
ಲಕ್ನೋ: ಬಾಬ್ರಿ ಮಸೀದಿ ಪರವಾಗಿ ಧ್ವನಿ ಎತ್ತಿದ್ದ ಹಿರಿಯ ಹೋರಾಟಗಾರ ಹಸೀಮ್ ಅನ್ಸಾರಿ (96)ದೀರ್ಘ ಕಾಲದ ಅಸ್ವಸ್ಥತೆಯಿಂದ ಬುಧವಾರ ಮೃತಪಟ್ಟಿದ್ದಾರೆ.
1949ರಿಂದಲೇ ಬಾಬ್ರಿ ಮಸೀದಿ ಪರವಾಗಿ ಹೋರಾಟ ನಡೆಸುತ್ತಿದ್ದ ಹಸೀಮ್ ಅನ್ಸಾರಿ, ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಕ್ಕಾಗಿ ತೀವ್ರ ಅಸಮದಾನ ವ್ಯಕ್ತಪಡಿಸಿದ್ದರು. ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ವಿರುದ್ಧ ಮೊದಲ ಬಾರಿಗೆ ಫೈಜಾಬಾದ್ ನ್ಯಾಯಾಲಯದ ಮೆಟ್ಟಿಲೇರಿದ ಹಸೀಮ್ ಈ ವಿಚಾರವಾಗಿ ಸಾಕಷ್ಟು ಹೋರಾಟ ನಡೆಸಿದ್ದರು.
ಕಳೆದ ವರ್ಷ ವಿಶ್ವ ಹಿಂದು ಪರಿಷತ್ ಮುಖ್ಯಸ್ಥ ಆಶೋಕ್ ಸಿಂಘಾಲ್ ನಿಧನರಾಗಿದ್ದ ಸಮಯದಲ್ಲಿ ಸಿಂಘಾಲ್ ಅವರ ಮರಣ ರಾಮ ಜನ್ಮಭೂಮಿ ಸಂಚಲನಕ್ಕೆ ಭಾರೀ ನಷ್ಟವಾಗಿದೆ ಎಂದು ಹೇಳಿಕೆ ನೀಡಿದ್ದರು ಹಸೀಮ್ ಅನ್ಸಾರಿ.
Comments are closed.