ಅಂತರಾಷ್ಟ್ರೀಯ

12 ಗಂಟೆಗಳಲ್ಲಿ 2 ಮಿಲಿಯನ್ ಜನರಿಂದ ಆನ್ ಲೈನ್ ನಲ್ಲಿ ಕಬಾಲಿ ವೀಕ್ಷಣೆ !

Pinterest LinkedIn Tumblr

kaba

ಚೆನ್ನೈ: ಯಾವುದೇ ಚಿತ್ರ ಬಿಡುಗಡೆಯಾದ 24 ಗಂಟೆಗಳಲ್ಲಿ ಪೈರಸಿಗೆ ಒಳಗಾಗುವುದು ಸಾಮಾನ್ಯ, ಆದರೆ ಶುಕ್ರವಾರ ಬಿಡುಗಡೆಯಾದ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಚಿತ್ರ ಕಬಾಲಿ ಮೊದಲ ಶೋ ಮುಗಿದ 70 ನಿಮಿಷಗಳಲ್ಲೇ ಪೂರ್ತಿ ಚಿತ್ರ ಆನ್ ಲೈನ್ ನಲ್ಲಿ ಅಪ್ ಲೋಡ್ ಆಗಿದೆ.

ಜುಲೈ 22 ರಂದು ಬೆಳಗ್ಗೆ 4 ಗಂಟೆಗೆ ವಿಮಿಯೋ ವೆಬ್ ಸೈಟ್ ನಲ್ಲಿ ಸಂಪೂರ್ಣವಾಗಿ ಕಬಾಲಿ ಚಿತ್ರ ಇಂಟರ್ನೆಟ್ ನಲ್ಲಿ ಅಪ್ ಲೋಡ್ ಆಗಿದೆ. ವಿಡಿಯೋ ಅಪ್ ಲೋಡ್ ಮಾಡುವುದಕ್ಕೂ ಮುನ್ನ ಕೆಲವೇ ನಿಮಿಷಗಳಲ್ಲಿ ಪೀಟರ್ ಎಂಬ ಹೆಸರಿನಲ್ಲಿ ಅಕೌಂಟ್ ತೆರೆದು ಬೆಳಗ್ಗೆ 5.10ರ ವೇಳೆಗೆ ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಪೀಟರ್ ಮೊದಲು ಕಬಾಲಿ ಚಿತ್ರ ಅಪ್ ಲೋಡ್ ಮಾಡಿದ್ದ. ತಮಿಳುನಾಡಿನ ಪೈರಸಿ ಧೈತ್ಯ Tamilcrockers.com ಕೆಲವೇ ಕ್ಷಣಗಳಲ್ಲಿ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡಿದೆ.

ಮೊದಲ ಶೋ ನೋಡಲು ಟಿಕೆಟ್ ಸಿಗದೇ ನಿರಾಶೆಯಾದವರಿಗೆ ಈ ಪೈರಸಿ ವಿಡಿಯೋ ವರವಾಯ್ತು. ವಿಡಿಯೋ ಲಿಂಕ್ ಎಲ್ಲೆಡೆ ಹರಡಿ ತಮ್ಮ ತಮ್ಮ ಮೊಬೈಲ್ ನಲ್ಲಿ ಕಬಾಲಿ ಚಿತ್ರ ವೀಕ್ಷಣೆ ಮಾಡಿದರು.

ಅಪ್ ಲೋಡ್ ಮಾಡಿದ 12 ಗಂಟೆಗಳಲ್ಲಿ ವಿಮಿಯೋ ಲಿಂಕ್ ಗೆ 1.85 ಮಿಲಿಯನ್ ಜನ ವಿಸಿಟ್ ಮಾಡಿದ್ದಾರೆ. ವಿಡಿಯೋ ಲಿಂಕ್ ವಾಟ್ಸಾಪ್ ನಲ್ಲಿ ಹಲವು ಬಾರಿ ಹರಿದಾಡಿತ್ತು.

ಅಮೆರಿಕ, ಇಂಡೋನೇಷ್ಯಾ, ಮಲೇಷ್ಯಾ, ಚೈನಾ, ಥೈಲ್ಯಾಂಡ್, ಜಪಾನ್ ಮುಂತಾದ ದೇಶಗಳಲ್ಲಿ ಏಕಕಾಲಕ್ಕೆ 10 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಕಬಾಲಿ ಚಿತ್ರ ಲೀಕ್ ಆಗಿದೆ ಎಂಜು ಈಗಾಗಲೇ ನಿರ್ಮಾಪಕ ಎಸ್ ತನು ಮದ್ರಾಸ್ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. ಚಿತ್ರ ಲೀಕ್ ಆಗಿರುವ ಸಂಬಂಧ ಪೈರಸಿ ವಿರೋಧಿ ಸಂಸ್ಥೆಗೆ ದೂರು ನೀಡಿದ್ದು, ಅಪರಾಧಿಗಳನ್ನು ಶೀಘ್ರವೇ ಬಂಧಿಸುವುದಾಗಿ ನಿರ್ಮಾಪಕರ ಆಪ್ತರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮಲೇಶಿಯಾದಲ್ಲಿ ನಡೆದ ಪ್ರೀಮಿಯರ್ ಶೋನಲ್ಲೇ ಕಬಾಲಿ ಚಿತ್ರ ಲೀಕ್ ಆಗಿದೆ ಎಂದುಹೇಳಿರುವ ಅವರು, ತಪ್ಪು ಮಾಡಿದ್ದರೂ ಆ ಸೈಟ್ ಗಳನ್ನು ಇನ್ನೂ ಯಾಕೆ ಬ್ಲಾಕ್ ಮಾಡಿಲ್ಲ ಎಂದು ಅರ್ಥವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Comments are closed.