
ಹೈದರಾಬಾದ್, ಜು.20-ಹೈದರಾಬಾದ್ ಮೂಲದ ಆಸ್ಟಿನ್ ನಿವಾಸಿ ಟೆಕ್ಕಿಯೊಬ್ಬನನ್ನು ಅವನ ಫ್ಲಾಟ್‍ನಲ್ಲೇ ವಾಸವಿರುವ ವ್ಯಕ್ತಿಯೊಬ್ಬ ಇರಿದು ಕೊಲೆ ಮಾಡಿರುವ ಘಟನೆ ಟೆಕ್ಸಾಸ್‍ನ ಆಸ್ಟಿನ್ ಕೌಂಟಿಯಲ್ಲಿ ನಡೆದಿದೆ.
ಮೃತ ಟೆಕ್ಕಿಯನ್ನು ಗುಂಡಂ ಸಂಕೀರ್ತ್ ಹಾಗೂ ಹಂತಕನನ್ನು 27 ವರ್ಷದ ಕುರೇಮೂಲ ಸಾಯಿ ಸಂದೀಪ್‍ಗೌಡ ಎಂದು ಗುರುತಿಸಲಾಗಿದೆ. ಇಬ್ಬರೂ ಹೈದರಾಬಾದ್‍ನವರೇ. ಸಂದೀಪ್‍ಗೌಡನನ್ನು ಆಸ್ಟಿನ್ ಪೊಲೀಸರು ಬಂಧಿಸಿದ್ದಾರೆ. ಉತ್ತರ ಆಸ್ಟಿನ್‍ನ ಖ್ವರ್ರಿ ಓಕ್ಸ್ ಅಪಾರ್ಟ್‍ಮೆಂಟ್‍ನಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ನಿನ್ನೆ ನಮ್ಮ ಬಂಧುಗಳು ನಮಗೆ ವಿಷಯ ತಿಳಿಸಿದರು ಎಂದು ಸಂಕೀತ್ ತಂದೆ ಜಿ.ವಿಜಯ್‍ಕುಮಾರ್ ತಿಳಿಸಿದ್ದರೆ. ವಿಜಯ್‍ಕುಮಾರ್ ನಲ್ಗೊಂಡ ಜಿಲ್ಲೆಯ ಭೂದಾನ್ ಪೋಚಂಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಪರ್‍ವೈಸರ್ ಆಗಿದ್ದು ಮಗನ ಹತ್ಯೆ ವಿಷಯ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಹತ್ಯೆಗೆ ಕಾರಣ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ದೈಹಿಕವಾಗಿ ದುರ್ಬಲವಾಗಿದ್ದ ಸಂಕೀರ್ತ್‍ನನ್ನು ಈ ಮೊದಲು ಸಂದೀಪ್‍ಗೌಡ ಲೇವಡಿ ಮಾಡುತ್ತಿದ್ದ ಎಂದು ಗೆಳೆಯರು ಹೇಳಿದ್ದಾರೆ.
Comments are closed.