ಮುಂಬೈ: ‘ಸುಲ್ತಾನ್’ ಮೂಲಕ ತೆರೆಯ ಮೇಲೆ ಕುಸ್ತಿಪಟುವಾಗಿ ರಾರಾಜಿಸಿದ್ದ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರದಲ್ಲಿ ವೃತ್ತಿಪರ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಸಲ್ಮಾನ್ ಖಾನ್ರನ್ನು ಭೇಟಿಯಾದಾಗ ಬಾಕ್ಸರ್ಗಳ ಜೀವನದ ಮೇಲೆ ಚಿತ್ರ ನಿರ್ಮಿಸುವ ಇರಾದೆ ವ್ಯಕ್ತಪಡಿಸಿದ್ದರೆಂದು ಸಲ್ಲುನ ಆಪ್ತ ಬಳಗ ತಿಳಿಸಿತ್ತು.
ವಿಜೇದರ್ ಸಿಂಗ್ ಕೂಡ ತಮ್ಮ ಜೀವನಾಧಾರಿತ ಚಿತ್ರದಲ್ಲಿ ಸಲ್ಮಾನ್ ಖಾನ್ ನಾಯಕನಾಗಿರಬೇಕೆಂಬ ಬಯಕೆ ಹೊಂದಿರುವುದಾಗಿ ತಿಳಿದಿದೆ. ಸದ್ಯ ಕಬೀರ್ ಖಾನ್ ಜತೆ ಟ್ಯೂಬ್ಲೈಟ್ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸಲ್ಮಾನ್ ಚಿತ್ರದಲ್ಲಿ ತಮ್ಮ ಸಹೋದರನ ಜತೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Comments are closed.