ಪ್ರಮುಖ ವರದಿಗಳು

38 ಪತ್ನಿಯರು, 89 ಮಕ್ಕಳು, ಅಸಂಖ್ಯಾತ ಮೊಮ್ಮಕ್ಕಳೊಂದಿಗೆ 72ನೇ ಜನ್ಮದಿನ ಆಚರಿಸಿಕೊಂಡ ಯಜಮಾನ

Pinterest LinkedIn Tumblr

wifeee

ಐಜ್ವಾಲ್: 38 ಪತ್ನಿಯರು ಹಾಗೂ 89 ಮಕ್ಕಳು, ಅಸಂಖ್ಯಾತ ಮೊಮ್ಮಕ್ಕಳನ್ನು ಹೊಂದುವ ಮೂಲಕ ವಿಶ್ವದಲ್ಲಿಯೇ ಅತಿದೊಡ್ಡ ಕುಟಂಬ ಎಂಬ ಗೌರವಕ್ಕೆ ಪಾತ್ರರಾಗಿರುವ ಮಿಜೋರಾಂನ ಜ್ಯೋಣ ಚಾನ ಶುಕ್ರವಾರ 72ನೇ ಜನ್ಮದಿನೋತ್ಸವವನ್ನು ಕುಟುಂಬದ ಪ್ರೀತಿಪಾತ್ರರೊಂದಿಗೆ ಆಚರಿಸಿಕೊಂಡರು.

ಹೌದು, ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಇತ್ತೀಚಿನ ದಿನದಲ್ಲಿ ಒಂದೇ ಕುಟುಂಬದಲ್ಲಿ 162 ಜನ ಸದಸ್ಯರನ್ನು ಒಟ್ಟಿಗೆ ಪ್ರೀತಿಯಿಂದ ಕೊಂಡೊಯ್ಯುವ ಮೂಲಕ ಜ್ಯೋಣ ಆದರ್ಶಪ್ರಾಯರಾಗಿದ್ದಾರೆ. ಚಾನ ಪಂಥದ ಜ್ಯೋಣ ಚಾನ ಹಲವು ಧಾರ್ವಿುಕ ಹಾಗೂ ಸಾಮುದಾಯಿಕ ಗೀತೆಗಳ ಗಾಯನ ಹಾಗೂ ನೃತ್ಯ ಪ್ರದರ್ಶನದ ಮೂಲಕ ವಿಶ್ವಾದ್ಯಂತ ಚಿರಪರಿಚಿತರಾಗಿದ್ದಾರೆ. ಈಗಾಗಲೇ ಸುಮಾರು ಎರಡು ಸಾವಿರಕ್ಕೂ ಅಧಿಕ ಉತ್ಸವಗಳಲ್ಲಿ ಭಾಗವಹಿಸಿ, ತಮ್ಮ ಕಲೆಯನ್ನು ಅನಾವರಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಒಟ್ಟು 38 ಪತ್ನಿಯರನ್ನು ಹೊಂದಿರುವ ಜ್ಯೋಣ 1959ರಲ್ಲಿ ಹದಿನೈದನೇ ವಯಸ್ಸಿನಲ್ಲಿ ಮೊದಲ ವಿವಾಹವಾದರು. 2004ರಲ್ಲಿ 60ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ 38ನೇ ಮದುವೆಯಾದರು. 89 ಮಕ್ಕಳನ್ನು ಹೊಂದಿರುವ ಚಾನ ಹಲವು ಮೊಮ್ಮಕ್ಕಳಿಗೆ ಅಜ್ಜನ ಪ್ರೀತಿಯನ್ನು ಧಾರೆಯೆರೆಯುತ್ತಿದ್ದಾರೆ.

ಇದೀಗ ನಾಲ್ಕು ಅಂತಸ್ತಿನ ಮನೆಯಲ್ಲಿ ಚಾನ ಸೇರಿದಂತೆ ಒಟ್ಟು 162 ಸದಸ್ಯರು ಜೀವನ ಸಾಗಿಸುತ್ತಿದ್ದಾರೆ.ಮಿಜೋರಾಂಗೆ ಆಗಮಿಸಿದ ಪ್ರವಾಸಿಗರು ಚಾನ ಮನೆಗೆ ಭೇಟಿ ನೀಡುವುದನ್ನು ಮರೆಯುವುದಿಲ್ಲ. ಅಷ್ಟೇ ಅಲ್ಲ ಈ ಸುಂದರ ಕುಟುಂಬದೊಂದಿಗೆ ಭೇಟಿ ನೀಡಿದ ಪ್ರತಿಯೊಬ್ಬರು ಪೋಟೋ ಕ್ಲಿಕ್ಕಿಸಿಕೊಳ್ಳದೆ ಹಿಂತಿರುಗುವುದೇ ಇಲ್ಲ.

Comments are closed.