ಬೆಂಗಳೂರು, ಜು.19- ಸಾಫ್ಟ್ ವೇರ್ ಎಂಜಿನಿಯರೊಬ್ಬರು ಕೆಲಸ ಮಾಡುತ್ತಿದ್ದ ಕಚೇರಿಯ 8ನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ರಾತ್ರಿ ಬೆಳಂದೂರಿನಲ್ಲಿ ನಡೆದಿದೆ. ಮೂಲತಃ ಪಂಜಾಬ್ ಮೂಲದ ಗುಲ್ಷನ್ ಚೋಪ್ರಾ ಮೃತ ಟೆಕ್ಕಿಯಾಗಿದ್ದಾರೆ. ಬೆಳಂದೂರಿನಲ್ಲಿರುವ ಇಕೋ ಸ್ಪೇಸ್ ಕ್ಯಾಂಪಸ್‍ನಲ್ಲಿರುವ ಜೆನ್ ಪ್ಯಾಕ್ಟ್‍ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಒಂದು ವಾರ ರಜೆ ಹಾಕಿ ತನ್ನೂರಿಗೆ ತೆರಳಿದ್ದ. ನಿನ್ನೆ ಮಧ್ಯಾಹ್ನ ಕೆಲಸಕ್ಕೆ ಪುನಃ ಬಂದಿದ್ದರು ಎಂದು ತಿಳಿದು ಬಂದಿದೆ. ರಾತ್ರಿ ಊಟ ಮಾಡಿದ ನಂತರ ಆಚೆ ಹೋಗಿ ಬರುತ್ತೇನೆಂದು ಹೊರಗೆ ಹೋದ ಗುಲ್ಷನ್ ಸುಮಾರು 11 ಗಂಟೆ ಸಂದರ್ಭದಲ್ಲಿ 8ನೆ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಹಾರಿದ್ದಾನೆ.
ಇದನ್ನು ನೋಡಿದ ಕೆಲವರು ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎಂದು ಕೆಲವರು ತಿಳಿಸಿದ್ದಾರೆ. ಎಚ್‍ಎಸ್‍ಆರ್ ಲೇ ಔಟ್ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.