Mumbai

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ; ‘ಮೆಟ್ರೋ ಮ್ಯಾನ್’ ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮುಂಬಯಿ: ಜಾರ್ಜ್ ಫರ್ನಾಂಡಿಸ್ ರವರ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿಯನ್ನು ದೇಶದ ಉನ್ನತ ಮಟ್ಟದ ವ್ಯಕ್ತಿತ್ವವನ್ನು ಹೊಂದಿದ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಇವರಿಗೆ ಪ್ರದಾನಿಸಲು ನಮಗೆ ಬಹಳ ಸಂತೋಷವಾಗಿದೆ. ಕೊಂಕಣ ರೈಲ್ವೆ ಜಾರ್ಜ್ ಫರ್ನಾಂಡಿಸ್ ರವರ ಕನಸು, ಅವರ ಕನಸನ್ನು ನನಸಾಗಿಸುವಲ್ಲಿ ಡಾ. ಇ. ಶ್ರೀಧರನ್ ರವರ ಕಾರ್ಯ ಮರೆಯುವಂತಿಲ್ಲ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿಯವರು ನುಡಿದರು.

25 ನೇ ವರ್ಷದ ಸಂಭ್ರಮದಲ್ಲಿರುವ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗಾಗಿ ಕ್ರೀಯಾಶೀಲವಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮಾಜಿ ಕೇಂದ್ರ ಸಚಿವ, ಜಿಲ್ಲೆಯವರೇ ಆದ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ಪ್ರಧಾನ ಸಮಾರಂಭವನ್ನು 5 ನೇ ಸೆಪ್ಟೆಂಬರ್, 2024 ರಂದು ಬಂಟರ ಭವನ, ಕುರ್ಲಾ ಪೂರ್ವ, ಮುಂಬಯಿ ಇಲ್ಲಿ ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್ ರ ಅಧ್ಯಕ್ಷತೆಯಲ್ಲಿ ಜರಗಿದ್ದು “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಇವರಿಗೆ ಪ್ರಶಸ್ತಿ ಪ್ರದಾನಿಸಿ ದಿ. ಜಾರ್ಜ್ ಫರ್ನಾಂಡಿಸ್ ರವರ ಸಾಧನೆ ಬಗ್ಗೆ ಮಾತನಾಡಿದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಜಾರ್ಜ್ ಫರ್ನಾಂಡಿಸ್ ಅವರ ಹೆಸರನ್ನು ಮಂಗಳೂರು ವಿಮಾನ ನಿಲ್ಧಾಣಕ್ಕೆ ಪುನರ್ ನಾಮಕರಣ ಮಾಡುಲು ಪ್ರತಿಯೊಬ್ಬರು ಪಕ್ಷ ಬೇದ ಮರೆತು ಪ್ರೋತ್ಸಾಹಿಸಬೇಕಾಗಿ ವಿನಂತಿಸುತ್ತಾ, ದೇಶದ ಜೀವನಾಡಿಯಾಗಿರುವ ಭಾರತೀಯ ರೈಲನ್ನು ಆಧುನೀಕರಣಗೊಳಿಸುವಲ್ಲಿ ಹಾಗೂ ಕೊಂಕಣ ರೈಲು ಮಾರ್ಗವನ್ನು ಯಶಸ್ಸಿಗೊಳಿಸುವಲ್ಲಿ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಡಾ. ಇ. ಶ್ರೀಧರನ್ ಅವರ ಕೊಡುಗೆ ಅಪಾರ. ಸಮಿತಿಯ ಎಲ್ಲಾ ಸಾಧನೆಗಳ ಯಶಸ್ಸಿಗೆ ಇಂದಿನ ಹಾಗೂ ಮಾಜಿ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಕೊಡುಗೆ ಅಪಾರ ಎಂದರು.

ಸಮಾರಂಭದ ಅಧ್ಯಕ್ಷರೆಯನ್ನು ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್ ಅವರು ಕಳೆದ 25 ವರ್ಷಗಳಲ್ಲಿ ನಾವು ಹಲವಾರು ಸಮಾರಂಭವನ್ನು ನಡೆಸಿದ್ದು ಇಂದಿನ ಕಾರ್ಯಕ್ರಮವ ಸಮಿತಿಯಲ್ಲಿ ಇತಿಹಾಸದಲ್ಲಿ ಅವಿಸ್ಮರಣೀಯ. ಕೊಂಕಣ ರೈಲಿನ ನಿರ್ಮಾಣವಾದ ಬಗ್ಗೆ, ಅದರ ವೇಗದ ಬಗ್ಗೆ ಇಂದು ತಿಳಿದು ಬಂದಿದೆ. ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 25 ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯಶಸ್ವಿ ಹೋರಾಟ ನಡೆಸಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಕಳೆದ ಮೂರು ವರ್ಷಗಳಿಂದ ಪುನ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಸ್ಥಾಪನೆಯಾಗಲು ದೊಡ್ಡ ಮಟ್ಟದ ಸ್ಥಳವಕಾಶವನ್ನು ಕಾದಿರಿಸಲಾಗಿದೆ. ನಮ್ಮ ಜಿಲ್ಲೆಗಳು ಹಳ್ಳಿಗಳಿಂದ ಪಟ್ಟಣವಾಗಿದೆ. ಆದುದರಿಂದ ಜಿಲ್ಲೆಗಳಲ್ಲಿ ಆಧುನಿಕ ಸ್ಮಶಾನದ ಅಗತ್ಯವಿದೆ. ಕಡಲ ಕೊರೆತಕ್ಕೆ ಶಾಸ್ವತ ಪರಿಹಾರವಾಗಬೇಕಾಗಿದೆ. ಸಮಿತಿಯು ಜಿಲ್ಲೆಗಳ ಅಭಿವೃದ್ದಿಗಾಗಿ ನಿರಂತರ ಹೋರಾಟ ನಡೆಸುವಲ್ಲಿ ಹಿಂದಕ್ಕೆ ಸರಿಯುದಿಲ್ಲ. ಸಮಿತಿಯ 25 ನೇ ವರ್ಷದ ಸಂಭ್ರಮ ವಿಜ್ರಂಭಣೆಯಿಂದ ನಡೆಯಲಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಖ್ಯಾತಿಯ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ನ್ನು ಬಹಳ ಗೌರವದಿಂದ ಆದ್ದೂರಿಯಾಗಿ ಪ್ರದಾನಿಸಿದರು. ಅವರ ಧರ್ಮಪತ್ನಿ ರಾಧಾ ಶ್ರೀಧರ್ ಅವರನ್ನು ಸುಧಾ ಎಲ್ ಅಮೀನ್ ಹಾಗೂ ಇತರ ಗಣ್ಯರು ಅಭಿನಂದಿಸಿ ಗೌರವಿಸಿದರು. ಸಮಿತಿಯ ಉಪಾಧ್ಯಕ್ಷ ಹಿರಿಯಡ್ಕ ಮೋಹನದಾಸ್ ಅಭಿನಂದನಾ ನುಡಿಗಳನ್ನಾಡಿದರು,

ರಂಜನಿ ಆರ್. ಮೊಯ್ಲಿಯರವ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರಿನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಆರ್ಗ್ಯಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್ ನ ಸಿ. ಎಂ. ಡಿ. ತೋನ್ಸೆ ಆನಂದ ಎಂ. ಶೆಟ್ಟ, ಮುಂಬಯಿಯ ಮಾಜಿ ಸಂಸದ ಗೋಪಾಲ್ ಶೆಟ್ಟಿ, ಕರ್ನಾಟಕದ ಮಾಜಿ ಸಚಿವ ನಾರಾಯಣ ಗೌಡ ಇವರನ್ನು ಸಮಿತಿಯ ವಕ್ತಾರರಾದ ದಯಾಸಾಗರ ಚೌಟ, ನ್ಯಾ. ಶಶಿಧರ್ ಕಾಪು, ಡಾ.ಸುರೇಂದ್ರಕುಮಾರ್ ಹೆಗ್ಡೆ ಪರಿಚಯಿಸಿದರು.

ವೇದಿಕೆಯಲ್ಲಿ ಬಂಟ್ಸ್ ಸಂಘ ಮುಂಬಯಿ ಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ. ಸುರೇಶ್ ಎಸ್. ರಾವ್, ಬಿಲ್ಲವರ ಅಸೋಸಿಯೇಷನ್, ಮುಂಬಯಿ, ಅಧ್ಯಕ್ಷ ಹರೀಶ್ ಜಿ. ಅಮೀನ್, ವಿಶ್ವ ದೇವಾಡಿಗ ಮಹಾ ಮಂಡಲ ಅಧ್ಯಕ್ಷ ಧರ್ಮಪಾಲ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಜಿಲ್ಲಾಧ್ಯಕ್ಷ ಡಿ.ಆರ್. ರಾಜು, ಉಪಾಧ್ಯಕ್ಷರಾದ ಪಿ.ಧನಂಜಯ ಶೆಟ್ಟಿ, ಸಿಎ. ಐ.ಆರ್.ಶೆಟ್ಟಿ, ಚಂದ್ರಶೇಖರ ಆರ್. ಬೆಲ್ಚಡ, ಕೆ. ಎಲ್. ಬಂಗೇರ, ಡಾ.ಆರ್.ಕೆ.ಶೆಟ್ಟಿ, ನ್ಯಾ. ಆರ್. ಎಂ. ಭಂಡಾರಿ, ಗಿರೀಶ್ ಬಿ.ಸಾಲಿಯಾನ್, ಜಿತೇಂದ್ರ ಗೌಡ, ಗೌ. ಕಾರ್ಯದರ್ಶಿಗಳಾದ ರವಿ ಎಸ್.ದೇವಾಡಿಗ, ಹ್ಯಾರಿ ಸಿಕ್ವಿರಾ ಮತ್ತು ದೇವದಾಸ್ ಕುಲಾಲ್, ಗೌ. ಕೋಶಾಧಿಕಾರಿ ತುಳಸೀದಾಸ್ ಎಲ್.ಅಮಿನ್, ಜೊತೆ ಕೋಶಾಧಿಕಾರಿಗಳಾದ ಸದಾನಂದ ಆಚಾರ್ಯ ಮತ್ತು ತೋನ್ಸೆ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್.ಶೆಟ್ಟಿ, ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಜೊತೆ ಕಾರ್ಯದರ್ಶಿ, ಸುರೇಂದ್ರ ಮೆಂಡನ್, ಶೇಖರ್ ಗುಜ್ಜರಬೆಟ್ಟು, ಸದಸ್ಯರಾದ ಡಾ.ಪ್ರಭಾಕರ ಶೆಟ್ಟಿ ಬೋಳ, ಎಂ. ಎನ್. ಕರ್ಕೇರ, ಶ್ಯಾಮ್ ಎನ್.ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಕರುಣಾಕರ ಹೆಜಮಾಡಿ, ಬಾಲಕೃಷ್ಣ ಭಂಡಾರಿ, ವಾಸು ಎಸ್. ದೇವಾಡಿಗ, , ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ, ರಮಾನಂದ ರಾವ್, ರಾಮಚಂದ್ರ ಗಾಣಿಗ, ಉತ್ತಮ್ ಶೆಟ್ಟಿಗಾರ್, ಶ್ರೀನಿವಾಸ ಸಾಫಲ್ಯ, ಚಿತ್ರಾಪು ಕೆ.ಎಂ.ಕೋಟ್ಯಾನ್, ರಾಕೇಶ್ ಭಂಡಾರಿ, ಜಯಪ್ರಕಾಶ್ ಕಾಮತ್, ಸಿ.ಎಸ್. ಗಣೇಶ್ ಎಸ್.ಶೆಟ್ಟಿ ಮೊದಲಾದವರು ಸಹಕರಿಸಿದರು. ಮಹಾನಗರದ ಎಲ್ಲಾ ಜಾತೀಯ ಸಂಘಟನೆಗಳು ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗೌ. ಕಾರ್ಯದರ್ಶಿ ದೇವದಾಸ್ ಕುಲಾಲ್ ಅವರು ವಂದನಾರ್ಪಣೆ ಮಾಡಿದರು.

******

ದೇಶಕ್ಕೆ ಕೊಂಕಣ ರೈಲ್ವೆ ಜಾರ್ಜ್ ಫೆರ್ನಾಂಡಿಸ್ ರವರ ಕೊಡುಗೆ – ಪದ್ಮವಿಭೂಷಣ ಡಾ. ಇ. ಶ್ರೀಧರನ್

ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ನ್ನು ಬಹಳ ಸಂತೋಷದಿಂದ ಸ್ವೀಕರಿಸಿ ಮಾತನಾಡಿದ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಇಂದು ಜಾರ್ಜ್ ಫೆರ್ನಾಂಡಿಸ್ ಹೆಸರಲ್ಲಿ ನೀಡುತ್ತಿರುವ ಈ ಪ್ರಶಸ್ತಿಯನ್ನು ಪಡೆಯಲು ಬಹಳ ಸಂತೋಷವಾಗುತ್ತಿದೆ. 840 ಕಿಲೋ ಮೀಟರ್ ಉದ್ದದ, 93 ಸುರಂಗಗಳು ಮತ್ತು 157 ದೊಡ್ಡ ಮಟ್ಟದ ಸೇತುವೆಯನ್ನು ಹೊಂದಿದ ದೇಶದ ಮೊದಲ ಹೈ ಸ್ಪೀಡ್ ಕೊಂಕಣ ರೈಲ್ವೆ ನಿಜಕ್ಕೂ ಜಾರ್ಜ್ ಫೆರ್ನಾಂಡಿಸ್ ರವರ ಕೊಡುಗೆ. ಜಾರ್ಜ್ ಫೆರ್ನಾಂಡಿಸ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ ನಾನು ಈ ಯೋಜನೆಯನ್ನು ಕೇವಲ ಏಳು ವರ್ಷಗಳಲ್ಲಿ ಸಂಪೂರ್ಣ ಗೊಳಿಸುವಲ್ಲಿ ಯಶಸ್ಸಿಯಾಗಿದ್ದೇನೆ, ಇದಕ್ಕೆ ಜಾರ್ಜ್ ಫೆರ್ನಾಂಡಿಸ್ ಅವರ ಪ್ರೋತ್ಸಾಹವೂ ಕಾರಣ ಎಂದು 93ರ ಹರೆಯದ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರು ತಿಳಿಸಿದರು. ಕೊಂಕಣ ರೆಲ್ವೆಯಿಂದಾಗಿ ಕೇರಳಕ್ಕೂ ಬಹಳ ಪ್ರಯೋಜವಾಗಿದೆ. ನನಗೆ ಈ ಅವಕಾಶವನ್ನು ನೀಡಿದವರು ದಿ. ಜಾರ್ಜ್ ಫೆರ್ನಾಂಡಿಸ್. ಕೊಂಕಣ ರೈಲ್ವೆ ಜಾರ್ಜ್ ಫೆರ್ನಾಂಡಿಸ್ ರ ಕನಸಾಗಿದ್ದು ಅವರ ಕನಸು ಅವರಿರುವಾಗಲೇ ನೆನಸಾಗಿದೆ. ಇಂದು ನನಗೆ ಅವರ ಹೆಸರಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದಕ್ಕೆ ಹಾಗೂ ನನ್ನ ಧರ್ಮ ಪತ್ನಿಯನ್ನು ಗೌರವಿಸಿದಕ್ಕೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಎಲ್ಲರಿಗೂ ಹಾಗೂ ಜಯಕೃಷ್ಣ ಎ.ಶೆಟ್ಟಿ ಯವರಿಗೂ ಕೃತಜ್ನತೆ ಸಲ್ಲಿಸುತ್ತಿದ್ದೇನೆ ಎಂದರು.

******

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಇವತ್ತಿನ ಕಾರ್ಯಕ್ರಮವು ಮುಂದೆ ಯಾವಾಗಲೂ ನೆನಪಿಡಬೇಕಾದ ಕಾರ್ಯಕ್ರಮ. ಪದ್ಮವಿಭೂಷಣ ಡಾ. ಇ. ಶ್ರೀಧರನ್ ಮಾಡಿದ ಕಾರ್ಯವು ಭಾರತ ರತ್ನಕ್ಕಿಂತಲೂ ಉನ್ನತ ಮಟ್ಟದ ಪ್ರಶಸ್ತಿಗೆ ಯೋಗ್ಯವಾಗಿದೆ. ಇವರಿಗೆ ಭಾರತ ರತ್ನ ಸಿಗಲಿ. ಇವರು ಮಾಡಿದ ಸಾಧಯು ಜನ ಸಾಮಾನ್ಯರು ಎಂದೂ ಮರೆಯಲಿಕ್ಕಿಲ್ಲ. ಜಾರ್ಜ್ ಫೆರ್ನಾಂಡಿಸ್ ಇಂದು ನಮ್ಮೊಂದಿಗಿಲ್ಲದಿದ್ದರೂ ಅಗರ ಆತ್ಮ ಇಲ್ಲಿ ಎಲ್ಲಿಯಾದರೂ ಇರಬೇಕು. ಇಂತಹ ಕಾರ್ಯಕ್ರಮದಲ್ಲಿ ಬಾಗವಹಿಸುವುದು ನಿಜಕ್ಕೂ ನಮ್ಮ ಸೌಭಾಗ್ಯ.
– ಗೋಪಾಲ್ ಶೆಟ್ಟಿ, ಉತ್ತರ ಮುಂಬಯಿಯ ಮಾಜಿ ಸಂಸದರು
******
ಇಂದು ನನಗೆ ಜಿಲ್ಲೆಯಲ್ಲಿ ಬೇರೆ ಕಾರ್ಯಕ್ರಮವಿದ್ದರೂ ದಿ. ಜಾರ್ಜ್ ಫೆರ್ನಾಂಡಿಸ್ ರವರ ಸಂಸ್ಮರಣಾ ಕಾರ್ಯಕ್ರಮವಾದುದರಿಂದ ಅದೆಲ್ಲವನ್ನೂ ಬದಿಗೊತ್ತಿ ಬಂದಿರುವೆನು. ಇದು ಮಹತ್ವಪೂರ್ಣವಾದ ಕಾರ್ಯಕ್ರಮ. ನಾನು ಜಾರ್ಜ್ ಫೆರ್ನಾಂಡಿಸ್ ಅವರಿಂದ ಪ್ರೇರಿತನಾಗಿದ್ದೇನೆ. ಮಂಗಳೂರಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಲ್ಲಿ ರಸ್ತೆಯೊಂದಕ್ಕೆ ನಾಮಕರಣ ಮಾಡಿರುವೆವು. ಅವರು ಕಲಿತ ಕಾಲೇಜಿನಲ್ಲಿ ನಾನೂ ಕಲಿತಿರುವುದು ನನ್ನ ಸೌಭಾಗ್ಯ. ಜಾರ್ಜ್ ಫೆರ್ನಾಂಡಿಸ್ ರವರ ಕನಸನ್ನು ನೆನಸಾಗಿರಿಸಿದವರಿಗೆ ಅವರ ಸ್ಮರಣಾರ್ಥ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾಗಿದೆ. ಮಂಗಳೂರು – ಬೆಂಗಳೂರು ರೈಲು ಮಾರ್ಗವನ್ನು ಆಧುನೀಕರಣ ಹಾಗೂ ಹೈಸ್ಫೀಡ್ ಗೊಳಿಸುವಲ್ಲಿ ನಾನೂ ಡಾ. ಇ. ಶ್ರೀಧರನ್ ಅವರಲ್ಲಿ ಅವರ ಪಾಲಕ್ಕಾಡ್ ನ ಮನೆಗೆ ತೆರಳಿ ಈ ಬಗ್ಗೆ ಮಾತನಾಡಲಿದ್ದೆವೆ.

– ಕ್ಯಾಪ್ಟನ್ ಬ್ರಿಜೇಶ್ ಚೌಟ , ಮಂಗಳೂರಿನ ಸಂಸದರು
******

ಜಿಲ್ಲೆಗಳ ಪರಿಸರ ಹಾಳಾಗದಂತೆ ಕಳೆದ 25 ವರ್ಷಗಳಿಂದ ಜಿಲ್ಲೆಗಳ ಅಭಿವೃದ್ದಿಗಾಗಿ ಸಮಿತಿಯು ಮಾಡುತ್ತಿರುವ ಕಾರ್ಯ ಅಭಿನಂದನೀಯ. ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ಪ್ರಶಸ್ತಿ ಗಳಿಸಿದ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರಿಗೆ ಅಭಿನಂದನೆಗಳು. ಸಮಿತಿಯಿಂದ ಇನ್ನೂ ಇಂತಹ ಹೆಚ್ಚಿನ ಕಾರ್ಯಗಳು ನಡೆಯುವಂತಾಗಲಿ.
– ನಾರಾಯಣ ಗೌಡ , ಕರ್ನಾಟಕದ ಮಾಜಿ ಸಚಿವ ರು
******

93 ರ ಹರೆಯದ ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಮತ್ತು ಜಾರ್ಜ್ ಫೆರ್ನಾಂಡಿಸ್ ಜೂನ್ ತಿಂಗಳಲ್ಲಿ ಜನಿಸಿದವರು. 2032 ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರನ್ನು ಇನ್ನೊಮ್ಮೆ ಇಲ್ಲಿಗೆ ಆಮಂತ್ರಿಸಿ ಮೆಟ್ರೋ ಮ್ಯಾನ್” ಆಫ್ ಇಂಡಿಯಾ 100 ನ್ನು ದಾಟಿದ ಕಾರ್ಯಕ್ರಮವನ್ನು ನಡೆಸುವಂತಾಗಲಿ. ಡಾ. ಇ. ಶ್ರೀಧರನ್ ಕೇವಲ ದೇಶಕ್ಕೆ ಮಾತ್ರವಲ್ಲಿ ಇಡೀ ಏಶ್ಯಾ ಖಂಡಕ್ಕೆ ಹೀರೋ ಆಗಿದ್ದಾರೆ, ಅವರಿಗೆ ಶುಭ ಹಾರೈಕೆ.

– ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು – ಬಂಟ್ಸ್ ಸಂಘ ಮುಂಬಯಿ

******

ಇಂದು ಸರಿಯಾದ ವ್ಯಕ್ತಿಗೆ ಸರಿಯಾದ ಪ್ರಶಸ್ತಿ ದೊರಕಿದೆ. ಈ ಸಮಿತಿಯಲ್ಲಿ ನಿಜಕ್ಕೂ ಪ್ರತಿಭಾವಂತ ವ್ಯಕ್ತಿಗಳಿದ್ದು ಜಿಲ್ಲೆಗಳಿಗಾಗಿ ಉತ್ತಮ ಕಾರ್ಯಗಳು ನಡೆಯುತ್ತಿದೆ. ಈ ಸಮಿತಿಯನ್ನು ನಾವಲ್ಲರೂ ಪ್ರೋತ್ಸಾಹಿಸಿ ನಮ್ಮ ಜಿಲ್ಲೆಗಳ ಅಭಿವೃದ್ದಿಗಾಗಿ ಸಹಕರಿಸೋಣ. ಸಮಿತಿಗೆ ಹಾಗೂ ಸಮಿತಿಯ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು.

ಹರೀಶ್ ಜಿ. ಅಮೀನ್, ಅಧ್ಯಕ್ಷರು – ಬಿಲ್ಲವರ ಅಸೋಸಿಯೇಷನ್, ಮುಂಬಯಿ
******

ತಂತ್ರಜ್ನಾನದ ಅಲವಡಿಕೆ ಯಿಂದ ಜಿಲ್ಲೆಗಳ ತ್ವರಿತ ಅಭಿವೃದ್ದಿ ಸಾಧ್ಯ. ಜಿಲ್ಲೆಗಳ ಅಭಿವೃದ್ದಿಗಾಗಿ ಸಮಿತಿಯ ಸಂಸ್ಥಾಪಕರು ಎಲ್ಲರನ್ನೂ ಸೇರಿಸಿ ತನ್ನನ್ನು ಸಂಪೂರ್ಣಾವಾಗಿ ಉಪಯೋಗಿಸಿತ್ತಿರುವುದು ಮೆಚ್ಚಲೇ ಬೇಕಾಗಿದೆ. ಜಾರ್ಜ್ ಫೆರ್ನಾಂಡಿಸ್ ಅವರು ಚಲವಾದಿ, ಅವರದ್ದು ಯಾರಿಗೂ ಮಣಿಯದ ವ್ಯಕ್ತಿತ್ವ. ಡಾ. ಇ. ಶ್ರೀಧರನ್ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಕೊಂಕಣ ರೈಲನ್ನು ಅಸ್ಥಿತ್ವಕ್ಕೆ ತಂದಿದ್ದು ಇಂದು ಅವರ ಹೆಸರಲ್ಲಿ ಡಾ. ಇ. ಶ್ರೀಧರನ್ ಅವರಿಗೆ ಪ್ರಸಸ್ತಿ ಯನ್ನು ನೀಡುತ್ತಿರುವುದು ಅರ್ಥಪೂಣವಾಗಿದೆ,

– ತೋನ್ಸೆ ಆನಂದ ಎಂ. ಶೆಟ್ಟ, ಆರ್ಗ್ಯಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್ ನ ಸಿ. ಎಂ. ಡಿ.

******

ಇವತ್ತಿನ ಕಾರ್ಯಕ್ರಮ ಮುಂದೆ ಯಾವಾಗಲೂ ನೆನಪಿಡಬೇಕಾದ ಕಾರ್ಯಕ್ರಮ. ನೀವೆಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದೀರಿ. ಈ ಸಂಘಟನೆಯ ಅಭಿವೃದ್ದಿಗಾಗಿ ನಮ್ಮ ಸಂಸ್ಥಾಪಕರ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಜಯಕೃಷ್ಣ ಶೆಟ್ಟಿಯವರನ್ನು ಈ ಸಂದಭದಲ್ಲಿ ಅಭಿನಂದಿಸುತ್ತೇನೆ. ಮುಂದಿನ ನಮ್ಮ ಕಾರ್ಯಕ್ರಮಗಳನ್ನು ಇದೇ ರೀತಿ ಅದ್ದೂರಿಯಾಗಿ ನಡೆಸಲು ಸಹಕರಿಸಲಿ. ನಮ್ಮ ಊರಿನ ರೈಲು ಹಳೇ ಕಾಲದಾಗಿದ್ದು ಇದನ್ನು ಸರಕಾರದ ಗಮನಕ್ಕೆ ತರುವಲ್ಲಿ ನಾವೆಲ್ಲರೂ ಪ್ರಯತ್ನಿಸೋಣ.
– ಧರ್ಮಪಾಲ್ ದೇವಾಡಿಗ, ಅಧ್ಯಕ್ಷರು – ವಿಶ್ವ ದೇವಾಡಿಗ ಮಹಾ ಮಂಡಲ

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್ / ಭಾಸ್ಕರ ಕಾಂಚನ್

Comments are closed.