ಅಂತರಾಷ್ಟ್ರೀಯ

ಅಂಗಡಿಯಲ್ಲಿದ್ದ 10 ಹೊಸ ಲ್ಯಾಪ್‍ಟಾಪ್‍, ಐಫೋನ್‍ ಒಡೆದುಹಾಕಿದ ಗ್ರಾಹಕ

Pinterest LinkedIn Tumblr

iphone

ಪ್ಯಾರಿಸ್: ದುಬಾರಿ ಐಫೋನ್‍ಗಳನ್ನ ಕಟ್ಟಡದಿಂದ ಕೆಳಗೆ ಬೀಳಿಸೋದು, ಬೆಂಕಿಯಲ್ಲಿ ಹಾಕಿ ಸುಡುವುದು ಹೀಗೆ ಅನೇಕ ಪ್ರಯೋಗಗಳನ್ನ ಮಾಡಿರೋ ಬಗ್ಗೆ ಕೇಳಿರ್ತೀರ. ಅದ್ರೆ ಫ್ರಾನ್ಸ್ ನಲ್ಲಿ ಗ್ರಾಹಕನೊಬ್ಬ ಐಫೋನ್ ಶೋರೂಮ್‍ಗೆ ನುಗ್ಗಿ ಸಿಬ್ಬಂದಿ ಮುಂದೆಯೇ ಹೊಚ್ಚ ಹೊಸ ದುಬಾರಿ ಐಫೋನ್ ಹಾಗೂ ಲ್ಯಾಪ್‍ಟಾಪ್‍ಗಳನ್ನ ಒಡೆದುಹಾಕಿದ್ದಾನೆ.

ಫ್ರಾನ್ಸ್ ನ ಡೀಜೋನ್‍ನಲ್ಲಿ ಈ ಘಟನೆ ನಡೆದಿದೆ. ಕೋಪಗೊಂಡಿದ್ದ ಗ್ರಾಹಕನೊಬ್ಬ 10 ಕ್ಕೂ ಹೆಚ್ಚು ಐಫೋನ್ ಹಾಗೂ ಮ್ಯಾಕ್ ಬುಕ್ ಏರ್ ಲ್ಯಾಪ್‍ಟಾಪ್‍ಗಳನ್ನ ನಜ್ಜುಗುಜ್ಜು ಮಾಡಿದ್ದಾನೆ. ಈ ವೇಳೆ ಆತ ಗ್ರಹಕರ ಹಕ್ಕು ಹಾಗೂ ಹಣ ಮರುಪಾವತಿ ಬಗ್ಗೆ ಆರೋಪ ಮಾಡುತ್ತಲೇ ಐಫೋನ್‍ಗಳನ್ನ ಒಂದೊಂದಾಗಿ ಒಡೆದುಹಾಕಿದ್ದಾನೆ.

“ಮಹನೀಯರೇ ಮಹಿಳೆಯರೇ, ಆಪಲ್ ಕಂಪನಿ ಯುರೋಪಿನ ಗ್ರಾಹಕರ ಹಕ್ಕನ್ನು ಉಲ್ಲಂಘಿಸಿದೆ. ನಾನು ಹಣ ವಾಪಸ್ ಕೊಡಲು ಕೇಳಿದೆ. ಅವರು ಇಲ್ಲ ಎಂದರು. ಈಗ ಏನಾಗುತ್ತೆ ನೋಡಿ” ಅಂತ ಆತ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Comments are closed.