ದೆಹಲಿ : ದೇಶದ ಟೆಲಿಕಾಂ ವಲಯದಲ್ಲಿ ಹೊಸ ಸಂಚಲವನ್ನು ಹುಟ್ಟಿಸಿ, ಆರಂಭಿಕ ಕೊಡುಗೆಯಾಗಿ ಉಚಿತ 4G ಡೇಟಾ ಹಾಗೂ ಉಚಿತ ಕರೆ ಸೇವೆಯನ್ನು ಗ್ರಾಹಕರಿಗೆ ನೀಡಿದ ರಿಲಯನ್ಸ್‌ಮಾಲೀಕತ್ವದ ಜಿಯೋದೊಂದಿಗೆ ಇತರ ಎಲ್ಲಾ ಟೆಲಿಕಾಂ ಕಂಪನಿಗಳು ಸಮರಕ್ಕೆ ನಿಂತಿವೆ.
ಆದರೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಿದ್ದಿಗೆ ಬಿದ್ದ ಬಿಎಸ್ಎನ್ಎಲ್ ಗ್ರಾಹಕರಿಗೆ ಉಚಿತ ಕೊಡುಗೆಗಳ ಸುರಿಮಳೆಯನ್ನು ಸುರಿಸಿದೆ.
ಬಿಎಸ್‌ಎನ್‌ಎಲ್‌ದರ ಸಮರಕ್ಕೆ ಸಜ್ಜಾಗಿದ್ದು, ಗ್ರಾಹಕರಿಗೆ ಬಂಪರ್‌ಆಫರ್ ನೀಡಿದೆ. ಜಿಯೋ ಮಾದರಿಯಲ್ಲ ಉಚಿತ ಕಾಲ್‌ಮತ್ತು ಉಚಿತ ಡಾಟಾ ಸೇವೆಯನ್ನು ನೀಡಲು ಮುಂದಾಗಿದೆ. ಬಿಬಿಜಿ ಕಾಂಬಿ ಪ್ಲಾನ್ ಘೋಷಿಸಿರುವ ಬಿಎಸ್ಎನ್ಎಲ್ ಡೇಟಾ ಮತ್ತು ಕರೆಯ ಬಳಕೆಗೆ ಯಾವುದೇ ಮಿತಿಯನ್ನು ವಿಧಿಸಿಲ್ಲ.
1,199 ರೂ. ಬೆಲೆಗೆ ಲಭ್ಯವಿರುವ ಬಿಬಿಜಿ ಕಾಂಬೋ ಪ್ಲಾನ್‌ಅಡಿ ಬಿಎಸ್‌ಎನ್‌ಎಲ್‌ಗ್ರಾಹಕರು 24 ತಾಸುಗಳ ಅನ್‌ಲಿಮಿಟೆಡ್‌ಡಾಟಾ ಮತ್ತು ಫ್ರೀ ಕಾಲ್(ಲೋಕಲ್+ ಎಸ್‌ಟಿಡಿ) ಸೌಕರ್ಯವನ್ನು ಪಡೆಯಬಹುದು. ಭಾರತದಲ್ಲಿರುವ ಎಲ್ಲಾ ನೆಟ್ ವರ್ಕ್ ಗಳಿಗೂ ಸಂಪರ್ಕ ಸಾಧಿಸಬಹುದು.