ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಕೊಳವೆ ಬಾವಿಯೊಂದಕ್ಕೆ ಬಿದ್ದ ಮೂರು ವರ್ಷದ ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗೆ ಕೊಳವೆ ಬಾವಿಯಲ್ಲಿ ಹಾವು ಇರುವುದು ಕಂಡು ಬಂದಿದೆ.
ಮೂರು ವರ್ಷದ ಬಾಲಕ ಗ್ವಾಲಿಯರ್ನಲ್ಲಿ ಶುಕ್ರವಾರ ಕೊಳವೆ ಬಾವಿಯೊಂದಕ್ಕೆ ಜಾರಿ ಬಿದ್ದ. ಬಾಲಕ 30ರಿಂದ 35 ಅಡಿ ಆಳದಲ್ಲಿ ಕೊಳವೆ ಬಾವಿಯೊಳಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
ಗಡಿ ಭದ್ರತಾ ಪಡೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡಿದ್ದು, ಕಾರ್ಯಾಚರಣೆ ವೇಳೆ ಕೊಳವೆ ಬಾವಿಯಲ್ಲಿ ಹಾವು ಪತ್ತೆಯಾಗಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ. ಬಾಲಕನ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ಪರ್ಯಾಯ ಸುರಂಗವನ್ನು ತೋಡುತ್ತಿದ್ದಾರೆ.
Comments are closed.