ಕರಾವಳಿ

ಖ್ಯಾತ ಹಿನ್ನೆಲೆ ಗಾಯಕಿ ಕುಟುಂಬದಲ್ಲಿ ಬಿರುಕು : ಪತಿ ಬೇಜಾಬ್ದಾರಿ ಮನುಷ್ಯ ಎಂದ ಸುನೀತಾ

Pinterest LinkedIn Tumblr

Singer_Sunitha_Image

ಬೆಂಗಳೂರು : ಖ್ಯಾತ ಹಿನ್ನೆಲೆ ಗಾಯಕಿ ಆಂಧ್ರ ಕೋಗಿಲೆ ಸುನೀತಾ ಅವರ ದಾಂಪತ್ಯ ಜೀವನ ತಾಳತಪ್ಪಿದೆ. ಇದೀಗ ಅವರು ವಿಚ್ಛೇದನದ ನಿರೀಕ್ಷೆಯಲ್ಲಿದ್ದಾರೆ.

ಇಷ್ಟು ದಿನ ಅವರರ್ ದಾಂಪತ್ಯಜೀವನದ ಬಗ್ಗೆ ವದಂತಿಗಳು ಹರಡಿದ್ದವು. ಈ ಬಗ್ಗೆ ಮೌನ ಮುರಿದಿರುವ ಅವರು, ತಾನು ಮತ್ತು ತಮ್ಮ ಪತಿ ಬೇರೆಬೇರೆಯಾಗಿ ವಾಸಿಸುತ್ತಿದ್ದೇವೆ ಎಂದಿದ್ದಾರೆ.

ಬಹಳ ಹಿಂದೆಯೇ ನಾವಿಬ್ಬರೂ ದೂರವಾಗಿದ್ದೇವೆ. ಆದರೆ ಇನ್ನೂ ವಿಚ್ಛೇದನ ಪಡೆದಿಲ್ಲ. ತಮ್ಮ ಪತಿ ವಿಚ್ಛೇದನ ನೀಡಲು ಒಪ್ಪುತ್ತಿಲ್ಲ ಎಂದಿದ್ದಾರೆ ಸುನೀತಾ. ತಮ್ಮ ಪತಿ ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ. ಬೇಜಾಬ್ದಾರಿ ಮನುಷ್ಯ ಎಂದು ದೂರಿದ್ದಾರೆ.

ಮೂವತ್ತೇಳರ ಹರೆಯದಲ್ಲಿರುವ ಸುನೀತಾ ಅವರಿಗೆ ಮದುವೆಯಾಗಿದ್ದು 19ನೇ ವರ್ಷಕ್ಕೆ. ಈಗವರಿಗೆ 17 ವರ್ಷದ ಮಗ ಮತ್ತು 14 ವರ್ಷದ ಮಗಳಿದ್ದಾಳೆ. ವಿಚ್ಛೇದನದ ಬಳಿಕ ಇನ್ನೊಂದು ಮದುವೆಯಾಗುವ ಆಲೋಚನೆ ನನಗಿಲ್ಲ. ಈಗೇನಿದ್ದರೂ ನನ್ನ ಮಕ್ಕಳಿಗೆ ಒಳ್ಳೆಯ ಭವಿಷ್ಯ ನಿರ್ಮಿಸಬೇಕೆಂಬುದಷ್ಟೇ ನನ್ನ ಕೆಲಸ ಎನ್ನುತ್ತಾರವರು.

ಕನ್ನಡದಲ್ಲೂ ಸಾಕಷ್ಟು ಹಾಡುಗಳನ್ನು ಹಾಡಿರುವ ಸುನೀತಾ ಅವರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಚೆಲುವೆಯೆ ನಿನ್ನೇ ನೋಡಲು ಚಿತ್ರಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಫಿಲಂಫೇರ್ ಪ್ರಶಸ್ತಿ, ಮೊದಲಾಸಲ ಚಿತ್ರದ ಹಾಡಿಗೆ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

Comments are closed.