ಪ್ರಮುಖ ವರದಿಗಳು

2 ವಾರದ ಬಳಿಕ ಇಲ್ಲಿ ಪೆಟ್ರೋಲ್ ಸಿಗಲ್ಲಾ…..ಏಕೆ ಗೊತ್ತಾ..? ಮುಂದೆ ಓದಿ…

Pinterest LinkedIn Tumblr

petrol

ತಿರುವನಂತಪುರ: ಕೇರಳದ ಮೋಟಾರು ವಾಹನ ಇಲಾಖೆ 2 ವಾರ ವಿನಾಯಿತಿ ನೀಡಿದ್ದು ಅನಂತರ ಹೆಲ್ಮೆಟ್ ಬಳಸದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ನೀಡದಿರಲು ನಿರ್ಧರಿಸಿದೆ.

ಈ ಸಂಬಂಧ ರಾಜ್ಯದ ಎಲ್ಲ ಪೆಟ್ರೋಲ್ ಬಂಕ್’ಗಳಿಗೆ ಸುತ್ತೋಲೆ ಕೂಡ ನೀಡಿದ್ದು, ಹೆಲ್ಮೆಟ್ ಹಾಕಿರದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ನೀಡಬಾರದೆಂದು ಕಡ್ಡಾಯ ಆದೇಶ ಹೊರಡಿಸಿದೆ.

ಈ ವಿನಾಯಿತಿ ಅವಧಿಯ 15 ದಿನದಲ್ಲಿ ದಂಡ ಹಾಗೂ ಎಚ್ಚರಿಕೆ ನೀಡಲಾಗುತ್ತದೆ. ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಎ.ಕೆ.ಸಶೀಂದ್ರನ್ ತಿಳಿಸಿದ್ದಾರೆ.

Comments are closed.