https://youtu.be/BogNzQrkqnk
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ನಟನೆಯ ಬಹುನಿರೀಕ್ಷಿತ ಜಾಗ್ವರ್ ಚಿತ್ರದ ತೆಲುಗು ಟೀಸರ್ ರಿಲೀಸ್ ಆಗಿದೆ.
ಎ.ಮಹೇದೇವ್ ನಿರ್ದೇಶನದಲ್ಲಿ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಚಿತ್ರದ ಟೀಸರ್ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಇನ್ನೆನು ಕೆಲವೇ ಗಂಟೆಯಲ್ಲಿ ಕನ್ನಡದಲ್ಲಿಯೂ ಸಹ ಟೀಸರ್ ರಿವೀಲ್ ಆಗಲಿದೆ.
ಟೀಸರ್‍ನಲ್ಲಿ ಸಖತ್ ಸ್ಟೈಲಿಶ್ ಲುಕ್‍ನಲ್ಲಿ ನಿಖಿಲ್ ಕಾಣಿಸಿಕೊಂಡಿದ್ದು, ಆಕ್ಷನ್ ದೃಶ್ಯಗಳಲ್ಲಿ ಸೂಪರ್ ಡೈಲಾಗ್ಸ್ ಗಳಲ್ಲಿ ಸಿಕ್ಕಾಪಟ್ಟೆ ಸಾಹಸ ಮಾಡಿದ್ದಾರೆ. ಒಂದು ಬಾರಿ ಸೂಪರ್ ಆಗಿ ಕಾರ್ ರೈಡಿಂಗ್ ಮಾಡಿದ್ದರೆ, ಇನ್ನೊಂದು ಕಡೆ ಬೈಕ್‍ನಲ್ಲಿ ಸ್ಟಂಟ್ ಮಾಡಿ ಮೊದಲ ಸಿನಿಮಾದಲ್ಲಿ ನಿರೀಕ್ಷೆ ಮೂಡಿಸಿದ್ದಾರೆ.
ಚಂದ್ರಾಂಭಿಕ ಕಂಬೈನ್ಸ್‍ನಲ್ಲಿ ಮೂಡಿಬಂದಿರುವ ಹೋಮ್ ಬ್ಯಾನರ್ ಚಿತ್ರಕ್ಕೆ ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ ನಿರ್ಮಾಪಕರಾಗಿದ್ದಾರೆ. ಸದ್ಯ ಟೀಸರ್‍ನಲ್ಲಿ ನಿಖಿಲ್ ಬಿಟ್ಟರೆ ಬೇರೆ ಯಾವ ನಟ ನಟಿಯರು ಕಾಣಿಸಿಕೊಂಡಿಲ್ಲ. ಆದ್ರೂ ಟೀಸರ್ ಅದ್ಧೂರಿಯಾಗಿದೆ.
Comments are closed.