ಅಂತರಾಷ್ಟ್ರೀಯ

ಲೈಂಗಿಕ ಶಕ್ತಿ ಹೆಚ್ಚಿಸಲು ವಯಾಗ್ರ ಬೇಕಿಲ್ಲ….ದಾಳಿಂಬೆ ಹಣ್ಣಿನ ರಸ ಕುಡಿಯಿರಿ, ಮುಂದೆ ಏನಾಗುತ್ತದೆಂದು ನೀವೇ ನೋಡಿರಿ !

Pinterest LinkedIn Tumblr

juice-couple

21 ರಿಂದ 64 ವರ್ಷದ ವರ್ಗದ 58 ಜನರ ಮೇಲೆ ನಡೆಸಿದ ಒಂದು ಅಧ್ಯಯನದ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ದಿನಾಲು ಕುಡಿದರೆ ಮಹಿಳೆ ಮತ್ತು ಪುರುಷರ ಲೈಂಗಿಕ ಶಕ್ತಿ ಹೆಚ್ಚುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್ ವಯಾಗ್ರದ ತರಹ ಕೆಲಸ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.. ದಾಳಿಂಬೆ ಹಣ್ಣಿನ ಜ್ಯೂಸ್ ಶರೀರದಲ್ಲಿ ಹಾರ್ಮೋನ್ ಟೆಸ್ಟಾಸ್ಟೆರಾನ್ ಪ್ರಮಾಣ ಹೆಚ್ಚುತ್ತದೆ. ಪ್ರತಿನಿತ್ಯ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ಶೇ.16ರಿಂದ 30 ರವರೆಗೆ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಲೈಂಗಿಕ ತುಡಿತ ಹೆಚ್ಚಿಸಿಕೊಳ್ಳಬೇಕೆಂದು ನಾನಾ ಕಸರತ್ತು ಮಾಡುತ್ತಿದ್ದರೆ ಅಥವಾ ಯಾವುದೇ ಮಾತ್ರೆಗಳಿಗೆ ಮೊರೆಹೋಗಿದ್ದರೆ, ಅದನ್ನೆಲ್ಲ ಬಿಟ್ಟುಬಿಡಿ, ಪ್ರತಿದಿನ ಹದಿನೈದು ದಿನಗಳ ಕಾಲ ಒಂದು ಗ್ಲಾಸ್ ದಾಳಿಂಬೆ ಹಣ್ಣಿನ ರಸ ಕುಡಿಯಿರಿ, ಮುಂದೆ ಏನಾಗುತ್ತದೆಂದು ನೀವೇ ನೋಡಿರಿ.

ಎಡಿನ್‍ಬರ್ಗ್‍ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ, 15 ದಿನಗಳ ಕಾಲ ಪ್ರತಿದಿನ, ಗಂಡಸು ಅಥವಾ ಹೆಂಗಸರು ರಾತ್ರಿ ಒಂದು ಗ್ಲಾಸ್ ತಾಜಾ ದಾಳಿಂಬೆ ಹಣ್ಣಿನ ರಸ ಹೀರಿದರೆ ಲೈಂಗಿಕ ಆಸಕ್ತಿ ತಾನಾಗಿಯೇ ಹೆಚ್ಚುತ್ತದೆ.

ಈ ದಾಳಿಂಬೆ ರಸ ಪುರುಷ ಮತ್ತು ಮಹಿಳೆಯರಲ್ಲಿ ಕಾಮೋತ್ತೇಜಕವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ, ಮೂಳೆ ಮತ್ತು ಸ್ನಾಯುಗಳನ್ನು ಕೂಡ ಸದೃಢ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ದಾಳಿಂಬೆ ರಸದ ಸೇವನೆಯಿಂದ ಲೈಂಗಿಕ ಆಸಕ್ತಿ ಕುದುರುವುದು ಮಾತ್ರವಲ್ಲದೆ, ಇದು ನೆನಪಿನ ಶಕ್ತಿ ಹೆಚ್ಚಿಸುತ್ತದೆ, ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಕೂಡ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮನಸು ಉಲ್ಲಸಿತವಾಗಿ, ಒತ್ತಡ ಕಡಿಮೆಯಾದರೆ ರಕ್ತದೊತ್ತಡ, ಮಧುಮೇಹ, ಹೃದಯಬೇನೆಯಂತಹ ಅನೇಕ ರೋಗಗಳು ಕೂಡ ಇದನ್ನು ಸೇವಿಸುವವರ ಹತ್ತಿರ ಸುಳಿಯುವುದಿಲ್ಲ. ಒತ್ತಡದ ಜೊತೆಗೆ, ಖಿನ್ನತೆ, ಕೋಪ, ತಪ್ಪಿತಸ್ಥ ಭಾವನೆ, ದುಃಖ ಮುಂತಾದವುಗಳ ಮೇಲೆ ಕಡಿವಾಣ ಬೀಳುತ್ತದೆ. ಇದರಿಂದ ಸಹಜವಾಗಿ ಋಣಾತ್ಮಕ ಚಿಂತನೆಗಳು ದೂರವಾಗಿ ಮನಸು ಉಲ್ಲಸಿತ ವಾಗಿರುತ್ತದೆ. ಇದೇ ಅಲ್ಲವೆ ನಿಜವಾದ ಆರೋಗ್ಯದ ಗುಟ್ಟು?

Comments are closed.