ಉಡುಪಿ: ಉಡುಪಿಯ ಕಾರ್ಕಳದ ನೂರಾಳ್ ಬೆಟ್ಟು ಗ್ರಾಮ ಪುಂಜಾಜೆ ಎಂಬಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕಂಪೌಂಡ್ ಮತ್ತು ಶೀಟು ಹಾಕಿ ನಿರ್ಮಸಿದ ತಾತ್ಕಾಲಿಕ ಬಸ್ ಸ್ಟಾಂಡ್ ಸಮೀಪ ನಕ್ಸಲ್ ಬೆಂಬಲಿತ ಬರಹವಿರುವ ಬ್ಯಾನರ್ ಹಾಗೂ ಫ್ಲಾಗ್ ಪತ್ತೆಯಾಗಿದೆ.
ದಿನಾಂಕ 29/07/2016 ರಂದು ರಾತ್ರಿಯಿಂದ ದಿನಾಂಕ 30/07/2016 ರ ಬೆಳಿಗಿನ ಜಾವದ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಸರ್ಕಾರದಿಂದ ನಿಷೇದಿಸಲ್ಪಟ್ಟ ಸಿಪಿಐ ಮಾವೋವಾದಿ ಸಂಘಟನೆಗೆ ಸೇರಿದ ಅಪರಿಚಿತ ನಕ್ಸಲೀಯರು ನಕ್ಷಲ್ ಬೆಂಬಲಿತ ಬರಹಗಳಿರುವ ಬ್ಯಾನರ್ ಹಾಗೂ ಫ್ಲಾಗ್ ಗಳನ್ನು ಕಟ್ಟಿದ್ದು ಬ್ಯಾನರ್ ನಲ್ಲಿ ಸರ್ಕಾರದ ವಿರುದ್ದವಾಗಿ ಸಾರ್ವಜನಿಕರು ಬಂಡೇಳುವಂತೆ ಹಾಗೂ ನಕ್ಸಲ್ ಗೆ ಬೆಂಬಲ ನೀಡುವಂತೆ ಕರೆಕೊಟ್ಟ ಬರಹಗಳಿದ್ದು, ಸಂಬಂಧಿಸಿದಂತೆ ನಕ್ಷಲ್ ಬೆಂಬಲಿತ ಬರಹಗಳಿರುವ 5 ಬ್ಯಾನರ್ ಗಳು ಮತ್ತು ನಾಲ್ಕು ಪೋಷ್ಟರ್ , ಮೂರು ಬಾವುಟಗಳು ಹಾಗೂ 7 ಮುದ್ರಿತ ಮತ್ತು 7 ಕೈಬರಹದಲ್ಲಿ ಬರೆದ ಒಟ್ಟು 14 ಭಿತ್ತಿಪತ್ರಗಳು ಲಭಿಸಿದ್ದು ಪೊಲಿಸರು ಅದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.