ನವದೆಹಲಿ (ಅ.02): ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಡೆಸಿರುವ ಸರ್ಜಿಕಲ್ ದಾಳಿಯು ವಿಶ್ವಸಂಸ್ಥೆಯ ‘ಭಾರತ-ಪಾಕಿಸ್ತಾನ ಸೇನಾ ವೀಕ್ಷಕ ಸಮಿತಿ’ಯ ನೇರ ಗಮನಕ್ಕೆ ಬಂದಿಲ್ಲವೆಂದು ವಿಶ್ವಸಂಸ್ಥೆಯು ಹೇಳಿದೆ.
ಆದರೆ ಭಾರತವು ವಿಶ್ವಸಂಸ್ಥೆಯ ಹೇಳಿಕೆಯನ್ನು ತಳ್ಳಿಹಾಕಿದೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ವಿಶ್ವಸಂಸ್ಥೆ ಮಹಾ-ಕಾರ್ಯದರ್ಶಿಯವರ ವಕ್ತಾರ ಸ್ಟಿಫನ್ ಡುಜಾರ್ರಿಕ್, ಗಡಿ ನಿಯಂತ್ರಣ ರೇಖೆ ಬಳಿ ದಾಳಿ ನಡೆದಿರುವುದು ವೀಕ್ಷಕ ಸಮಿತಿಯ ಗಮನಕ್ಕೆ ಬಂದಿಲ್ಲವೆಂದು ಹೇಳಿದ್ದಾರೆ.
ಅವರ ಗಮನಕ್ಕೆ ಬಂದಿರಲಿ ಅಥವಾ ಇಲ್ಲದಿರಲಿ, ದಾಳಿ ನಡೆದಿರುವುದು ವಾಸ್ತವ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.