ಮುಂಬಯಿ: ನಮ್ಮ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ನೀವೆಲ್ಲರೂ ಇಲ್ಲಿಗೆ ಬಂದು ನಮ್ಮೊಂದಿಗೆ ಸಹಕರಿಸುವ ಭರವಸೆ ನೀಡಿದ್ದೀರಿ. ಕೇವಲ ಧರ್ಮಸ್ಥಳ ಮಾತ್ರವಲ್ಲ, ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ಆಗುತ್ತಿರುವ ಅನ್ಯಾಯದ ಬಗ್ಗೆ, ಸೌಜನ್ಯನ ವಿಷಯವನ್ನು ಕೇಂದ್ರೀಕರಿಸಿ ಜನರ ದಿಕ್ಕು ತಪ್ಪಿಸುತ್ತಾ ಧರ್ಮಸ್ಥಳದ ಹೆಸರನ್ನು ಕೆಡಿಸುವ ಷಡ್ಯಂತ್ರ ನಡೆಯುತ್ತಿದೆ. ಇದು ಸೌಜನ್ಯನ ವಿರೋದವಾದ ಕಾರ್ಯಕ್ರಮ ಖಂಡಿತಾ ಅಲ್ಲ, ನಾವೆಲ್ಲರೂ ಸೌಜನ್ಯನ ಪರವಾರಿ ಇದ್ದೇವೆ, ಎಂದು ಮಹಾನಗರದ ಪ್ರಸಿದ್ಧ ಉದ್ಯಮಿ, ಪ್ರಖರ ಹಿಂದುತ್ವವಾದಿ, ಸಂಘಟಕ, ಯುವನಾಯಕ ಈ ಸಂಘಟನೆಯ ರೂವಾರಿ ಮಹೇಶ್ ಶೆಟ್ಟಿ ತೆಳ್ಳಾರ್ ರವರು ಸ್ಪಷ್ಠಪಡಿಸಿ ತನ್ನ ಮಾತನ್ನು ಆರಂಬಿಸಿತ್ತಾ ಮುಂಬಯಿಗರೆಲ್ಲದ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿರುವುದರಿಂದ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅಪಪ್ರಚಾರವನ್ನು ಎಂದೂ ಸಹಿಸುವಂತಿಲ್ಲ ಎಂದರು.

ಸೆ. 14 ರಂದು ಅಪರಾಹ್ನ ಮೀರಾರೋಡ್ ಪೂರ್ವ ಶೀತಲ್ ನಗರದ ಎಸ್. ಕೆ. ಸ್ಟೋನ್ ಸೆಂಟರ್ ಪಾರ್ಕ ಹಾಲ್ ನಲ್ಲಿ ಅದ್ದೂರಿಯಾಗಿ ನಡೆದ ಬ್ರಹತ್ ಹಿಂದೂ ಧರ್ಮ ಸಂರಕ್ಷಣಾ ಮಹಾ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಮಹೇಶ್ ಶೆಟ್ಟಿ ತೆಳ್ಳಾರ್ ಸೌಜನ್ಯನ ಬಗ್ಗೆ ಭಾರತದ ಸರ್ವೋಚ್ಛ ನ್ಯಾಯಾಲಯ ಹೋಗುದಾದರೂ ನಾವು ಮುಂಬಯಿಗರು ಅದಕ್ಕೆ ಪ್ರೋತ್ಸಾಹ ನೀಡಲು ಸಿದ್ದ. ಒಂದು ಹೆಣ್ಣಿಗೆ ನ್ಯಾಯ ದೊರಕಿಸಿಯಾರು ಎಂದು ತಿಳಿದು ಈ ತನಕ ಸುಮ್ಮನಿದ್ದೆವು. ನಾವೆಲ್ಲರೂ ಹಿಂದೂ ಎಂಬ ನೆಲೆಯಲ್ಲಿ ಎಲ್ಲಾ ಜಾತಿ, ಸಮುದಾಯದವರನ್ನು ಒಗ್ಗೂಡಿಸಿ ಮಾಡಿದ ಕಾರ್ಯಕ್ರಮ. ಜಾತಿ ಸಂಘಟನೆಗಳಲ್ಲಿ ಕಲಹಗಳಾಗುತ್ತಿದ್ದರೆ ಅದು ಹಿಂದೂ ಸಂಘಟನೆಯ ಒಗ್ಗಟ್ಟಿಗೆ ಮಾರಕ, ಆದುದರಿಂದ ಹಿಂದೂ ಸಮಾಜದ ಎಲ್ಲರೂ ನಮ್ಮ ಧರ್ಮವನ್ನು ಬಲಿಷ್ಠಗೊಳಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದು ಎಲ್ಲಾ ಸಮುದಾಯದ ಅಧ್ಯಕ್ಷರುಗಳಲ್ಲಿ ವಿನಂತಿಸುತ್ತಾ ಧರ್ಮಸ್ಥಳದಲ್ಲಿ ಇಂದು ಧರ್ಮ ನಡೆಯುತ್ತಿದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ವಾಗುವುದಾದರೆ ನಾವು ಮುಂಬಯಿಗರು ಕ್ಷೇತ್ರದ ಪರ ಗಟ್ಟಿಯಾಗಿ ನಿಲ್ಲಬೇಕಾದ ಅಗತ್ಯವಿದೆ. ಜಾತಿ ಮತ ಭೇದವನ್ನು ಮರೆತು ನಾವು ಒಟ್ಟಾದಲ್ಲಿ ಅದಕ್ಕೆ ಇನ್ನಷ್ಟು ಶಕ್ತಿ ಸಿಗುವುದು. ಆದುದರಿಂದ ನಾವು ಹಿಂದುತ್ವದ ಅಭಿಯಾನವನ್ನು ಇಲ್ಲಿಂದಲೇ ಪ್ರಾರಂಭಿಸೋಣ. ಈ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ. ಬರಲಿಕ್ಕೆ ಸಾಧ್ಯವಿಲ್ಲದಿದ್ದರು ದೇವರು ನೀಡಿದ ಶಕ್ತಿಯಿಂದ ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎನ್ನುತ್ತಾ ಇಂದು ಸೇರಿದ ಜನ ಸಂಖ್ಯೆಯು ನಮ್ಮ ಹೋರಾಟಕ್ಕೆ ಬೆಂಬಲ ನೀಡುವಲ್ಲಿ ಸಂದೇಹವಿಲ್ಲ ಎಂದರು.
ಉತ್ತರ ಮುಂಬಯಿಯ ಮಾಜಿ ಸಂಸದ ಗೋಪಾಲ್ ಶೆಟ್ಟಿ ಯವರು ಮಾತನಾಡುತ್ತಾ ಇದು ಹಿಂದೂ ಸನಾತನ ಧರ್ಮಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮವಾಗಿದ್ದು ಆಯೋಜಿಸಿದ ಎಲ್ಲರಿಗೂ ಅಭಿನಂದನೆಗಳು. ರಾಮಮಂದಿರ ನಿರ್ಮಾಣದ ಕಾರ್ಯಕ್ರಮವನ್ನು ನಾವೆಲ್ಲ ನಮ್ಮ ಜೀವಿತಕಾಲದಲ್ಲಿ ನೋಡಿದ್ದು ನಮ್ಮ ಸೌಭಾಗ್ಯ. ದೇವರು ನಮ್ಮಲ್ಲಿ ನಿನ್ನನ್ನು ಮನುಷ್ಯನಾಗಿ ಭೂಮಿಗೆ ಕಳುಹಿಸಿದ್ದೇನೆ, ಅಲ್ಲಿ ಏನು ಮಾಡಿದ್ದೀ ಅಂತ ಕೇಳಿದರೆ ನಾನು ರಾಮಮಂದಿರ ನಿರ್ಮಾಣ ಮಾಡಿದೆ ಅಂತ ಬಹಳ ಅಭಿಮಾನದಿಂದ ಹೇಳುವಂತಾಗಿದೆ. ಇನ್ನು ಮುಂದೆ ನಾವೆಲ್ಲರೂ ಸೇರಿ ಒಂದಾಗಿ ಸನಾತನ ಧರ್ಮವನ್ನು ಬಲಿಷ್ಠ ಗೊಳಿಸೋಣ ಎಂದರು.
ಕಾರ್ಕಳದ ಶಾಸಕ ಸುನಿಲ್ ಕುಮಾರ್, ಮಾತನಾಡಿ ಧರ್ಮಸ್ಥಳ ಕೇವಲ ನೆಪಮಾತ್ರ, ಇಡೀ ದೇಶದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳನ್ನು ದುರ್ಬಲಗೊಳಿಸಲು ಒಂದು ದುಷ್ಠ ಶಕ್ತಿಯ ಗುಂಪು ಕಾರ್ಯನಿರ್ವಹಿಸುತ್ತಿದೆ. ಸೌಜನ್ಯನ ವಿಷಯಯವನ್ನು ಮುಂದಕ್ಕಿಟ್ಟು ಧಾರ್ಮಿಕ ಕ್ಷೇತ್ರಗಳನ್ನು ಅವಹೇಳನ ಮಾಡುವುದರ ವಿರುದ್ದದ ಕಾರ್ಯಕ್ರಮವಿದು. ಬುರುಡೆ ತನಿಕೆ, ದೇಶದ ಇತಿಹಾಸದಲ್ಲಿ ಇಂತಹ ತನಿಕೆ ಯಾವತ್ತೂ ನಡೆದಿಲ್ಲ. ದೇವಸ್ಥಾನದ ಬಗ್ಗೆ ಮಾತ್ರ ಯುಟ್ಯೂಬ್ ನಲ್ಲಿ ಬೇಡದ ಪ್ರಚಾರವಾಗುತ್ತದೆ. ಹಿಂದೂಗಳು ಮೌನವಾಗಿರುವುದೇ ಇದಕ್ಕೆ ಕಾರಣ. ಜಾತಿ ಜಾತಿಯ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದೆ. ದೇಶ ಮೊದಲು ಎಂಬ ಚಿಂತನೆ ಇರಲಿ. ಈ ಸಮಾವೇಶವನ್ನು ಆಯೋಜನೆ ಮಾಡಿದ ಮಹೇಶ್ ಶೆಟ್ಟಿ ತೆಳ್ಳಾರ್, ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತಿರುವೆನು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ಗೋರಕ್ಷಕ ಪ್ರಮುಖ ವಿಶ್ವ ಹಿಂದೂ ಪರಿಷತ್ ನ ಶಂಕರ್ ಗಾಯ್ಕಾರ್ ಮಾತನಾಡುತ್ತಾ ದೇಶದ ವಿವಿದೆಡೆ ಒಂದೊಂದು ಧರ್ಮಸ್ಥಳ ನಿರ್ಮಾಣ ಮಾಡುವ ಪ್ರಯತ್ನ ಮಾಡಿಯಾರು. ಸಮಸ್ಯೆ ಕರ್ನಾಟಕದ್ದೇ ಆಗಿದ್ದರೂ ಮಹಾರಾಷ್ಟ್ರ ಮತ್ತು ಕರ್ನಾಟಕ ಸಹೋದರರಂತಾಗಿದ್ದು ಕರ್ನಾಟಕಕ್ಕೆ ನೋವಾದಲ್ಲಿ ಅದನ್ನು ಮಹರಾಷ್ಟ್ರ ಸಹಿಸುವಂತಿಲ್ಲ. ಧರ್ಮಸ್ಥಳ ಪವಿತ್ರ ಭೂಮಿ, ಶಿವನ ಭೂಮಿ. ಯಾರೂ ಪ್ರಯತ್ನಿಸಿದರೂ ಧರ್ಮಸ್ಥಳಕ್ಕೆ ಎಂದೂ ಹಾನಿಯಾಗದು. ಮಂದಿರ ನಮ್ಮ ಸ್ವಾಸ, ತಾಕತ್ತು. ತಮ್ಮ ಹೆತ್ತವರು ಮಾಡಿದ ಪುಣ್ಯದ ಕಾರ್ಯದಿಂದ ಇಂದು ಮಹೇಶ್ ಶೆಟ್ಟಿಯವರಂತವರು ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಲು ನಿಂತಿದ್ದು ಅಭಿನಂದನೀಯ. ಧರ್ಮಸ್ಥಳದ ಭೂಮಿಗೆ ವಿಶೇಷ ಶಕ್ತಿ ಇದೆ. ಇತಿಹಾಸ ಪ್ರಸಿದ್ಧ ಧರ್ಮಸ್ಥಳದ ಹೆಸರನ್ನು ಯಾರಿಂದಲೂ ಅಳಿಸಲು ಅಸಾಧ್ಯ ಎಂದರು.
ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ, ಮಾತನಾಡುತ್ತಾ ಗಣೇಶೋತ್ಸವವನ್ನು ಸಾರ್ವಜನಿಕಾಗಿ ಪ್ರಾರಂಭಿಸಿದ್ದು ಶಿವಾಜಿ ಮಾಹಾರಾಜರು ಹುಟ್ಟಿದ ಮಹಾರಾಷ್ಟ್ರದಲ್ಲಿ. ಗಣೇಶೋತ್ಸವಕ್ಕೆ ಸ್ವತಂತ್ರ ಹೋರಾಟದ ಹಿನ್ನೆಲೆ ಇದೆ. ಗಣೇಶೋತ್ಸವದಿಂದಾಗಿ ನಾವೆಲ್ಲ ಹಿಂದುಗಳು ಒಟ್ಟಾಗುವುದು ಮಾತ್ರವಲ್ಲದೆ ನಮ್ಮ ಹಿನ್ನೆಲೆ ಯಾವುದು ನಮ್ಮ ಸಂಸ್ಕೃತಿ ಯಾವುದು ಇದರ ಅರಿವು ಉಂಟಾಗುವುದು. ಒಗ್ಗಟ್ಟನ್ನು ನಿರ್ಮಿಸಲು ಮಹೇಶ್ ಶೆಟ್ಟಿಯವರು ಖರ್ಚು ಮಾಡಿ ಇಂತಹ ಕಾರ್ಯಕ್ರಮ ಮಾಡಿದ್ದಾರೆ. ಎಲ್ಲರೂ ಒಗ್ಗಟ್ಟಾಗೋಣ. ಇಲ್ಲಿ ನೀವೆಲ್ಲಾ ಸಮಾಜದವರು ಒಂದಾಗಿದ್ದಿರಿ. ಇದೆ ರೀತಿ ಕರ್ನಾಟಕದಲ್ಲೂ ನೀವೆಲ್ಲರೂ ಒಂದಾಗಿ ಹಿಂದೂ ಧರ್ಮವನ್ನು ಬೆಳೆಸೋಣ ಎಂದರು.
ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರು ದಿಕ್ಸೂಚಿ ಬಾಷಣ ಮಾಡುತ್ತಾ ನ್ಯಾಯ ತೀರ್ಪು ಮಾಡುವಂತಹ ಪುಣ್ಯ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಸಾಮಾಜಿಕ ತಾಣಗಳಲ್ಲಿಯೂ ಸರಣಿಯಾಗಿ ಬರುತ್ತಿದ್ದು , ಇಂತಹ ಅಪಪ್ರಚಾರದ ವಿರುದ್ಧ ನಾವು ಮಾತೆತ್ತಬೇಕಾಗಿದೆ. ಯಾವುದೇ ವಿಚಾರವನ್ನು ಪರಾಮರ್ಶೆ ಮಾಡದೆ ಅಪಪ್ರಚಾರ ಮಾಡುವುದು ಸರಿಯಲ್ಲ. ಸೌಜನ್ಯ ನಂತಹ ಎಷ್ಟೋ ಹೆಣ್ಣು ಮಗಳಿಗೆ ಈ ತನಕ ನ್ಯಾಯ ದೊರಕಿಸಿಲ್ಲ. ಶ್ರೀ ಕ್ಷೇತ್ರದ ಮಂಜುನಾಥನೇ ಇದಕ್ಕೆ ನ್ಯಾಯ ದೊರಕಿಸಬೇಕು. ಸೌಜನ್ಯನಿಗೆ ನಡೆದ ದೌರ್ಜನ್ಯದಲ್ಲಿ ಸಾಮೀಲಾದವರ ಎಲ್ಲರಿಗೂ ಶಿಕ್ಷೆಯಾಗಬೇಕು. ನಮ್ಮ ನಂಬಿಕೆಗೆ ನ್ಯಾಯ ದೊರಕುವಂತೆ ನಾವು ಹೋರಾಡಬೇಕು. ಅದು ಕೇವಲ ಸೌಜನ್ಯ ಮಾತ್ರವಲ್ಲ ಇನ್ನು ಕೆಲವು ಹೆಣ್ಣು ಮಕ್ಕಳಿದ್ದಾರೆ. ಅವರಿಗೂ ನ್ಯಾಯ ದೊರಕಬೇಕು. ಹೆಣ್ಣು ಮಗಳಿಗೆ ಅನ್ಯಾಯವಾದಲ್ಲಿ ಸಮಾಜ ಸಹಿಸುದಿಲ್ಲ. ಸೌಜನ್ಯ ಪ್ರಕರಣ ದಂತೆ ಕರ್ನಾಟಕದ ಎಲ್ಲಾ ಹೆಣ್ಮಕ್ಕಳಿಗೆ ಅನ್ಯಾಯವಾದ ಪ್ರಕರಣಕ್ಕೆ ಕೊನೆಯಾಗಲಿ. ಸೌಜನ್ಯ ನಿಗೆ ನ್ಯಾಯ ಸಿಗಲಿ ಹಾಗೂ ಧರ್ಮಸ್ಥಳದ ನಂಬಿಕೆ ಉಳಿಯಲಿ. ಸದೃಡ ಭಾರತ ನಿರ್ಮಾಣ ಮಾಡೋಣ ಎಂದರು.
ಸಮಾವೇಶದಲ್ಲಿ ಮುಖ್ಯ ಗೌರವ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಡಾ. ಪಿ ವಿ ಶೆಟ್ಟಿ, ಬಿಲ್ಲವರ ಎಸೋಸಿಯೇಷನ್ ಮುಂಬಯಿಯ ಪರವಾಗಿ, ಎನ್ ಟಿ ಪೂಜಾರಿ, ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಿಎಂಡಿ ಡಾ. ಆರ್. ಕೆ. ಶೆಟ್ಟಿ, ಮೀರಾ ಭಾಯಂಧರ್ ನ ಮಾಜಿ ಸಮಾಜ ನಗರ ಸೇವಕ ಅರವಿಂದ ಎ ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಉಪಾಧ್ಯಕ್ಷ ಅಶೋಕ್ ಸುವರ್ಣ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿ, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ ಮುಲ್ಯ, ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಉದಯ ಅಧಿಕಾರಿ, ಹೆಗ್ಗಡೆ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ಮನೋಜ್ ಹೆಗ್ಡೆ, ಸಾಫಲ್ಯ ಸೇವಾ ಸಂಘದ ಪರವಾಗಿ ಕೃಷ್ಣ ಕುಮಾರ್ ಬಂಗೇರ, ಶ್ರೀ ರಜಕ ಸಂಘ ಮುಂಬಯಿಯ ಅಧ್ಯಕ್ಷರಾದ ಸಿಎ ವಿಜಯ ಕುಂದರ್ ಆಹಾರ್ ಅಧ್ಯಕ್ಷ ಸುಧಾಕರ್ ಶೆಟ್ಟಿ , ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷರಾದ ರವೀಶ್ ಆಚಾರ್ಯ ಉಪಸ್ಥಿತರಿದ್ದರು.
ಉದ್ಯಮಿ ಸಮಾಜಸೇವಕ ಎರ್ಮಾಳ್ ಹರೀಶ್ ಶೆಟ್ಟಿ ,ಸಚ್ಚಿದಾನಂದ ಶೆಟ್ಟಿ, ಮುನ್ನಲಾಗುತ್ತು, ಸುದೇಶ್ ಶೆಟ್ಟಿ ತೆಳ್ಳಾರ್, ಸಚ್ಚು ಬೋಳ, ಸುಕೇಶ್ ಶೆಟ್ಟಿ ತೆಳ್ಳಾರ್, ಜಯ ಪೂಜಾರಿ, ರವೀಂದ್ರ ಶೆಟ್ಟಿ ಕೊಟ್ರಪ್ಪಾಡಿ, ಅರುಣ್ ಶೆಟ್ಟಿ ಪಣಿಯೂರು, ರತ್ನಾಕರ್ ಶೆಟ್ಟಿ ಥಾಣೆ, ಸುರೇಶ್ ಶೆಟ್ಟಿ ಗಂಧರ್ವ, ಸುರೇಶ್ ಕರಿಯ ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ , ಸುಧಾಕರ್ ಶೆಟ್ಟಿ ಮಂದಾರ್ತಿ, ಹರೀಶ್ ರೈ ಕುಂಬ್ಳೆ, ವಸಂತ್ ಶೆಟ್ಟಿ, ಗುಣಪಾಳ್ ಶೆಟ್ಟಿ ಠಾಣೆ, ಮನೋಜ್ ಶೆಟ್ಟಿ, ರಾಜೇಶ್ ಶೆಟ್ಟಿ ಕಾಪು , ಸತೀಶ್ ಪೂಜಾರಿ ಬಾಯಂದರ್, ರಾಜೇಶ್ ಶೆಟ್ಟಿ ಕಾಪು ಕಲ್ಲಿ, ದಿನೇಶ್ ಶೆಟ್ಟಿ ಪಾದೂರು, ಜಯಶೀಲ ತಿಂಗಳಾಯ, ರಾಘವೇಂದ್ರ ಬಂಗೇರ, ಪ್ರಫುಲ್ಲ ಪೂಜಾರಿ, ಶೇಖರ್ ಪೂಜಾರಿ ಶಿವಸೇನಾ, ಕರುಣಾಕರ್ ಶೆಟ್ಟಿ ಕುಕ್ಕುಂದೂರು ಗುಣಪಾಲ್ ಶೆಟ್ಟಿ ಕುಕ್ಕುಂದೂರು, ವೇಣುಗೋಪಾಲ್ ಇನ್ನಂಜೆ, ಸತೀಶ್ ಶೆಟ್ಟಿ, ರಾಜೇಶ್ ಕುಂದರ್, ಪ್ರವೀಣ್ ಶೆಟ್ಟಿ ವಾಮಂಜೂರು, ಸೀತಾರಾಮ್ ಸುವರ್ಣ, ಅಶೋಕ್ ಶೆಟ್ಟಿ , ಶರತ್ ಶೆಟ್ಟಿ ಬಾಯಂದರ್, ಸಹಕರಿಸಿದರು.
ವಿಜಯ ಶೆಟ್ಟಿ ಮೂಡುಬೆಳ್ಳೆ ಇವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ನಂತರ ಭಾರತ ಮಾತೆ, ಶ್ರೀರಾಮಚಂದ್ರ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಹೇಶ್ ಶೆಟ್ಟಿ ತೆಳ್ಳಾರ್ ಅವರ ಸಹೋದರ ಸಮಾಜ ಸೇವಕ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಲಾವಿದ ಜಿಕೆ ಕೆಂಚನಕೆರೆ ಸಭಾ ಕಾರ್ಯಕ್ರಮವನ್ನು ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ನಿರ್ವಹಿಸಿದರು
ತುಳು ಕನ್ನಡಿಗರ ವಿವಿಧ ಸಂಘಟನೆಗಳ ಪ್ರಮುಖರು ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಆಗಮಿಸಿ ಬಲಿಷ್ಠ ಹಿಂದು ಸಮಾಜ ನಿರ್ಮಾಣಕ್ಕೆ ತಮ್ಮ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
Comments are closed.