾರತ ತೊರೆಯಬೇಕೆಂದು ಮಹರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‍‍ಎಸ್) ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ಪಾಕಿಸ್ತಾನದ ನಟ ಫವಾದ್ ಖಾನ್ ಸೇರಿದಂತೆ ಎಲ್ಲರೂ ಭಾರತ ತೊರೆದಿದ್ದರು.

ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಚಿತ್ರ ‘ಯೇ ದಿಲ್ ಹೈ ಮುಷ್ಕಿಲ್’ ನಲ್ಲಿ ಫವಾದ್ ನಟಿಸಿದ್ದು, ಪ್ರಸ್ತುತ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ದೀಪಾವಳಿ ವೇಳೆಗೆ ಈ ಚಿತ್ರ ಬಿಡುಗಡೆಯಾಗಲಿದ್ದು, ಫವಾದ್ ಭಾರತ ತೊರೆಯದೇ ಇದ್ದರೆ ಸಿನಿಮಾ ಬಿಡುಗಡೆಗೂ ತಡೆಯೊಡ್ಡುತ್ತೇವೆ ಎಂದು ಎಂಎನ್‍ಎಸ್ ಗುಡುಗಿತ್ತು. ಈ ಬೆದರಿಕೆಯ ಹಿನ್ನೆಲೆಯಲ್ಲಿ ಫವಾದ್ ಖಾನ್ ಪಾಕ್ ಗೆ ವಾಪಸು ಹೋಗಿದ್ದರು.

ಜೊತೆಗೆ ಗುರುವಾರ ಭಾರತೀಯ ಸೇನಾಪಡೆ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿದ ನಂತರ, ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (ಐಎಂಪಿಪಿಎ) ಭಾರತದಲ್ಲಿರುವ ಪಾಕ್ ಮೂಲದ ಕಲಾವಿದರಿಗೆ ನಿಷೇಧ ಹೇರಿತ್ತು.

ಪಾಕಿಸ್ತಾನಕ್ಕೆ ಮರಳಿದ ನಂತರ ಭಾರತದ ವಿರುದ್ಧವೇ ದ್ವನಿ ಎತ್ತಿದ್ದಾನೆ. ನಿರ್ದೇಶಕರ ಮಂಡಳಿ ಪಾಕಿಸ್ತಾನಿ ಕಲಾಕಾರರನ್ನು ಬ್ಯಾನ್ ಮಾಡಿದೆ. ಈ ಸಂಬಂಧ ಮಾತನಾಡಿದ ಫವಾದ್ ಖಾನ್ , ಬಾಲಿವುಡ್ ಯಾರ ಅಪ್ಪನದ್ದು ಅಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾನಂತೆ. ಇದನ್ನು ಐಎಂಪಿಪಿಎ ಅಧ್ಯಕ್ಷ, ನಿರ್ದೇಶಕ ಅಗರ್ವಾಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬಾಲಿವುಡ್ ಮಂದಿಯಿಂದ ನನ್ನ ಕಿವಿಗೆ ಈ ಸುದ್ದಿ ಬಂದಿದೆ. ನನ್ನ ವಿರುದ್ಧ ಫವಾದ್ ಈ ರೀತಿ ಮಾತನಾಡಿದ್ದಾನೆ. ಆದ್ರೆ ನಿರ್ಣಯ ತೆಗೆದುಕೊಂಡಿದ್ದು ನಾನೊಬ್ಬನೇ ಅಲ್ಲ ಎಂದಿದ್ದಾರೆ ಅಗರ್ವಾಲ್.

Comments are closed.