ಮಂಡ್ಯ: ಆಕೆಗೆ ಮದುವೆಯಾಗಿ ಹತ್ತು ವರ್ಷ ಕಳೆದಿತ್ತು. ಆತನಿನ್ನು ಮದುವೆಯಾಗದ ಚಿಗುರು ಮೀಸೆ ಹುಡುಗ. ಅವರಿಬ್ಬರ ನಡುವೆ ಅದೇನಿತ್ತೋ ಏನೋ, ಯಾರಿಗೂ ಏನನ್ನೂ ಹೇಳದೇ ಇಬ್ಬರು ರೈಲಿಗೆ ತಲೆ ಕೊಟ್ಟು ಲೋಕವನ್ನೇ ತೊರೆದಿದ್ದಾರೆ.
ಅನಿತಾ ಮತ್ತು ಸಿದ್ದೇಶ್ ಇಬ್ಬರೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯವರು. 10 ವರ್ಷಗಳ ಹಿಂದೆ ಅನಿತಾಗೆ ತನ್ನ ಸೋದರಮಾವ ರಾಮನಗರದ ನಾರಾಯಣ ಸ್ವಾಮಿ ಜೊತೆ ಮದ್ವೆಯಾಗಿತ್ತು. ದಂಪತಿಗೆ ಒಂದು ಗಂಡು ಇದೆ. ಆದ್ರೆ ಗಂಡ ಹೆಂಡತಿ ನಡುವೆ ಅದೇನಾಯ್ತೋ ಗೊತ್ತಿಲ್ಲ. ಇತ್ತೀಚೆಗೆ ಅನಿತಾ ತನ್ನ ತವರು ಮನೆಗೆ ಬಂದು ಅಲ್ಲೇ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡಿಕೊಂಡಿದ್ರು.
ಆದ್ರೆ ಶನಿವಾರ ಗ್ರಾಮದ ಸಿದ್ದೇಶ್ ಎಂಬ ಯುವಕನ ಜೊತೆ ಮದ್ದೂರಿಗೆ ಬಂದಿದ್ದ ಅನಿತಾ, ರೈಲಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಹರಿದ ರಭಸಕ್ಕೆ ಇಬ್ಬರ ರುಂಡಮುಂಡ ಬೇರ್ಪಟ್ಟಿದೆ. ಆತ್ಮಹತ್ಯೆಗೆ ಇಬ್ಬರ ನಡುವಿನ ಪ್ರೀತಿ ಕಾರಣ ಎಂಬ ಮಾತು ಹರಿದಾಡ್ತಿದೆ.
Comments are closed.