ಅನಿವಾಸಿ ಭಾರತೀಯರು

ಗಲ್ಫ್ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ: ಸಚಿವ ಅಶ್ವಥ್ ನಾರಾಯಣ್

Pinterest LinkedIn Tumblr

(ವರದಿ-ಯೋಗೀಶ್ ಕುಂಭಾಸಿ)

ಕುಂದಾಪುರ: ಬೆಂಗಳೂರಿನ ಉಸ್ತುವಾರಿ ಸಚಿವರ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ ಕುಂದಾಪುರದ ಕೋಟೇಶ್ವರ ಯುವ ಮೆರಿಡಿಯನ್’ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಇರಬೇಕಾದರೆ ಸಮಸ್ಯೆ ಉದ್ಭವವಾಗಲ್ಲ. ಅವರೇ ಒಂದು ಶಕ್ತಿ ಹಾಗಾಗಿ ಯಾವುದೇ ಜಿಲ್ಲೆಗೆ ಹಾಗೂ ಇಲಾಖೆಗೆ ಅವರೇ ಮುಖ್ಯಸ್ಥರಾದರೆ ಉತ್ತಮ ಎಂದಿದ್ದಾರೆ.

ಕರ್ನಾಟಕ‌ ರಾಜ್ಯ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದೆ. ಗಲ್ಪ್ ದೇಶಗಳ ಪ್ರಮುಖ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು, ಕಚೇರಿ ತೆರೆಯಲು ಆಸಕ್ತಿ ತೋರಿಸಿದ್ದು ಹೆಮ್ಮೆಯ ವಿಚಾರ. ನಮ್ಮ ದೇಶದ ಯುವಕರು ವಿಶ್ವ ವ್ಯಾಪಿ ಬೆಳೆಯಲಿದ್ದು ಇದರಿಂದ ಪ್ರತಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಭರವಸೆಯ ನುಡಿ ಆಡಿದರು.

ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಬೇಡಿಕೆಯಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದ ಅವರು ಈಗಾಗಾಲೇ ರಾಜ್ಯದಲ್ಲಿ 85% ಜನರಿಗೆ ಮೊದಲ ಹಂತದ, 45% ಎರಡನೇ ಡೋಸ್ ಕೋವಿಡ್ ವಾಕ್ಸಿನ್ ನೀಡಲಾಗಿದೆ. ಹಳ್ಳಿಹಳ್ಳಿಗಳಿಗೆ ತೆರಳಿ ಜನರ ಮದ್ಯೆ ಹೋಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ಎರಡನೇ ಡೋಸ್ ಲಸಿಕೆ ನೀಡುವಿಕೆಯಲ್ಲಿ ಪ್ರಥಮ ಸ್ಥಾನ ಹಾಗೂ ಮೊದಲ ಡೋಸ್ ನೀಡಿದ್ದರಲ್ಲಿ 5 ನೇ ಸ್ಥಾನ ಪಡೆದ ಗರಿಮೆ ನಮ್ಮ ರಾಜ್ಯದ್ದು ಎಂದರು.

 

Comments are closed.