ಮುಂಬೈ: ರಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಹೆಮ್ಮೆಯ ಪುತ್ರಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಮಾಡಿರುವ ಮಹತ್ವದ ಸಾಧನೆ ಬಗ್ಗೆ ಲಘುವಾಗಿ ಮಾತನಾಡಿರುವ ಪಾಕಿಸ್ತಾನ ಮಾಧ್ಯಮಕ್ಕೆ ಬಾಲಿವುಡ್ ಸಾಮ್ರಾಟ ಅಮಿತಾಭ್ ಬಚ್ಚನ್ ಜಾಡಿಸಿದ್ದಾರೆ.
“ಭಾರತ ರಿಯೊ ಒಲಿಂಪಿಕ್ಸ್ಗೆ 119 ಸ್ಪರ್ಧಿಗಳನ್ನು ಕಳುಹಿಸಿತ್ತು. ಅವರಲ್ಲಿ ಪದಕ ಗೆದ್ದಿದ್ದು ಒಬ್ಬರು ಮಾತ್ರ. ಅದು ಕೂಡ ಕಂಚು. ಒಂದು ವೇಳೆ ಭಾರತ 20 ಚಿನ್ನದ ಪದಕಗಳನ್ನು ಗೆದ್ದಿದ್ದರೆ ಇನ್ನೆಷ್ಟು ಮಟ್ಟಿಗೆ ಮೆರೆಯುತಿತ್ತೋ” ಎಂದು ಪಾಕಿಸ್ತಾನದ ಪತ್ರಕರ್ತ ಒಮರ್ ಖುರೇಷಿ ಟ್ವೀಟ್ನಲ್ಲಿ ಲಘುವಾಗಿ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗಿವೆ.
ಪಾಕ್ ಪತ್ರಕರ್ತನ ಉದ್ದಟತನಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಬಚ್ಚನ್ “ನನಗೆ (ಭಾರತೀಯರಿಗೆ) ಆ ಗೆಲುವು 1000 ಪದಕಗಳಿಗೆ ಸಮ. ಅದು ಕೂಡ ಸಾಕ್ಷಿಯ ಸಾಧನೆಗೆ ನಿಲುಕುವುದಿಲ್ಲ. ಮೇಲಾಗಿ ಆಕೆ ಭಾರತೀಯ ಕ್ರೀಡಾಪಟು ಮತ್ತು ಮಹಿಳೆ ಎಂಬುದು ನಮಗೆ ಹೆಮ್ಮೆ” ಎಂದು ತಿರುಗೇಟು ನೀಡಿದ್ದಾರೆ. ಅನೇಕ ವಿಚಾರವಾದಿಗಳೂ ಕೂಡ ಪಾಕ್ ಮಾಧ್ಯಮದ ದರ್ಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವೇನೋ ಒಂದೆರಡು ಪದಕ ಗೆದ್ದು ಸಾಧನೆ ಮಾಡಿದ್ದೇವೆ. ಆದರೆ ಭಯೋತ್ಪಾದನೆ ಮತ್ತು ಹಿಂಸಾಚಾರವೇ ನಿಮ್ಮ ಅತಿದೊಡ್ಡ ಸಾಧನೆ” ಎಂದು ಜಾಡಿಸಿದ್ದಾರೆ.
Comments are closed.