ಮುಂಬಯಿ: ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್, ಮುಂಬಯಿ ಇದರ ಅಮೃತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ಜರಗಿದ ಮೊಯರ್ ಕ್ರೀಡೋತ್ಸವದ ಸಮಾರೋಪ ಸಮಾರಂಭ ಹಾಗೂ ಆರ್ ಎನ್ ಉಚ್ಚಿಲ್ ಮೆಮೋರಿಯಲ್ ಅಟ್ಲಾಟಿಕ್ ಕ್ರೀಡೋತ್ಸವ ಇತ್ತೀಚೆಗೆ ಚರ್ಚ್ ಗೇಟ್ ಬಳಿಯ ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅದ್ದೂರಿಯಿಂದ ಜರಗಿತು.
ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ್ ಐಲ್ ಕ್ರೀಡಾ ಧ್ವಜಾರೋಹಣ ಮಾಡುವುದರೊಂದಿಗೆ ದಿನಪೂರ್ತಿ ಜರುಗಿದ ಕ್ರೀಡೋತ್ಸವಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು. ಅಂದು ಸಂಜೆ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವು ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ್ ಐಲ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 75 ವರ್ಷಗಳಿಂದ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು. ಸಮಾಜದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಸಮಾಜದ ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವಂತೆ ಪ್ರೇರೇಪಿಸುತ್ತೇವೆ ಎಂದರು. ಸಮಾಜದ ಮಕ್ಕಳು ಇಂತಹ ಕ್ರೀಡಾಕೂಟಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಹಾಗೂ ತಮ್ಮ ಕ್ರೀಡಾ ಪ್ರತಿಭೆಯನ್ನು ಬೆಳೆಸಬೇಕು ಎಂದರು.
ಪತ್ರಕರ್ತ ಸುಭಾಷ್ ಶಿರಿಯ ,ಛಾಯಾಗ್ರಾಹಕ ರಾಮಚಂದ್ರ ಕುಂಬ್ಳೆ ಅವರನ್ನು ಸನ್ಮಾನಿಸಿದರು. ವರ್ಷದ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ ಆರ್ ಎನ್ ಉಚ್ಚಿಲ್ ಟ್ರೋಪಿಯನ್ನು ಕವಿನ್ ಪಿ ಉದ್ಯಾವರ್ ಪಡೆದುಕೊಂಡರೆ ಆನಂದ ಅಂಬು ಉದ್ಯಾವರ್ ಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನು ಪ್ರಜ್ವಲ್ ಜೆ ಉದ್ಯಾವರ್, ವಸಂತ್ ಉಚ್ಚಿಲ್ ಮೆಮೋರಿಯಲ್ ಟ್ರೋಪಿಯನ್ನು ತೃಷಿ ಜಿ ಉಚ್ಚಿಲ್, ಅವರು ಪಡೆದುಕೊಂಡರು.
ಪವನ್ ವೆಂಕಟರಮನ್ ವಿಠ್ಠಲ್ ಮೊರಿಯಲ್ ಟ್ರೋಫಿಯನ್ನು ಆರ್ಯನ್ ಉದ್ಯಾವರ್ ಮತ್ತು ಜಿಯಾ ಎಚ್ ಉಚ್ಚಿಲ್ ಅವರು ಪಡೆದುಕೊಂಡರು. ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ್ ಐಲ್ ಹಾಗೂ ಉಪಾಧ್ಯಕ್ಷ ಸತೀಶ್ ಎನ್ ಉಚ್ಚಿಲ್, ಕಾರ್ಯದರ್ಶಿ ದರ್ಶನ್ ಕೆ ಬಟ್ಟಪಾಡಿ, ಜೊತೆ ಕಾರ್ಯದರ್ಶಿ ಗುರುದತ್ ಎಸ್ ಉಚ್ಚಿಲ್, ಕೋಶಾಧಿಕಾರಿ ನಿರಂಜನ್ ಎ ಐಲ್, ಸಮಿತಿ ಸದಸ್ಯರಾದ ಪ್ರಮೋದ್ ಎಸ್ ಉಚ್ಚಿಲ್, ಸುರೇಂದ್ರ ಉಚ್ಚಿಲ್, ನಾರಾಯಣ ಉದ್ಯಾವರ್, ಚಂದ್ರಕಾಂತ್ ಎಸ್ ಉಚ್ಚಿಲ್, ಚಂದ್ರಶೇಖರ್ ಉದ್ಯಾವರ್,ಪ್ರಫುಲ್ ಉಚ್ಚಿಲ್, ನಿತಿನ್ ಎಸ್ ಉಚ್ಚಿಲ್, ಉದಯ್ ಐಲ್, ದಿಯಾ, ಶೈಲರಾಜ್ ಎಸ್ ಉಚ್ಚಿಲ್, ಅಶೋಕ್ ಎಸ್ ಉಚ್ಚಿಲ್, ದಿಯಾ ಉಚ್ಚಿಲ್, ಮೊದಲಾದವರು ಉಪಸ್ಥಿತರಿದ್ದರು.
ವರದಿ: ಈಶ್ವರ ಎಂ. ಐಲ್
ಚಿತ್ರ: ಸುಭಾಷ್ ಶಿರಿಯ
Comments are closed.