ಕರಾವಳಿ

ತಂದೆ ಮಾಡಿದ ತಪ್ಪಿನಿಂದ ದೃಷ್ಠಿಕಳಕೊಂಡ ನತದೃಷ್ಠ ಮಕ್ಕಳು

Pinterest LinkedIn Tumblr

shiva_mogga_nagados

ಶಿವಮೊಗ್ಗ ಆಗಸ್ಟ್ 17 : ಗಂಡ ಹಾವುಗಳನ್ನು ಹೊಡೆದು ಸಾಯಿಸುತ್ತಿದ್ದರಿಂದ ಹಾವಿನ ದೋಷಕ್ಕೊಳಗಾಗಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ದೃಷ್ಟಿ ದೋಷಕ್ಕೊಳಗಾದ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಸಾಗರ ಪಟ್ಟಣದ ಶಿವಪ್ಪ ನಾಯಕ ನಗರದ ಅಯಿಷಾ, ಮತ್ತವರ ಮಕ್ಕಳಾದ ಅಸ್ಮಾ, ರುಹಾನ ಹುಟ್ಟತ್ತಲೇ ಸುಂದರವಾದ ಕಣ್ಣುಗಳಿದ್ದರೂ ಕಾಲ ಕ್ರಮೇಣ ಕಣ್ಣುಗಳಿಗೆ ಪೊರೆ ಅವರಿಸಿ ಸಂಪೂರ್ಣ ಅಂಧರಾಗಿದ್ದಾರೆ.

ಅಯಿಷಾ ಮೂಲತಃ ಕೇರಳದವರಾಗಿದ್ದು ಶಿವಮೊಗ್ಗದ ಅಜೀಜ್ ಸಾಬ್ ಎಂಬುವವರನ್ನು ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದರು. ಆದ್ರೆ ಗಂಡ ಅಜೀಜ್ ಸಾಬ್ ನಾಗರ ಹಾವು , ಕೆರೆಹಾವು, ಹಸಿರು ಹಾವು ಸೇರಿದಂತೆ ಸಿಕ್ಕ ಸಿಕ್ಕ ಎಲ್ಲಾ ಹಾವುಗಳನ್ನು ಹಿಡಿದು, ನಂತರ ಅವುಗಳ ಕಣ್ಣು ಕೀಳುವುದು, ಚರ್ಮ ಸುಲಿಯುವುದು, ಹಗ್ಗ ತಿರುಗಿಸಿದಂತೆ ತಿರುಗಿಸುವುದು ಮಾಡಿ ವಿಕೃತವಾಗಿ ಸಾಯಿಸುತ್ತಿದ್ದ.

ಇನ್ನು ಈತ ಪತ್ನಿಯನ್ನು ತೊರೆದ ನಂತರ ಅಯಿಷಾ ಮಕ್ಕಳೊಂದಿಗೆ ಸಾಗರದಲ್ಲಿ ಬಂದು ನೆಲೆಸಿದ್ದರು. ಆದ್ರೆ ಈ ಹೆಣ್ಣು ಮಕ್ಕಳಿಬ್ಬರು 7ನೇ ತರಗತಿ ಓದುವವರೆಗೂ ಕಣ್ಣುಗಳು ಚೆನ್ನಾಗಿಯೇ ಇದ್ದವು.

ನಂತರ ಇದ್ದಕ್ಕಿದಂತೆ ಒಂದೊಂದೇ ಕಣ್ಣುಗಳಿಗೆ ಪೊರೆ ಅವರಿಸಿ ಸಂಪೂರ್ಣವಾಗಿ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಇದೀಗ ತಾಯಿ ಅಯಿಷಾಳ ಒಂದು ಕಣ್ಣು ಕೂಡ ಪೊರೆ ಅವರಿಸಿ ಅಂಧತ್ವ ಅವರಿಸಿದ್ದು , ಇನ್ನೊಂದು ಕಣ್ಣಿಗೂ ಪೊರೆ ಆವರಿಸುತ್ತಿದೆ. ಅಜೀಜ್ ಸಾಬ್ ಹಾವುಗಳನ್ನು ಹಿಂಸಿಸಿ ಕೊಂದದ್ದೇ ಸರ್ಪ ದೋಷವುಂಟಾಗಲು ಕಾರಣ ಎಂದು ಕುಟುಂಬದವರು ನಂಬಿದ್ದಾರೆ.

ವೈದ್ಯರು ಏನಂತಾರೆ?: ಕಣ್ಣುಗಳು ಈ ರೀತಿಯಲ್ಲಿ ದೃಷ್ಟಿಹೀನರಾಗಲು ನರಗಳ ದೋಷವೇ ಮುಖ್ಯ ಕಾರಣವಿರಬಹುದು ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ, ಬಡತನದಿಂದ ಬಾಧೆ ಪಡುತ್ತಿರುವ ಈ ಕುಟುಂಬಕ್ಕೆ ಕಣ್ಣಿನ ಪೊರೆಯ ಸಮಸ್ಯೆ ದೊಡ್ಡ ಆಘಾತ ತಂದಿದೆ. ಅನೇಕ ಆಸ್ಪತ್ರೆ, ಮಸೀದಿ, ಮಂದಿರಗಳಿಗೆ ಹೋಗಿರುವ ಇವರಿಗೆ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ.

Comments are closed.