ಅಂತರಾಷ್ಟ್ರೀಯ

ಗೆಳತಿಗೆ ಮನಬಂದಂತೆ ಥಳಿಸಿದ ಯುವಕ….ಏಕೆ …ಏನು..?

Pinterest LinkedIn Tumblr

Crime

ಲಾ ಪ್ಲಾಟಾ: ಪ್ರೀತಿಸಿದವಳು ಅದೇನೂ ತಪ್ಪು ಮಾಡಿದ್ದಳೊ ಗೊತ್ತಿಲ್ಲ. ಆಕೆಯ ಗೆಳೆಯ ಆಕೆಗೆ ಬೀದಿಯಲ್ಲಿ ಮನಬಂದಂತೆ ಥಳಿಸಿದ್ದಾನೆ. ಇಂತಹದೊಂದು ಅಮಾನವೀಯ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.

ಹೌದು. ಅರ್ಜೆಂಟೀನಾದ ಕೋಸ್ಟಲ್ ರೆಸಾರ್ಟ್ ಮರ್ ಡೇ ಪ್ಲಾಟಾದ ಬಳಿಯಿರುವ ಬಸ್ ಸ್ಟಾಂಡ್ ಬಳಿ ಈ ಘಟನೆ ನಡೆದಿದ್ದು, ಹುಚ್ಚು ಪ್ರೇಮಿಯೊಬ್ಬ ಆತನ ಗೆಳತಿಗೆ ಮನಬಂದಂತೆ ಥಳಿಸಿದ್ದಾನೆ. ಇದನ್ನು ಕಣ್ಣಾರೆ ಕಂಡ ಜನರು ಕೂಡ ತಮಗೇನು ಸಂಬಂಧವಿಲ್ಲದಂತೆ ವರ್ತಿಸಿರುವುದು ಆಶ್ಚರ್ಯ ಮೂಡಿಸಿದೆ.

ಗೆಳತಿಯ ಮೇಲೆ ಬಲ ಪ್ರಯೋಗ ಮಾಡಿರುವ ಯುವಕ, ಆಕೆಯ ಹೊಟ್ಟೆಗೆ ತಲೆಗೆ ಕಾಲಿನಿಂದ ಒದ್ದಿದ್ದಾನೆ. ಕೂದಲನ್ನು ಹಿಡಿದು ಕಾಂಪೌಂಡ್‍ಗೆ ಚಚ್ಚಿದ್ದಾನೆ. ಅಲ್ಲದೇ ಆಕೆ ಕೆಳಗೆ ಬಿದ್ದರೂ ಸುಮ್ಮನಿರದ ಆತ ಒಂದೇ ಸಮನೇ ದಾಳಿ ಮಾಡಿದ್ದಾನೆ. ನಂತರ ಬಸ್ ಸ್ಟಾಂಡ್‍ನಲ್ಲಿ ನಿಂತಿದ್ದ ಆತನನ್ನು ಪೊಲೀಸರು ಬಂದು ಬಂಧಿಸಿದ್ದಾರೆ. ಸದ್ಯ ದೃಶ್ಯಗಳೆಲ್ಲಾ ಅಲ್ಲೇ ಇದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://youtu.be/Cq6ZYGNp7sY

Write A Comment