ಕರ್ನಾಟಕ

ತೀರ್ಥಹಳ್ಳಿಯ ನಂದಿತಾಳದ್ದು ಕೊಲೆಯಲ್ಲ, ಆತ್ಮಹತ್ಯೆ

Pinterest LinkedIn Tumblr

nanditha

ಬೆಂಗಳೂರು, ನ.25 : 8ನೇ ತರಗತಿ ವಿದ್ಯಾರ್ಥಿನಿ ನಂದಿತಾ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ನಂದಿತಾ ಇಲಿ ಪಾಶಣ ಸೇವಿಸಿ ಮೃತಪಟ್ಟಿದ್ದಾಳೆ ಎಂದು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದೆ. ಈ ವರದಿ ಎರಡು ದಿನಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಹಸ್ತಾಂತರವಾಗಲಿದೆ.

ನಂದಿತಾ ಸಾವಿನ ಬಗ್ಗೆ ಹಲವಾರು ಗೊಂದಲಗಳಿದ್ದು, ಮಂಗಳವಾರ ವಿಧಿ ವಿಜ್ಞಾನ ಪ್ರಯೋಗಾಲಯ ನಂದಿತಾ ದೇಹದಲ್ಲಿ ಪಾಸ್ಪರಸ್ ವಿಷದ ಅಂಶ ಪತ್ತೆಯಾಗಿದೆ, ನಂದಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವರದಿ ನೀಡಿದೆ. ಆದರೆ, ಪ್ರಯೋಗಾಲಯದ ವರದಿ ಇನ್ನೂ ಸಿಐಡಿ ಪೊಲೀಸರ ಕೈಸೇರಿಲ್ಲ.

ಕೆಲವು ದಿನಗಳ ಹಿಂದೆ ನಂದಿತಾ ಡೆತ್‍ನೋಟ್ ಪರೀಕ್ಷೆ ನಡೆಸಿದ್ದ ವಿಧಿವಿಜ್ಞಾನ ಪ್ರಯೋಗಾಲಯ ನಂದಿತಾಳೇ ಡೆತ್ ನೋಟ್ ಬರೆದಿದ್ದಾಳೆ ಎಂದು ಹೇಳಿತ್ತು. ಇಂದು ಬಂದರುವ ವರದಿ ನಂದಿತಾಳದ್ದು, ಆತ್ಮಹತ್ಯೆ ಎಂದು ಹೇಳಿರುವುದು ಪ್ರಕರಣಕ್ಕೆ ತಿರುವು ನೀಡಿದೆ.

ಈಗಾಗಲೇ ನಂದಿತಾ ಸಾವಿನ ಬಗ್ಗೆ 15 ದಿನ ತೀರ್ಥಹಳ್ಳಿಯಲ್ಲಿ ತನಿಖೆ ಮುಗಿಸಿರುವ ಪೊಲೀಸರು ಸಿಐಡಿ ಪೊಲೀಸರು ಬೆಂಗಳೂರಿಗೆ ಮರಳಿದ್ದಾರೆ. ಕೆಲವು ದಿನಗಳಲ್ಲಿ ಸಿಐಡಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

ತೀರ್ಥಹಳ್ಳಿಯ ಸರ್ಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಂದಿತಾಳನ್ನು ಮೂವರು ಯುವಕರ ಗುಂಪು ಅಪಹರಿಸಿ ಆನಂದ ಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ವಿಷಪ್ರಾಶನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಂದಿತಾ ಅ.31ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.

ನಂದಿತಾ ಸಾವು ರಾಜಕೀಯ ನಾಯಕರ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ನಂದಿತಾ ಸಾವಿನ ನಂತರ ತೀರ್ಥಹಳ್ಳಿಯಲ್ಲಿ ನಡೆದ ಹಿಂಸಾಚಾರದ ಹಿನ್ನಲೆಯಲ್ಲಿ 15 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

Write A Comment