ಕಾನ್ಪುರ: ಅಣ್ಣ-ತಂಗಿ ಹಬ್ಬವಾದ ರಕ್ಷಾಬಂಧನ ಉತ್ಸವ ಈ ವರ್ಷ ಆಗಸ್ಟ್ 18ರಂದು ಬಂದಿದ್ದು, ರಾಖಿಗಳ ಮಾರಾಟ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ. ಇದು ಸಹೋದರ – ಸಹೋದರಿಯರ ಸಡಗರ, ಹಾಗೂ ಖುಷಿಯ ಹಬ್ಬ.
ಮಹಿಳೆಯರು ಮತ್ತು ಹುಡುಗಿಯರು ರಾಖಿಗಳನ್ನು ಖರೀದಿಸಲು ಮಾರುಕಟ್ಟೆಗಳಿಗೆ ಮುಗಿ ಬೀಳುತ್ತಿದ್ದಾರೆ. ಉತ್ತರ ಪ್ರದೇಶದ ಗೋರಖ್ಪುರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರಗಳಿರುವ ರಾಖಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ ಎಂದು ವರದಿ ಬಂದಿದೆ.
ವೈವಿಧ್ಯಮಯ ಬಣ್ಣಗಳ ರಾಖಿಗಳನ್ನು ಖರೀಸಲು ಜನ ಮುಗಿಬೀಳುವುದು ವಿಶೇಷವಲ್ಲ. ಆದರೆ ಪ್ರಧಾನಿಯ ಚಿತ್ರವುಳ್ಳ ರಾಖಿಗಳಿಗೆ ಭಾರಿ ಬೇಡಿಕೆ ಬಂದಿರುವುದು ವಿಶೇಷ ಎಂದು ನಗರದ ವ್ಯಾಪಾರಿಗಳು ಹೇಳುತ್ತಿದ್ದಾರೆ.
Comments are closed.