ಹೈದರಾಬಾದ್: ಬಸ್ಸಿನಲ್ಲಿ, ಎತ್ತಿನ ಗಾಡಿಯಲ್ಲಿ ಹೆರಿಗೆಯಾದ ಬಗ್ಗೆ ಕೇಳಿದ್ದೀರಿ. ವಿಮಾನ ವಾಯುಮಾರ್ಗವಾಗಿ ಸಾಗುತ್ತಿದ್ದಾಗ ಹೆರಿಗೆಯಾದ ಬಗ್ಗೆ ಕೇಳಿದ್ದೀರಾ? ಹೌದು. ದುಬೈಯಿಂದ ಮನಿಲಾಕ್ಕೆ ಹೊರಟಿದ್ದ ವಿಮಾನವೊಂದರಲ್ಲಿ ಮಹಿಳೆಯೊಬ್ಬರು ವಿಮಾನ ಸಾಗುತ್ತಿದ್ದಾಗಲೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಈ ಘಟನೆಯನ್ನು ಅನುಸರಿಸಿ ವಿಮಾನವನ್ನು ಮಾರ್ಗ ಬದಲಿಸಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಇಳಿಸಲಾಯಿತು.
ಸೆಬು ಪೆಸಿಫಿಕ್ ಏರ್ ವಿಮಾನವನ್ನು ಆಗಸ್ಟ್ 14ರಂದು ತುರ್ತು ವೈದ್ಯಕೀಯ ಕಾರಣಕ್ಕಾಗಿ ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
‘ಫಿಲಿಪ್ಪೈನ್ಸ್ ಪ್ರಜೆಯಾಗಿರುವ ಮಹಿಳೆ ವಿಮಾನದಲ್ಲೇ ಮಗುವಿನ ಜನ್ಮ ನೀಡಿದ್ದಾರೆ. ತುರ್ತು ವೈದ್ಯಕೀಯ ಸೇವೆಗಾಗಿ ವಿಮಾನವನ್ನು ಮಾರ್ಗ ಬದಲಿಸಿ ಹೈದರಾಬಾದಿನಲ್ಲಿ ಇಳಿಸಲಾಯಿತು ಎಂದು ಮೂಲಗಳು ಹೇಳಿದವು.
Comments are closed.