ಅಂತರಾಷ್ಟ್ರೀಯ

ಅಮೆರಿಕದ ಇಂಡಿಯಾನಾಪೊಲಿಸ್ ನಗರದಲ್ಲಿರುವ ಹಿಂದು ದೇವಾಲಯಕ್ಕೆ ಮುಸ್ಲಿಂ ಪೊಲೀಸ್ ಪಹರೆ

Pinterest LinkedIn Tumblr

temple america

ವಾಷಿಂಗ್ಟನ್: ಭಾರತದ ಮುಂಬೈ ಮೂಲದ ಪೊಲೀಸ್ ಅಧಿಕಾರಿ ಲೆಫ್ಟಿನೆಂಟ್ ಜಾವೇದ್ ಖಾನ್ ಅವರನ್ನು ಅಮೆರಿಕದ ಇಂಡಿಯಾನಾಪೊಲಿಸ್ ನಗರದಲ್ಲಿರುವ ಹಿಂದು ದೇವಸ್ಥಾನಕ್ಕೆ ಭದ್ರತಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಸಾಮಾಜಿಕ ಭದ್ರತೆ ಕಾಪಾಡಲು ಮತ್ತು ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪೂರ್ವಭಾವಿಯಾಗಿ ಜನಾಂಗೀಯ ಘರ್ಷಣೆ ನಡೆಯದಿರಲಿ ಎಂದು ಭದ್ರತೆ ಏರ್ಪಡಿಸಲಾಗಿದೆ. ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಟೆಕ್ವಾಂಡೋ ಸಮರ ಕಲೆ ಜತೆಗೆ ಕಿಕ್ ಬಾಕ್ಸಿಂಗ್ ಪ್ರವೀಣ ಜಾವೇದ್ ಖಾನ್ 2001 ರಲ್ಲಿ ಇಂಡಿಯಾನಕ್ಕೆ ಬಂದು ನೆಲೆಯೂರಿದರು.

ಹಿಂದು ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿರುವ ಖಾನ್, ತಾನೊಬ್ಬ ಭಾರತೀಯನಾಗಿರುವುದರಿಂದ ಹಿಂದುತ್ವವು ರಕ್ತದಲ್ಲಿದೆ ಎಂದು ಹೇಳಿದ್ದಾರೆ. ಖಾನ್ ಪುತ್ರಿಯ ವಿವಾಹವನ್ನು ಇದೇ ಮಂದಿರದಲ್ಲಿ ನೆರವೇರಿಸಿದ್ದರು. ಆಗಿನಿಂದ ಈ ದೇವಸ್ಥಾನ ಮತ್ತು ಹಿಂದು ಸಂಸ್ಕೃತಿ ಕುರಿತು ಹೆಚ್ಚು ಒಲವು ವ್ಯಕ್ತವಾಯಿತು ಎಂದು ಖಾನ್ ಹೇಳುತ್ತಾರೆ. ದಿನವೂ 400ಕ್ಕೂ ಹೆಚ್ಚು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯಕ್ಕೆ ದೇವರ ದರ್ಶನಕ್ಕಾಗಿ ಹೆಚ್ಚಿನ ಜನ ಆಗಮಿಸುತ್ತಾರೆ ಎಂದು ದೇವಸ್ಥಾನ ಕಮಿಟಿ ಮುಖ್ಯಸ್ಥರು ತಿಳಿಸಿದ್ದಾರೆ.

Comments are closed.