Mumbai

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ, ಪ್ರಶಸ್ತಿ ಪ್ರಧಾನ

Pinterest LinkedIn Tumblr

ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ನಾಮಕರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ನೆನಪಿಡುವಂತಾಗಲಿ – ತೋನ್ಸೆ ಜಯಕೃಷ್ಣ ಶೆಟ್ಟಿ

ಮುಂಬಯಿ: ಜಯಶ್ರಿಕೃಷ್ಣ ಪರಿಸರ ಪ್ರೇಮಿ ಯ ಮೂಲ ಉದ್ದೇಶ ಪರಿಸರ ರಕ್ಷಣೆ ಯೊಂದಿಗೆ ಕೈಗಾರಿಕೋಧ್ಯಮಕ್ಕೆ ಪ್ರಾಶಸ್ತ್ಯ ನೀಡುವುದು. ಅರಣ್ಯ ರಕ್ಷಣೆ ಮಾಡುವ ಸಂತನಿಗೆ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಯಂದು ರಾಷ್ಟ್ರೀಯ ಪ್ರಶಸ್ತಿ ಪ್ರಧಾನಿಸಿದ್ದೇವೆ. ರಾಜಕೀಯದ ಸಂತನೆನಿಸಿಕೊಂಡ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ನೆನಪಿಡುವಂತಾಗಲು ರಾಜ್ಯದ ಎಲ್ಲ ಜನನಾಯಕರು ಪಕ್ಷ ಬೇದವಿಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರು ನೀಡಲಿ ಎಂದು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ನುಡಿದರು.

ಜೂ. 3 ರಂದು ರಂಜನಿ ಸುಧಾಕರ ಹೆಗ್ಡೆ ಸಭಾಗೃಹ, ಬಂಟರ ಭವನ ಅನೆಕ್ಸ್ ಹಾಲ್, ಕುರ್ಲಾ ಪೂರ್ವ ಮುಂಬಯಿ ಇಲ್ಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ನಡೆದ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕರಾವಳಿ ಜಿಲ್ಲೆಗಳಲ್ಲಿ ಪರಸರ ರಕ್ಷಣೆಯೊಂದಿಗೆ ಕೈಗಾರಿಕೋದ್ಯಮಕ್ಕೆ ಅವಕಾಶ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಇನ್ನೂ ಹೆಚ್ಚು ಪ್ರಾಧಾನ್ಯತೆ ನೀಡಬೇಕು. 22 ವರ್ಷಗಳಿಂದ ಸಮಿತಿ ಉಭ ಜಿಲ್ಲೆಗಳಲ್ಲಿ ಅಭಿವೃದ್ದಿಯೊಂದಿಗೆ ಉದ್ಯಮಗಳು ಸ್ಥಾಪನೆಯಾಗಬೇಕೆಂದು ಶ್ರಮಿಸಿದ ಬಗ್ಗೆ ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಜನನಾಯಕರು ಯಾವುದೇ ಪಕ್ಷದಲ್ಲಿರಲಿ ಜಿಲ್ಲೆಯ ಅಭಿವೃದ್ದಿಗೆ ಬದುಕನ್ನು ತ್ಯಾಗ ಮಾಡಿದ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ಶಾಸ್ವತವಾಗಿರಬೇಕಾದರೆ ಜಿಲ್ಲೆಯ ರಾಜಕೀಯ ನಾಯಕರು ಶ್ರಮಿಸಬೇಕು ಮತ್ತು ಅದರೊಂದಿಗೆ ಸಮಿತಿ ಕೂಡಾ ಕೈಜೋಡಿಸುತ್ತದೆ, 21ನೇ ಶತಮಾನದತ್ತ ಮುನ್ನಡೆಯುತ್ತಿರುವ ನಾವು ಅಭಿವೃದ್ದಿಯೇ ನಮ್ಮ ಗುರಿಯಾಗಿರಬೇಕು. ಈಗಿನ ಸರಕಾರ ಕರಾವಳಿ ಕರ್ನಾಟಕದ ಅಭಿವೃದ್ದಿಗೆ ಪ್ರಾಮುಖ್ಯತೆಯನ್ನು ನೀಡುದರ ಮೂಲಕ ಪ್ರವಾಸಿ ಕೇಂದ್ರವನ್ನಾಗಿರಿಸಬೇಕು, ನಮ್ಮ ಜಿಲ್ಲೆಗಳು 22 ಸುಂದರವಾದ ನದಿಗಳನ್ನು ಹೊಂದಿದ್ದು ಅದನ್ನು ಮುಖ್ಯ ಉದ್ದೇಶವನ್ನಾಗಿರಿಸಿ ಜಿಲ್ಲೆಯನ್ನು ಪ್ರವಾಸಿ ಕೇಂದ್ರವನ್ನಾಗಿಸಲು ಸರಕಾರ ಶ್ರಮಿಸಬೇಕು. ಜಿಲ್ಲೆಯಲ್ಲಿ ಮೆಟ್ರೋ ರೈಲುಗಳು ಓಡುವಂತಾಗಬೇಕು, ಇದನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಗಮನದಲ್ಲಿಡಬೇಕು. ನಮ್ಮ ಸಮಿತಿಯು ಕೈಗೊಂಡ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಕಾರ್ಯರೂಪಕ್ಕೆ ನಾವು ತರಲಿದ್ದೇವೆ ಎಂದರು.

ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉತ್ತರ ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತುಂಗಾ ಗ್ರೂಫ್ ಆಫ್ ಹೋಟೇಲ್ಸನ ಸಿಎಂಡಿ ಸುಧಾಕರ ಹೆಗ್ದೆ ಯವರು ಮಾತನಾಡುತ್ತಾ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಓರ್ವ ನೇರ ನುಡಿಯ ವ್ಯಕ್ತಿತ್ವವನ್ನು ಹೊಂದವರು. ಪರಿಸರ ಪ್ರೇಮಿ ಸಮಿತಿ ಹೋರಾಟ ದಿಟ್ಟ ನಿಲುವಿನಿಂದಾಗಿ ಜಿಲ್ಲೆಯ ಜನರಿಗೆ ನಾಗಾರ್ಜುನದಿಂದ ಬಹಳಷ್ಟು ಪ್ರಯೋಜನವಾಗಿದೆ. ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ 22 ವರ್ಷಗಳ ಸಾಧನೆ ಸಾಮಾನ್ಯ ಜನರೂ ಕೂಡ ನೆನಪಿಸುವಂತಾಗಲಿಎಂದು ನುಡಿದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಿತಿಯ ಜಿಲ್ಲೆಯ ಉಪಾಧ್ಯಕ್ಷ ಹಿರಿಯ ರಾಜಕಾರಿಣಿ ಜಗದೀಶ್ ಅಧಿಕಾರಿ ಮಾತನಾಡುತ್ತಾ ಪೇಜಾವರ ಶ್ರೀಗಳ ಆಶ್ರೀರ್ವಾದದೊಂದಿಗೆ ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಸಮಿತಿ ಸ್ಥಾಪನೆಗೊಂಡಿದೆ. ಜಿಲ್ಲೆಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಯಾದುದರಿಂದ ಇಂದು ಕರ್ನಾಟಕದಲ್ಲಿ ಉಚಿತ ವಿದ್ಯುತ್ ಯೋಜನೆ ಜಾರಿಗೆ ತರುವಲ್ಲಿ ಸರಕಾರವು ಈ ಸಮಿತಿಗೆ ಕೃತಜ್ನತೆಯನ್ನು ಸಲ್ಲಿಸಬೇಕು. ಜಿಲ್ಲೆಗೆ ಪರಿಸರ ಪ್ರೇಮಿ ಸಮಿತಿಯ ಹೋರಾಟದ ಮೂಲಕ ವಿದ್ಯುತ್ ಸ್ಥಾವರ ಸ್ಥಾಪನೆಯಾಗಿದೆ ಎಂದರು.

ವೇದಿಕೆಯಲ್ಲಿ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ವಿಧಾನ ಪರಿಷತ್ ಸದಸ್ಯ ಎಐಸಿಸಿ ಕಾರ್ಯದರ್ಶಿ ಐವನ್ ಡಿಸಜಾ, ಮಾಜಿ ಎಂಎಲ್‌ಸಿ,, ಕರ್ನಾಟಕ ಬಿಜೆಪಿ ಯ ವಕ್ತಾರರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ತುಂಗಾ ಗ್ರೂಪ್ ಆಫ್ ಹೋಟೆಲ್, ಸಿಎಂ ಡಿ ಸುಧಾಕರ ಎಸ್ ಹೆಗ್ಡೆ, ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್,ಕೋಶಾಧಿಕಾರಿ ತುಳಸಿದಾಸ್ ಅಮೀನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಪ್ರಯತ್ನ ಅರಣ್ಯ ಸೃಷ್ಟಿಕರ್ತರು ಭಾರತದ ಹಸಿರು ಹೀರೋ ಎಂದೇ ಖ್ಯಾತಿ ಪಡೆದ ಡಾ, ರಾಧಾಕೃಷ್ಣ ನಾಯರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಪ್ರಧಾನಿಸಲಾಯಿತು. ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಡಾ. ರಾಧಾಕೃಷ್ಣ ನಾಯರ್ ಅವರು ಭಾರತ ದೇಶ ವಿಕಾಸವಾಗುತ್ತಿದೆ. ಅದರೊಂದಿಗೆ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸಂಸ್ಥೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ. ಇಲ್ಲಿನ ಪ್ರಶಸ್ತಿ ನನ್ನ ಜೀವಮಾನ ಸಾಧನೆಗೆ ಸಂದ ಗೌರವ. ಜೂನ್ ತಿಂಗಳು ಅಂದರೆ ವನಮಹೋತ್ಸವಗಳ ಪರ್ಯಾಯ ತಿಂಗಳು. ವನ ಸಂರಕ್ಷಣೆ ನಮ್ಮ ಕೆಲಸವಾಗಲಿ. ಗುಜರಾಥ್ ನ ಕಚ್ಚ್ ನಂತಹ ಊರಲ್ಲಿ ಕೋರೋನ ಸಂಧರ್ಭದಲ್ಲಿ ಕೂಡಾ ವನ ಸಂರಕ್ಷಣಾ ಕಾರ್ಯವನ್ನು ಮಾಡಿದ್ದೇವೆ. ನಮ್ಮ ತುಳು ನಾಡಿನಲ್ಲಿ ವಿಶಿಷ್ಠವಾದ ಶಕ್ತಿ ಇದೆ. ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ಕಾಡನ್ನು ಉಳಿಸಿ ನಾಡನ್ನು ಬೆಳೆಸುವ ಕಾರ್ಯ ಆಗಬೇಕು. ಅದರೊಂದಿಗೆ ನನ್ನ ಕರ್ತ್ಯವ್ಯವನ್ನು ನಿವಾರಿಸಲು ನಾನು ಸಿದ್ದನಿದ್ದೇನೆ ಎಂದು ನುಡಿದರು.

ಅಭಿನಂದನಾ ಮಾತುಗಳನ್ನು ಪತ್ರಕರ್ತ ದಯಾ ಸಾಗರ್ ಚೌಟ ನುಡಿದರು, ಹಿರಿಯ ಸಾಹಿತಿ ಡಾ. ಸುನಿತಾ ಶೆಟ್ಟಿ ಸಂಸದ ಗೋಪಾಲ ಶೆಟ್ಟಿಯವರ ಬಗ್ಗೆ ರಚಿಸಿದ ಕವಿತೆಯನ್ನು ಡಾ. ಸುರೇಂದ್ರ ಕುಮಾರ್ ಹೆಗ್ಡೆ ವಾಚಿಸಿದರು. ಡಾ. ಆರ್. ಕೆ ಶೆಟ್ಟಿ ಯವರು ಸ್ವಾಗತಿಸಿದರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ದೇವದಾಸ್ ಕುಲಾಲ ಅಬಾರ ಮನ್ನಿಸಿದರು.

ವೇದಿಕೆಯ ಗಣ್ಯರಿಗೆ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಶಸ್ತಿ ಸಮಿತಿಯ ಸಂಚಾಲಕ ಡಾ. ಆರ್, ಕೆ, ಶೆಟ್ಟಿ, ಸಮಿತಿಯ ಉಪಾಧ್ಯಕ್ಷರುಗಳಾದ ಧನಂಜಯ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸಿಎ ಐ ಆರ್ ಶೆಟ್ಟಿ, , ಹಿರಿಯಡ್ಕ ಮೋಹನ್ ದಾಸ್, ನ್ಯಾ ಆರ್‌.ಎಂ. ಭಂಡಾರಿ, ಗಿರೀಶ್ ಬಿ ಸಾಲ್ಯಾನ್, ಜಿತೇಂದ್ರ ಗೌಡ, ಗೌರವ ಪ್ರಧಾನ ಕಾರ್ಯದರ್ಶಿಯಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್,ಕೋಶಾಧಿಕಾರಿ ತುಳಸಿದಾಸ್ ಅಮೀನ್, ಸಮಿತಿಯ ಮಾಜಿ ಅಧ್ಯಕ್ಷರು ಗಳಾದ ಎಡ್ವಕೇಟ್ ಪ್ರಕಾಶ್‌ ಎಲ್. ಶೆಟ್ಟಿ, ವಿಶ್ವನಾಥ್ ಮಾಡ ,ಹರೀಶ್‌ ಕುಮಾರ್ ಶೆಟ್ಟಿ ಮತ್ತು ಜಿಲ್ಲೆಯ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ಗೌರವಿಸಿದರು.

ಪ್ರಾರಂಭದಲ್ಲಿ ತೋನ್ಸೆ ವಿಜಯಕುಮಾರ್ ಶೆಟ್ಟಿ ನಿರೂಪಣೆಯಲ್ಲಿ ವಿಜಯ್ ಶೆಟ್ಟಿ ಮೂಡುಬೆಳ್ಳೆ,
ತೃಷಾ ಆಳ್ವ, ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ಬಂಟರ ಸಂಘ ಮುಂಬೈಯ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯ ಧ್ಯಕ್ಷ ರಂಜನಿ ಸುಧಾಕರ ಹೆಗ್ಡೆ , ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ, ಬಾಂಬೆ ಬಂಟ್ಸ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್. ಅಧ್ಯಕ್ಷ ಹರೀಶ್ ಜಿ ಅಮೀನ್, ಕುಲಾಲ ಸಂಘದ ಅಧ್ಯಕ್ಷ ರಘು ಎ ಮೂಲ್ಯ ಪಾದೆಬೆಟ್ಟು,,ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್, ಬಿಲ್ಲವ ಚೇಂಬರ್ ಆಫ್ ಕೋಮರ್ಸ್ ಅಂಡ್ ಇಂಡಸ್ಟ್ರೀಸ್ ಕಾರ್ಯ ಧ್ಯಕ್ಷ ಎನ್ ಟಿ ಪೂಜಾರಿ , ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ , ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ಪ್ರಭಾಕರ್ ಭಂಡಾರಿ, ಅಖಿಲ ಕರ್ನಾಟಕ ಜೈನ ಸಂಘ ಅಧ್ಯಕ್ಷ ಮುನಿರಾಜ್ ಜೈನ್, ಶ್ರೀ ರಜಕ ಸಂಘದ ಅಧ್ಯಕ್ಷ ಸಿಎ ವಿಜಯಕುಂದರ್,, ಜವಾಬ್ ನ ಅಧ್ಯಕ್ಷ ರಮೇಶ್ ಕೆ ಶೆಟ್ಟಿ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕೋಮರ್ಸ್ ನ ಕಾರ್ಯದರ್ಶಿ ಕೆ. ಶಿ. ಶೆಟ್ಟಿ, ಬಂಟ್ಸ್ ಲಾ ಪಾರ್ಮ ನ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗಾಣಿಗ ಸಂಘದ ಅಧ್ಯಕ್ಷ ಬಿ. ವಿ. ರಾವ್, ಪದ್ಮಶಾಲಿ ಸೇವಾ ಸಂಘದ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ಜಿ ಎಸ್ ಬಿ ಸೇವಾ ಮಂಡಲದ ವಿಜಯಾ ಕಾಮತ್, ಅಂಧೇರ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ ಸುವರ್ಣ,ತೂ ಇತರ ಜಾತಿಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ತುಳು ಕನ್ನಡ ಸಂಘ-ಸಂಸ್ಥೆಯ ಪದಾಧಿಕಾರಿಗಳು ಅಪಾರ ಸಂಸ್ಥೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಗೌರವ ಕಾರ್ಯದರ್ಶಿಗಳಾದ , ಬಿ. ಮುನಿರಾಜ್ ಜೈನ್, ದೇವದಾಸ್ ಕುಲಾಲ್, ರವಿ ದೇವಾಡಿಗ, ಜೊತೆ ಕೋಶಾಧಿಕಾರಿಗಳಾದ ಸದಾನಂದ ಆಚಾರ್ಯ ಮತ್ತು ತೋನ್ಸೆ ಸಂಜೀವ ಪೂಜಾರಿ ಸದಸ್ಯರುಗಳಾದ , ಎಂ. ಎನ್. ಕರ್ಕೇರ, ರಾಮಚಂದ್ರ ಗಾಣಿಗ, ದಯಾಸಾಗರ ಚೌಟ, ಶ್ಯಾಮ್ ಎನ್. ಶೆಟ್ಟಿ, ಕರುಣಾಕರ ಹೆಜ್ಮಾಡಿ, ವಾಸು ಎಸ್ ದೇವಾಡಿಗ, ಡಾ. ಸುರೇಂದ್ರಕುಮಾರ್ ಹೆಗ್ಡೆ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ರಮಾನಂದ ರಾವ್, ರಾಮಚಂದ್ರ ಗಾಣಿಗ, ಶ್ರೀನಿವಾಸ್ ಸಾಪಲ್ಯ, ಚಿತ್ರಾಪು ಕೆ. ಎಂ. ಕೋಟ್ಯಾನ್, ರಾಕೇಶ್ ಭಂಡಾರಿ, ಜಯಪ್ರಕಾಶ್ ಕಾಮತ್, ನ್ಯಾ. ಶಶಿಧರ ಕಾಪು, ಜಿ.ಎಸ್. ಗಣೇಶ್ ಎಸ್ ಶೆಟ್ಟಿ, ಉಪಸ್ಥರಿದ್ದರು.

ಗಣ್ಯರ ಅನಿಸಿಕೆಗಳು :

ಸಂಸದ ಗೋಪಾಲ ಶೆಟ್ಟಿ:
ಉತ್ತರ ಮುಂಬಯಿಯ ಸಂಸದ ಗೋಪಾಲ ಶೆಟ್ಟಿ ಯವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಎಲ್ಲಾ ಸಮಾಜದ ನಾಯಕರನ್ನು ಒಟ್ಟು ಗೂಡಿಸಿದ ಕೀರ್ತಿಯು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಗಿದೆ. ಹಸಿರನ್ನು ಉಸಿರಾಗಿರಿಸುವ ಆರ್. ಕೆ. ನಾಯರ್ ರವರ ಸೇವೆ ದೊಡ್ಡ ಸಾಧನೆಯಾಗಿದೆ. ಗುಜರಾಥ್ ನ ಕಚ್ ನಲ್ಲಿ ದೊಡ್ಡ ಮಟ್ಟದ ಕ್ರಾಂತಿಯನ್ನು ನಡೆಸುವುದು ಸುಲಭ ಸಾಧ್ಯವಲ್ಲ. ಜಯಕೃಷ್ಣ ಶೆಟ್ಟಿ ಯವರು ಈ ಸಂಸ್ಥೆಯನ್ನು ಪ್ರಾರಂಭಿಸುವಾಗ ದೇವರೇ ಸಂಕಲ್ಪ ಕಲ್ಪಿಸಿರಬೇಕು. ಇಲ್ಲಿ ಎಲ್ಲಾ ಸಮಾಜದ ನಾಯಕರು ಸೇರಿದ್ದಾರೆ ಅದು ಕೂಡಾ ಒಬ್ಬ ರಾಜಕೀಯ ಸಂತನಿಗೆ ನಮನ ಸಲ್ಲಿಸಲು. ಪ್ರತಿಯೊಬ್ಬ ಕೂಡಾ ಒಂದೆರಡು ತಾಸು ಸಮಾಜದ ಅಭಿವೃದ್ದಿ ಕಾರ್ಯಕ್ಕೆ ವಿನಿಯೋಗಿಸುವಂತಾಗಲಿ.

ಐವನ್ ಡಿ’ಸೋಜಾ :
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಐಸಿಸಿ ಕಾರ್ಯದರ್ಶಿ ಮಾಜಿ ಎಂ ಎಲ್ ಸಿ ಯುವ ನ್ಯಾಯವಾದಿ ಐವನ್ ಡಿ’ಸೋಜಾ ಮಾತನಾಡುತ್ತಾ ಈ ಕಾರ್ಯಕ್ರಮವನ್ನು ಕಂಡಾಗ ಮಂಗಳೂರಲ್ಲಿ ಇದ್ದಂತೆ ಬಾಸವಾಗುತ್ತದೆ. ಬಹಳ ಸಂಖ್ಯೆಯಲ್ಲಿ ವಿವಿಧ ಸಮಾಜದ ಮುಖಂಡರುಗಳು ಇಲ್ಲಿ ಸೇರಿದ್ದಾರೆ. ಚರಿತ್ರೆಯನ್ನು ನಿರ್ಮಿಸಿದವರು ಜಾರ್ಜ್ ಫೆರ್ನಾಂಡಿಸ್. ಚರಿತ್ರೆಯನ್ನು ನಿರ್ಮಿಸಲು ಹೊರಟವರು ಆರ್ ಕೆ ನಾಯರ್. ಜಾರ್ಜ್ ಫೆರ್ನಾಂಡಿಸ್ ರವರು ಕಾರ್ಮಿಕರಿಗೆ ಬಲವನ್ನು ಕೊಟ್ಟವರು. ಇವತ್ತು ಪರಿಸರ ಪ್ರೇಮಿ ಸಮಿತಿ ಜಾರ್ಜ್ ಫೆರ್ನಾಂಡಿಸ್ ಹೆಸರನ್ನು ಮಂಗಳೂರು ವಿಮಾನ ನಿಲ್ಧಾಣಕ್ಕೆ ಇಡಬೇಕೆನ್ನುವಾಗ ಅದನ್ನು ಎಲ್ಲರೂ ಬೆಂಬಲಿಸಬೇಕು. ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯು ಇಂದಿನ ಈ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:
ಮತ್ತೋರ್ವ ಮುಖ್ಯ ಅತಿಥಿ ಮಾಜಿ ಎಂ ಎಲ್ ಸಿ ಬಿಜೆಪಿ ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡುತ್ತಾ ಕರ್ನಾಟಕ ಸರಕಾರಕ್ಕೆ ಈಗಾಗಲೇ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಕಾರ್ಯಚಟುವಟಿಕೆಗಳು, ಯೋಜನೆಗಳನ್ನು ತಲಪಿಸಿದ್ದೇವೆ ಅದು ಕಾರ್ಯಗತವಾಗಲು ಈಗಿನ ಸರಕಾರದಲ್ಲಿ ಅನ್ಯೋನ್ಯ ಸಂಮಧವಿರುವ ಐವನ್ ಡಿ’ಸೋಜಾ ಅವರು ನಮ್ಮೊಂದಿಗೆ ಸೇರಿಕೊಳ್ಳಬೇಕು. ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿಗೊಳ್ಳುತ್ತಿದೆ ಆದರೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಹಿಂದಿದ್ದೇವೆ. ಜಾರ್ಜ್ ಅವರು ತುಳು ನಾಡಿನಿಂದ ಬಂದು ಮುಂಬಯಿ ಹಾಗೂ ಉತ್ತರ ಭಾರತದಲ್ಲಿ ಬದುಕು ಕಟ್ಟಿ ರಾಜಕಾರಿಣಿಯಾಗಿ ಬೆಳೆದದ್ದು ಸಾಮಾನ್ಯ ಕೆಲಸವಲ್ಲ.

ಸುರೇಶ್ ಶೆಟ್ಟಿ ಗುರ್ಮೆ:
ಕಾಪು ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸುರೇಶ್ ಶೆಟ್ಟಿ ಗುರ್ಮ ಅವರು ಮಾತನಾಡುತ್ತಾ ನಮ್ಮ ಅಲ್ಪಕಾಲದ ಬದುಕಲ್ಲಿ ಸಾರ್ಥಕ ಸೇವೆ ಮಾಡಿದಾಗ ಜೀವನದ ಮೌಲ್ಯಗಳು ಅರ್ಥವಾಗುತ್ತದೆ. ನಾನು ಶಾಸಕನಾಗುವ ಮೊದಲು ಜಗತ್ತಿನ ಬಹುತೇಕ ದೇಶಗಳನ್ನು ಸುತ್ತಿಕೊಂಡಿದ್ದೇನೆ. ಅಲ್ಲಿನ ಅಭಿವೃದ್ದಿಯ ಬೆಳವಣಿಗೆಯನ್ನು ನನ್ನ ಕ್ಷೇತ್ರದಲ್ಲಿ ಕೂಡಾ ಮಾಡುವಂತಾಗಲು ಪ್ರಯತ್ನಿಸುತ್ತೇನೆ. ಈ ಹಿಂದಿನ್ನ ಮುಖ್ಯ ಮಂತ್ರಿಗೆ ಕರಾವಳಿಯ ಹೆಜಮಾಡಿಯಲ್ಲಿ ಬಂದರು ನಿರ್ಮಾಣ ಮಾಡಲು ಪ್ರಸ್ತಾವನೆಯನ್ನು ನೀಡಿದ್ದೆ. ಅದರಿಂದ ಜಿಲ್ಲೆಯ ಜನತೆಗೆ ಉದ್ಯೋಗ ಶೃಷ್ಟಿಯಾಗುತ್ತದೆ. ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಹೊರಗಿನವರು ಸುತ್ತಿಕೊಂಡಾಗ ಅದಕ್ಕೆ ಪೂರಕವಾಗಿ ಪ್ರವಾಸ ಕೇಂದ್ರಗಳು ನಿರ್ಮಾಣಗೊಂಡಾಗ ಉದ್ಯೋಗ ಸೃಷ್ಟಿಯಾಗುತ್ತದೆ. ನಾವು ಕೇವಲ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಕೇಂದ್ರ ವಾಗಿರಿಸಿದ್ದೇವೆ. ನಮ್ಮಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿ ಕಳೆದ 22 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ನಾನೊಬ್ಬ ಶಾಸಕನಾಗಿ ನನ್ನಿಂದಾಗುವ ಕಾರ್ಯವನ್ನು ಮಾಡುತ್ತೇನೆ. ಉದ್ಯಮಿಗಳಾಗಿ ಸಮಾಜ ಸೇವಕರಾಗಿ ನೀವು ಕೂಡಾ ಜಿಲ್ಲೆಗಳ ಅಭಿವೃದ್ದಿಗೆ ಚಿಂತಿಸಬೇಕು. ನಮಗೆಲ್ಲರಿಗೂ ಒಂದು ಋಣ ಇದೆ ಎಂದರು.

ವರದಿ: ಈಶ್ವರ ಎಂ. ಐಲ್
ಚಿತ್ರ: ದಿನೇಶ್ ಕುಲಾಲ್

Comments are closed.