ಬರ್ಲಿನ್: ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ರೈಲಿನಲ್ಲಿ ಚಾಕುವಿನಿಂದ ಪ್ರಯಾಣಿಕರಿಗೆ ಯದ್ವಾತದ್ವಾ ಇರಿದಿದ್ದು, ನಂತರ ತಪ್ಪಿಸಿಕೊಳ್ಳಲೆತ್ನಿಸಿದ ವ್ಯಕ್ತಿಯನ್ನು ಪೆÇಲೀಸರು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ದಕ್ಷಿಣ ಜರ್ಮನಿಯಲ್ಲಿ ನಡೆದಿದೆ.
ಆಫ್ಘಾನಿಸ್ಥಾನ ಮೂಲದ 17 ವರ್ಷದ ಬಾಲಕ ಒಂದು ಕೊಡಲಿ ಮತ್ತು ಚಾಕು ಹಿಡಿದು ರೈಲಿನೊಳಗೆ ನುಗ್ಗಿ ಹಲವು ಪ್ರಯಾಣಿಕರಿಗೆ ಮನಬಂದಂತೆ ಇರಿದ. ಇರಿತಕ್ಕೊಳಗಾದ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ರೈಲ್ವೆ ಪೆÇಲೀಸರು ಅವನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫ್ರಾನ್ಸ್‍ನ ನಸ್ ನಗರದಲ್ಲಿ ಟುನಿಷಿಯಾ ಪ್ರಜೆಯೊಬ್ಬ ಬಾಸ್ಟಿಲ್ಲೆ ದಿನ ಆಚರಿಸುತ್ತಿದ್ದ ಗುಂಪಿನ ಮೇಲೆ ಟ್ರಕ್ ನುಗ್ಗಿಸಿ 84 ಜನರನ್ನು ಬಲಿ ತೆಗೆದುಕೊಂಡ ಬೆನ್ನಲ್ಲೆ ಜರ್ಮನಿಯಲ್ಲಿ ಈ ಘಟನೆ ನಡೆದಿರುವುದು ಇಡೀ ಯೂರೋಪ್ ಜನರನ್ನು ತೀವ್ರ ಆತಂಕಕ್ಕೀಡುಮಾಡಿದೆ.
ಕಳೆದ ವರ್ಷವಷ್ಟೇ ಆಫ್ಘಾನಿಸ್ಥಾನ, ಸಿರಿಯಾ, ಇರಾಕ್‍ಗಳಿಂದ ಸಾವಿರಾರು ನಿರಾಶ್ರಿತ ವಲಿಸಗರನ್ನು ಮಾನವೀಯ ನೆಲೆಗಟ್ಟಿನಲ್ಲಿ ದೇಶದೊಳಕ್ಕೆ ಬಿಟ್ಟುಕೊಂಡಿದ್ದ ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಟ್ ಅವರ ಮೇಲೆ ಈಗ ಒತ್ತಡ ಹೆಚ್ಚಾಗುತ್ತಿದೆ. ಇಂದಿನ ದಾಳಿಕೋರ ಬಾಲಕ ಕೂಡ ಆಫ್ಘನ್ ಮೂಲದವನಾಗಿದ್ದು, ಈ ರೀತಿ ಹಲ್ಲೆ ಏಕೆ ನಡೆಸಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಗೃಹ ಸಚಿವ ಜೋಕಿಮ್ ಹರ್ಮಾನ್ ಹೇಳಿದ್ದಾರೆ.
ತನಿಖೆ ನಂತರವೇ ಸತ್ಯ ತಿಳಿಯಬೇಕಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಪೆÇಲೀಸ್ ಅಧಿಕಾರಿ ಫೆಬಿಯನ್ ಹೆಂಚ್ ತಿಳಿಸಿದ್ದಾರೆ.
Comments are closed.