ಅಂತರಾಷ್ಟ್ರೀಯ

ಒಲಿಂಪಿಕ್ಸ್’ನಲ್ಲಿ ಗೆದ್ದಿದ್ದು ಬೆಳ್ಳಿ, ಜೊತೆಗೆ ಸಿಕ್ಕಿದ್ದು ವಜ್ರ !!! ಏನಿದು ಎಂಬುದು ಮುಂದಿದೆ ….

Pinterest LinkedIn Tumblr

32

ರಿಯೊ ಡಿ ಜನೈರೊ: ಒಲಿಂಪಿಕ್ ಡೈವಿಂಗ್ ಪೂಲ್ ನಲ್ಲಿ ಪ್ರೀತಿ ಹುಟ್ಟಿಕೊಂಡಿದೆ. ಚೀನಾ ದೇಶದ ಡೈವರ್ ಹೆ ಜಿ ಮಹಿಳೆಯರ ಮೂರು ಮೀಟರ್ ಸ್ಪ್ರಿಂಗ್ ಬೋರ್ಡ್ ಡೈವಿಂಗ್ ಅಂತಿಮ ಪಂದ್ಯದಲ್ಲಿ ನಿನ್ನೆ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದರೆ ಅವರಿಗೆ ಅದಕ್ಕಿಂತಲೂ ದೊಡ್ಡದಾದ ಬಹುಮಾನ ಕಾದಿತ್ತು, ಅದು ಎಂಗೇಜ್ ಮೆಂಟ್ ರಿಂಗ್.

ಪದಕ ಸ್ವೀಕರಿಸಿ ಬಂದ ಹೆ ಜಿ ಕೊಳವೆ ಸಮೀಪ ಬರುತ್ತಿದ್ದಂತೆ ಆಕೆಯ ಬಾಯ್ ಫ್ರೆಂಡ್ ಸಹ ಈಜುಗಾರ ಚೀನಾದ ಕಿನ್ ಕೈ ಆಕೆಗೆ ಮದುವೆ ಪ್ರಸ್ತಾಪ ಮುಂದಿಟ್ಟು ಅಚ್ಚರಿಗೊಳಿಸಿದ. ಗಂಭೀರನಾದ ಕಿನ್ ಮಂಡಿಯೂರಿ ಕುಳಿತು ಆಕೆಯ ಮುಂದೆ ಮದುವೆ ಪ್ರಸ್ತಾಪ ಮಾಡಿ ಉಂಗುರದ ಬಾಕ್ಸನ್ನು ತೆರೆದನು.

ಕಿನ್ ರಿಂಗ್ ತೆಗೆಯುತ್ತಿದ್ದಂತೆ ಹೆ ಜಿ ಯಸ್ ಎಂದು ತಲೆಯಾಡಿಸಿಬಿಟ್ಟಳು. ಕಿನ್ ಬಾಕ್ಸ್ ನೊಳಗೆ ಗುಲಾಬಿ ಹೂವಿನಿಂದ ಅಲಂಕರಿಸಿದ ಉಂಗುರವನ್ನು ಅವಳ ಕೈ ಸಮೀಪ ತಂದ, ಆಕೆ ನಾಚಿ ನೀರಾದಳು.

ಅಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಖುಷಿಯಿಂದ ಚಪ್ಪಾಳೆ ತಟ್ಟಿ ತಮ್ಮ ಸಹಮತ ಸೂಚಿಸಿದರು. ಕಿನ್ ಕೈಯ ಇತರ ಡೈವರ್ ಗಳು ಒಂದು ಕ್ಷಣ ಅವಕ್ಕಾಗಿ ನಿಂತು ಏನು ನಡೆಯುತ್ತಿದೆ ಎಂದು ನೋಡಿದರು.

ಡೈವಿಂಗ್ ಸ್ಪರ್ಧೆಯಲ್ಲಿ 12ನೇ ಮತ್ತು ಕೊನೆಯ ಸ್ಥಾನ ಗಳಿಸಿದ ಸಹ ಸ್ಪರ್ಧಿ ಅಮೆರಿಕದ ಅಬ್ಬಿ ಜಾನ್ಟ್ಸನ್, ಅವರಿಬ್ಬರು ಮದುವೆಯಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.
ಈ ಸಂಗಾತಿ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು.

Comments are closed.