ಹೈದರಾಬಾದ್: ವಿದ್ಯುತ್ ವ್ಯತ್ಯಯದಿಂದಾಗಿ ಒಂದೇ ದಿನ 21ರೋಗಿಗಳು ಸಾವನ್ನಪ್ಪಿದ ಘಟನೆ ತೆಲಂಗಾಣ ಸರ್ಕಾರಿ ಸ್ವಾಮ್ಯದ ಹೈದರಾಬಾದ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಘಟಿಸಿದೆ.
ಆಸ್ಪತ್ರೆಯ ವೈದ್ಯರ ಪ್ರಕಾರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿದ್ಯುತ್ ವ್ಯತ್ಯಯವಾಗಿದೆ. ಆಸ್ಪತ್ರೆಯಲ್ಲಿ ನಾಲ್ಕು ಜನರೇಟರುಗಳಿದ್ದರೂ ವಿದ್ಯುತ್ ವ್ಯತ್ಯಯವಾದ ಸಮಯದಲ್ಲಿ ಅದೂ ಕೂಡ ಕೈಕೊಟ್ಟಿದ್ದರಿಂದ ಸ್ಪೆಷಾಲಿಟಿ ವಾರ್ಡ್ನಲ್ಲಿದ್ದ 21 ರೋಗಿಗಳು ಮೃತರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಆರೋಗ್ಯ ಸಚಿವ ಡಾ.ಸಿ ಲಕ್ಷಾ್ಮ ರೆಡ್ಡಿ ವರದಿಯನ್ನು ಅಲ್ಲಗಳೆದಿದ್ದಾರೆ.
ಗಾಂಧಿ ಸರ್ಕಾರಿ ಆಸ್ಪತ್ರೆಗಳಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯ ಹಂತದಲ್ಲಿರುವ ರೋಗಿಗಳು ದಾಖಲಾಗುತ್ತಾರೆ. ಆದರೆ ರೋಗಿಗಳ ಸಾವಿಗೆ ವಿದ್ಯುತ್ ವ್ಯತ್ಯಯ ಕಾರಣ ಎಂಬ ಮಾತು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
Comments are closed.