ಕರ್ನಾಟಕ

ಒಂದು ಕಾಲದಲ್ಲಿ ಸಿನಿಮಾ ಹೀರೋ ಆಗಿದ್ದ ರಾಕೇಶ್‌ ಸಿದ್ದರಾಮಯ್ಯ ! ಸಿನಿಮಾ ಸಹವಾಸದಿಂದ ಹಿಂದೆ ಸರಿದದ್ದೇಕೆ ಗೊತ್ತಾ..?

Pinterest LinkedIn Tumblr

rakesh siddaramayya

ಬೆಂಗಳೂರು: ರಾಕೇಶ್‌ಸಿದ್ದರಾಮಯ್ಯಗೆ ಚಿತ್ರರಂಗದ ನಂಟು ಕೂಡ ಇತ್ತು. ತುಂಬಾ ವರ್ಷಗಳ ಹಿಂದೆಯೇ ನಾಯಕ ನಟನಾಗಿ ಅವರು ಬೆಳ್ಳಿತೆರೆಗೆ ಎಂಟ್ರಿ ಆಗಿದ್ದರು. ನಿರ್ಮಾಪಕಿ ಅನಿತಾ ಸುಬ್ರಮಣ್ಯ ನಿರ್ಮಿಸಿದ್ದ ‘ನನಗೆ ನೀನು, ನಿನಗೆ ನಾನು’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು.

ನಿರ್ಮಾಪಕಿ ಅನಿತಾ ಅವರ ಪತಿ ಸುಬ್ರಹ್ಮಣ್ಯ ಈ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತಂದಿದ್ದರು. ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಸಾಕಷ್ಟುನಿರೀಕ್ಷೆ ಇತ್ತಾದರೂ, ಅದು ಟಾಕೀಸಿಗೆ ಬಂದಾಗ ಪ್ರೇಕ್ಷಕರಿಂದ ಸಿಕ್ಕಿದ್ದು ನೀರಸ ಪ್ರತಿಕ್ರಿಯೆ. ವಿಶೇಷವೆಂದರೆ, ಮೊದಲ ಪ್ರದರ್ಶನದಲ್ಲಿಯೇ ಚಿತ್ರವನ್ನು ವೀಕ್ಷಿಸಿದ್ದ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದರಂತೆ. ‘ಸಿನಿಮಾ ಸಹವಾಸ ಸಾಕು, ನಿನಗೆ ನಟನೆ ಬರೋದಿಲ್ಲ’ ಎಂದಿದ್ದರಂತೆ. ಹೀಗಾಗಿ ರಾಕೇಶ್‌ಸಿದ್ದರಾಮಯ್ಯ ಅವರ ಬಣ್ಣದ ಜಗತ್ತಿನ ನಂಟು ಒಂದೇ ಚಿತ್ರಕ್ಕೆ ಕೊನೆ ಆಗಿತ್ತು.

Comments are closed.