ಕರಾವಳಿ

ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು : ಮೂವರಿಗೆ ಗಾಯ

Pinterest LinkedIn Tumblr

Car_juce_shop_1

ಮಂಗಳೂರು, ಜು.31 : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಜ್ಯೂಸ್ ಅಂಗಡಿಗೆ ನುಗ್ಗಿ ಹಾನಿಯೆಸಗಿದ ಘಟನೆ ಇಂದು ಬೆಳಗ್ಗೆ ನಗರದ ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಅಂಗಡಿ ಹಾನಿಗೊಳಗಾಗಿದ್ದು, ಕಾರು ಚಾಲಕ ಹಾಗೂ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

Car_juce_shop_2 Car_juce_shop_3

ಬಜ್ಪೆ ವಿಮಾನ ನಿಲ್ದಾಣದಿಂದ ಅತೀವೇಗವಾಗಿ ಬರುತ್ತಿದ್ದ ರಿಟ್ಝ್ ಕಾರ್ ಬೆಳಗ್ಗೆ 6:30ರ ಸುಮಾರಿಗೆ ಪಂಜಿಮೊಗರು ಸಮೀಪ ಬರುತ್ತಲೇ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿರುವ ಜ್ಯೂಸ್ ಮ್ಯಾಜಿಕ್ ಅಂಗಡಿಗೆ ನುಗ್ಗಿದೆ. ಈ ವೇಳೆ ಅಂಗಡಿ ಮುಚ್ಚಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಕಾರ್ ರಸ್ತೆ ಬಿಟ್ಟು ಕೆಳಕ್ಕಿಳಿದು ಮೊದಲು ತಂತಿಕಂಬಕ್ಕೆ ಡಿಕ್ಕಿ ಹೊಡೆದಿದ್ದು ತಂತಿಕಂಬ ತುಂಡಾಗಿದೆ. ಅಷ್ಟಕ್ಕೇ ನಿಲ್ಲದ ಕಾರ್ ಮುಂದುವರಿದು ಅಂಗಡಿಗೆ ನುಗ್ಗಿ ನಿಂತಿದೆ.

Car_juce_shop_4

ಜ್ಯೂಸ್ ಅಂಗಡಿ, ಅಯ್ಯಂಗಾರ್ ಬೇಕರಿಗೆ ಹಾನಿಯಾಗಿದ್ದು, ಗಾಯಾಳುವನ್ನು ಸ್ಥಳೀಯರು ಹೊರಕ್ಕೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾಸ್ಥಳಕ್ಕೆ ಕುಳಾಯಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.