ಪ್ರಮುಖ ವರದಿಗಳು

ಚೆಂಡು ಬಡಿದು ಹೂ್ಯಸ್‌ಗೆ ಗಂಭೀರ ಗಾಯ

Pinterest LinkedIn Tumblr

phil_hughes-ap-l

ಸಿಡ್ನಿ, ನ.25: ಬ್ಯಾಟಿಂಗ್‌ನ ವೇಳೆ ತಲೆಗೆ ಚೆಂಡು ಬಡಿದ ಪರಿಣಾಮವಾಗಿ ಆಸ್ಟ್ರೇಲಿಯದ ಬ್ಯಾಟ್ಸ್ ಮನ್ ಫಿಲಿಪ್ ಹ್ಯೂಸ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.
ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಆರಂಭಗೊಂಡ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯ ತಂಡದ ಆಟಗಾರ ಹ್ಯೂಸ್‌ಗೆ ಎದುರಾಳಿ ತಂಡ ನ್ಯೂ ಸೌತ್ ವೇಲ್ಸ್‌ನ ವೇಗದ ಬೌಲರ್ ಸಿಯನ್ ಅಬ್ಬಾಟ್‌ರ ಬೌನ್ಸರ್ ಬಡಿದು ಗಂಭೀರ ಗಾಯಗೊಂಡರು.

ಔಟಾಗದೆ 63 ರನ್ ಗಳಿಸಿದ್ದ ಹ್ಯೂಸ್ ಅವರು 48.3ನೆ ಓವ ರ್‌ನಲ್ಲಿ ಅಬ್ಬಾಟ್‌ರ ಬೌನ್ಸರ್ ಎಸೆತವನ್ನು ಎದುರಿಸುವ ಯತ್ನದಲ್ಲಿ ಗಾಯಗೊಂಡರು. ರಕ್ಷಣೆಗೆ ಹೆಲ್ಮೆಟ್ ಧರಿಸಿದ್ದರೂ ಪ್ರಯೋಜನಕ್ಕೆ ಬರಲಿಲ್ಲ. ಚೆಂಡು ಬಡಿದು ಕುಸಿದು ಬಿದ್ದ ಹ್ಯೂಸ್‌ರನ್ನು ತಕ್ಷಣ ಚಿಕಿತ್ಸೆಗಾಗಿ ಸೈಂಟ್ ವಿನ್ಸೆಂಟ್ ಆಸ್ಪತ್ರೆಗೆ ದಾಖಲಿಸಲಾಯಿತು.ಈ ಘಟನೆಯ ಬೆನ್ನೆಲ್ಲೆ ಆಟವನ್ನು ಅರ್ಧದಲ್ಲೇ ನಿಲ್ಲಿಸಲಾಯಿತು.

ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹ್ಯೂಸ್ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. 25ರ ಹರೆಯದ ಹ್ಯೂಸ್ ಅವರು ಡಿ.4ರಂದು ಬ್ರಿಸ್ಬೇನ್‌ನಲ್ಲಿ ಆರಂಭಗೊಳ್ಳಲಿರುವ ಪ್ರವಾಸಿ ಭಾರತ ವಿರುದ್ಧದ ಮೊದಲ ಟೆಸ್ಟ್‌ಗೆ ಆಸ್ಟ್ರೇಲಿಯ ತಂಡದಲ್ಲಿ ಆಡುವ  ಯೋಜನೆಯೊಂದಿಗೆ ತಯಾರಿ ನಡೆಸುತ್ತಿದ್ದರು. ಗಾಯಗೊಂಡು ತಂಡದಿಂದ ಹೊರಗುಳಿದಿರುವ ನಾಯಕ ಮೈಕಲ್ ಕ್ಲಾರ್ಕ್ ಸ್ಥಾನದ ಮೇಲೆ ಹ್ಯೂಸ್ ಕಣ್ಣಿಟ್ಟಿದ್ದರು.
ಆರಂಭಿಕ ದಾಂಡಿಗ ಹ್ಯೂಸ್ 2009ರಲ್ಲಿ ಆಸ್ಟ್ರೇಲಿಯ ಟೆಸ್ಟ್ ತಂಡ ಪ್ರವೇಶಿಸಿದ್ದರೂ, ಇನ್ನೂ ಅವರ ಸ್ಥಾನ ಖಾಯಂ ಆಗಿಲ್ಲ. 26 ಟೆಸ್ಟ್ ಆಡಿರುವ ಅವರು 3 ಶತಕ ಮತ್ತು 7 ಅರ್ಧಶತಕ ಒಳಗೊಂಡ 1,535 ರನ್, 25 ಏಕದಿನ ಪಂದ್ಯಗಳಲ್ಲಿ 2 ಶತಕ ಮತ್ತು 4 ಶತಕ ಇರುವ 1,100 ರನ್ ಸಂಪಾದಿಸಿದ್ದಾರೆ.

ಆಸೀಸ್ ಆಟಗಾರನ ಚೇತರಿಕೆಗೆ ಕೊಹ್ಲಿ ಸಹಿತ ವಿಶ್ವ ಕ್ರಿಕೆಟಿಗರ ಹಾರೈಕೆ
ಸಿಡ್ನಿ, ನ.25: ಶೀಫೀಲ್ಡ್ ಶೀಲ್ಡ್ ಪಂದ್ಯದ ಬ್ಯಾಟಿಂಗ್‌ನ ವೇಳೆ ಬೌನ್ಸರ್‌ವೊಂದು ತಲೆಗೆ ಅಪ್ಪಳಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಆಸ್ಟ್ರೇಲಿಯದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಸಹಿತ ವಿಶ್ವದೆಲ್ಲೆಡೆಯ ಕ್ರಿಕೆಟಿಗರು ಹಾರೈಸಿದ್ದಾರೆ. ಫಿಲಿಪ್ ಹಾಗೂ ಅವರ ಕುಟುಂಬ ವರ್ಗದ ಕುರಿತು ನಾವೆಲ್ಲರೂ ಯೋಚನೆ ಹಾಗೂ ಪ್ರಾರ್ಥನೆಯಲ್ಲಿ ತೊಡಗಿ ದ್ದೇವೆ.

ಅವರೋರ್ವ ಹೋರಾಟಗಾರ ಹಾಗೂ ಯುವ ಕ್ರಿಕೆಟಿಗನಾಗಿದ್ದಾರೆ ಎಂದು ಆಸ್ಟ್ರೇಲಿಯದ ಕೋಚ್ ಡರೆನ್ ಲೆಹ್ಮಾನ್ ಮೊದಲಿಗೆ ಟ್ವಿಟ್ಟರ್‌ನ ಮೂಲಕ ತಿಳಿಸಿದ್ದಾರೆ. ಹ್ಯೂಸ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ವೇಗದ ಬೌಲರ್ ಸಿಯಾನ್ ಅಬ್ಬಾಟ್ ಶಾರ್ಟ್ ಪಿಚ್‌ವೊಂದು ತಲೆಗೆ ಅಪ್ಪಳಿಸಿದಾಗ ನೆಲಕ್ಕೆ ಕುಸಿದು ಬಿದ್ದರು.

ಹ್ಯೂಸ್‌ರನ್ನು ತಕ್ಷಣವೇ ಹತ್ತಿರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 25ರ ಹರೆಯದ ಹ್ಯೂಸ್ ಇದೀಗ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತುರ್ತು ಚಿಕಿತ್ಸಾ ಘಟಕ(ಐಸಿಯು)ದಲ್ಲಿದ್ದಾರೆ. ಆಸ್ಟ್ರೇಲಿಯ ನಾಯಕ ಮೈಕಲ್ ಕ್ಲಾರ್ಕ್ ಅವರು ಹ್ಯೂಸ್ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿದ್ದಾರೆ. ಹ್ಯೂಸ್‌ಮೈದಾನದೊಳಗೆ ಪ್ರಾಥಮಿಕ ಚಿಕಿತ್ಸೆ ಪಡೆದಾಗ ಸಹ ಆಟಗಾರ ಡೇವಿಡ್ ವಾರ್ನರ್ ಇದ್ದರು. ‘‘ಹ್ಯೂಸ್ ಎಲ್ಲ ಸಮಸ್ಯೆಗಳನ್ನು ಜಯಿಸಿ ಬರಲಿದ್ದಾರೆಂಬ ವಿಶ್ವಾಸ ನನಗಿದೆ. ಅವರೋರ್ವ ಚಾಂಪಿಯನ್. ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವೆ’’ ಎಂದು ವಾರ್ನರ್ ತಿಳಿಸಿದ್ದಾರೆ. ಆಸ್ಟ್ರೇಲಿಯದ ದಂತಕತೆಗಳಾದ ಶೇನ್ ವಾರ್ನ್, ಗ್ಲೆನ್ ಮೆಕ್‌ಗ್ರಾತ್ ಹಾಗೂ ಹಾಲಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಅವರು ಹ್ಯೂಸ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಇಯಾನ್ ಬೋಥಂ ಹಾಗೂ ಮಾಜಿ ನಾಯಕ ಮೈಕಲ್ ವಾನ್ ಇದೊಂದು ಆಘಾತಕಾರಿ ಸುದ್ದಿ ಎಂದು ಹೇಳಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ನಾಯಕನಾಗಿರುವ ವಿರಾಟ್ ಕೊಹ್ಲಿ, ‘‘ಹ್ಯೂಸ್ ನೀವು ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದು, ನೀವು ಬೇಗನೆ ಚೇತರಿಸಿಕೊಂಡು ಮೈದಾನಕ್ಕೆ ಇಳಿಯಬೇಕು. ಆಘಾತವನ್ನು ಸಹಿಸುವ ಶಕ್ತಿ ಕುಟುಂಬ ವರ್ಗಕ್ಕೆ ಭಗವಂತ ನೀಡಲಿ’’ ಎಂದು ಹೇಳಿದ್ದಾರೆ. ಶ್ರೀಲಂ ಕಾದ ಮಹೇಲ ಜಯವರ್ಧನೆ ಹಾಗೂ ಭಾರತದ ನಿವೃತ್ತ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದ ಆಟಗಾರರು ಹ್ಯೂಸ್‌ಗೆ ಸಂದೇಶವನ್ನು ಕಳುಹಿಸಿ ಸ್ಥೈರ್ಯ ತುಂಬಿದ್ದಾರೆ.

http://vbnewsonline.com

Write A Comment