ಕರಾವಳಿ

ಸಂವಹನ ತಂತ್ರಜನ ರಫ್ತಿನಲ್ಲಿ ಭಾರತ ಕಳೆದ ವರ್ಷಕ್ಕಿಂತ 14 ಸ್ಥಾನಗಳ ಏರಿಕೆ.

Pinterest LinkedIn Tumblr

world_no_india

ವಿಶ್ವಸಂಸ್ಥೆ, ಆ.17: ಮಾಹಿತಿ ಮತ್ತು ಸಂವಹನ ತಂತ್ರಜನ ರಫ್ತಿನಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಇತ್ತೀಚೆಗೆ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(ಡಬ್ಲ್ಟುಐಪಿಒ) ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಸಹಭಾಗಿತ್ವದೊಂದಿಗೆ ಜಿನಿವಾದಲ್ಲಿ ಬಿಡುಗಡೆ ಮಾಡಿದ ಇತ್ತೀಚಿನ ಗ್ಲೋಬಲ್ ಇನೋವೇಷನ್ ಸೂಚ್ಯಂಕ(ಜಿಐಐ)ದಲ್ಲಿ ಭಾರತ ಈ ವರ್ಷ ಮಾಹಿತಿ, ಸಂವಹನ ತಂತ್ರಜನ ರಫ್ತಿನಲ್ಲಿ ಕಳೆದ ವರ್ಷಕ್ಕಿಂತ 14 ಸ್ಥಾನಗಳ ಏರಿಕೆ ಕಂಡು 61ನೇ ಸ್ಥಾನಕ್ಕೇರಿದೆ. ಕಳೆದ ವರ್ಷ 85ನೆ ಸ್ಥಾನದಲ್ಲಿತ್ತು.

ವಿಜನ ಮತ್ತು ಎಂಜಿನಿಯರಿಂಗ್ನಲ್ಲಿ ಪದವೀಧರರನ್ನು ತಯಾರು ಮಾಡುವಲ್ಲಿ ಭಾರತ ವಿಶ್ವದಲ್ಲಿ 8ನೆ ಸ್ಥಾನದಲ್ಲಿದ್ದು, ಮಾನವ ಸಂಪನ್ಮೂಲ ಮತ್ತು ಸಂಶೋಧನೆಯಲ್ಲಿ ವಿಶ್ವದಲ್ಲಿ 63ನೆ ಸ್ಥಾನಕ್ಕೇರಿ ಮಹತ್ವದ ಸಾಧನೆ ಮಾಡಿದೆ.

ಡಬ್ಲ್ಯುಐಪಿಒ, ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದ್ದು, ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಇನ್ಸಿಯಾಡ್(ಅಂತಾರಾಷ್ಟ್ರೀಯ ಬ್ಯುಸಿನೆಸ್ ಸ್ಕೂಲ) ಜೊತೆ 9ನೆ ಸೂಚ್ಯಂಕವನ್ನು ತಯಾರು ಮಾಡಲು ಕೆಲಸ ಮಾಡಿದೆ.

ಭಾರತದ ಮಿತವ್ಯಯ ಮತ್ತು ಸಂರಕ್ಷಣೆ ಜಗತಿಕ ಮಾರುಕಟ್ಟೆಯನ್ನು ಹಿಡಿಯಲು ಸಹಾಯವಾಗುತ್ತದೆ. ಇದಕ್ಕಾಗಿ ಭಾರತೀಯ ಕೈಗಾರಿಕೆಗಳು ಗ್ರಾಹಕರನ್ನು ಸೆಳೆಯಲು ಅವರ ಬೇಡಿಕೆಗಳನ್ನು ಈಡೇರಿಸಬೇಕು, ಅದರ ನೀತಿ-ನಿಯಮಗಳು ಪಾರದರ್ಶಕವಾಗಿರ ಬೇಕು.

ಸಂಶೋಧನೆ ಬಗ್ಗೆ ಭಾರತದ ಬದ್ಧತೆ, ಸುಧಾರಿತ ನಾವೀನ್ಯತೆ ಗಟ್ಟಿಯಾಗಿದ್ದು ಬೆಳವಣಿಗೆ ಹೊಂದುತ್ತಿದೆ. ಸಂಶೋಧನೆ ಪರಿಸರಕ್ಕೆ ಇದು ಸಹಕಾರಿಯಾಗಿದೆ ಎಂದು ಸಿಐಐ ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆಂದು ಡಬ್ಲ್ಯುಐಪಿಒ ಉಲ್ಲೇಖಿಸಿದೆ.

Comments are closed.