ಮುಂಬಯಿ: ಜನಸಾಮಾನ್ಯರ ಸೇವೆಗಾಗಿ ಹೊಸ ಉದ್ದೇಶವನ್ನು ಇಟ್ಟುಕೊಂಡು ಸಮುದಾಯದ ಜನರ ಪ್ರೋತ್ಸಾಹ ಮತ್ತು ಅಮ್ಮ ಭಗವತಿಯವರ ಆಶೀರ್ವಾದಿಂದ, ನಾವು ಜಾಗತಿಕ ಮಟ್ಟದ ನೂತನ ಸಂಘಟನೆ (ಟ್ರಸ್ಟ್ ) ಯನ್ನು ಸ್ಥಾಪಿಸಿದ್ದು , ಇವತ್ತು ಇದನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷ ರವಿ ಉಚ್ಚಿಲ್ ನುಡಿದರು.
ರಾಜೇ ಸಂಭಾಜಿ ಸಭಾಗ್ರಹ ಮುಲುಂಡ್ (ಪೂರ್ವ) ದಲ್ಲಿ ನಡೆದ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರವಿ ಉಚ್ಚಿಲ್ ಅವರು, ಈ ಸಂಸ್ಥೆ ಕೇವಲ ಸಮಾಜ ಬಾಂಧವರಿಗೆ ಮಾತ್ರವಲ್ಲದೆ ಬಡತನದ ರೇಖೆಕಿಂತ ಕೆಳಗಿರುವ ಇತರ ಸಮಾಜದ ಜನ ಸಾಮಾನ್ಯರ ಸಹಾಯಕ್ಕೂ ಸ್ಪಂದಿಸುದರೊಂದಿಗೆ ಜನ ಸೇವೆಯೇ ಜನಾರ್ಧನ ಸೇವೆ ಎಂಬಂತೆ ಕಾರ್ಯ ಮಾಡಲಾಗುತ್ತಿದೆ. ಜನ ಸಾಮಾನ್ಯರ ಸೇವೆಗೆ ಹಲವಾರು ಯೋಜನೆಗಳನ್ನು ಈ ಸಂಸ್ಥೆ ಹೊಂದಿದ್ದು, ಅದರಲ್ಲಿ ಮುಖ್ಯವಾದ ಯೋಜನೆಗಳ ಬಗ್ಗೆ ತಿಳಿಸುತ್ತಾ, ಕೋವಿಡ್ ಸಂದರ್ಭದಲ್ಲಿ ಈ ಸಂಸ್ಥೆಯ ಅನೇಕರು ಸಮಾಜ ಬಾಂಧವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿದ್ದನ್ನು ನೆನಪಿಸಿದರು. ಸಮಾಜ ಬಾಂಧವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಲ್ಲಿ ಹಣದ ವ್ಯವಸ್ಥೆಯಿಲ್ಲದೆ ಪರದಾಡಬೇಕಾಗಿದ್ದು, ಇಂತಹ ಪರಿಸ್ಥಿತಿಯನ್ನು ನಾವು ಕಣ್ಣಾರೆ ಕಂಡು ಅಂತವರಿಗೆ ಈ ಸಂಸ್ಥೆಯು ಆಸ್ಪತ್ರೆಯ ಬಿಲ್ಲನ್ನು ನೇರವಾಗಿ ಆಸ್ಪತ್ರೆಗೆ ನೀಡಿ ಸಾಧ್ಯವಾದ ರೀತಿಯಲ್ಲಿ ಸಹಕರಿಸಲು ಪ್ರಯತ್ನಿಸುತ್ತದೆ. ಒಂದು ಕುಟುಂಬದ ಅನ್ನದಾತನ ನಿಧನವಾದಲ್ಲಿ, ಅಂತಹ ಕುಟುಂಬವು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸೂಕ್ತ ಸಹಾಯ ಹಾಗೂ ಮಾರ್ಗ ದರ್ಶನ ನೀಡುವುದು. ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಕ್ಕಳಿಗೆ ಶಾಲೆಯ ಶುಲ್ಕವನ್ನು ಅವರ ಹೆತ್ತವರಿಂದ ಭರಿಸಲಾಗದಿದ್ದಲ್ಲಿ ಅದನ್ನು ಶಾಲೆಗೆ ನೇರವಾಗಿ ನೀಡುವುದು. ಇತ್ತೀಚೆಗೆ ಈ ರೀತಿಯ ಘಟನೆಯು ನಡೆದಿದ್ದು, ಈ ಸಂಸ್ಥೆಯು ಅದಕ್ಕೆ ಸ್ಪಂದಿಸಿದೆ. ಪ್ರತಿಭಾವಂತ ಮಕ್ಕಳಿಗೆ ಅವರ ಪ್ರತಿಭಾ ವಿಕಸನಕ್ಕಾಗಿ ಸೂಕ್ತ ವೇದಿಕೆಯನ್ನು ಒದಗಿಸುವುದು. ಜೇಷ್ಥ ನಾಗರಿಕರು ತೊಂದರೆಗೊಳಗಾದಲ್ಲಿ ಅವರಿಗೆ ಸೂಕ್ತ ಸಹಾಯವನ್ನು ಒದಗಿಸುವುದು. ದಾನಿಗಳ ಸಹಾಯದಿಂದ ಈ ರೀತಿಯ ಸಹಾಯವನ್ನು ಒದಗಿಸಲು ಈ ಸಂಸ್ಥೆ ಕ್ರೀಯಾಶೀಲವಾಗಿದ್ದು ಇದಕ್ಕೆ ಎಲ್ಲರೂ ಸಹಕರಿಸಿ ಪ್ರೋತ್ಸಾಹಿಸಬೇಕು ಎಂದು ಅವರು ವಿನಂತಿಸಿದರು. ಒಂದು ಸಮುದಾಯದಲ್ಲಿ ಅನೇಕ ಸಂಸ್ಥೆಗಳಿರುತ್ತವೆ. ಆದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ, ನಾವು ಹೆಚ್ಚಿನ ಗುರಿಗಳನ್ನು ಸಾಧಿಸಬಹುದು ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹರಕ್ಚಂದ್ ಸಾವ್ಲಾ ಅವರು ಕ್ಯಾನ್ಸರ್ ರೋಗಿಗಳ ಆಶಾಕಿರಣವಾದ ಜೀವನ್ ಜ್ಯೋತಿ ಟ್ರಸ್ಟ್ ಇದರ ಸಂಸ್ಥಾಪಕರಾಗಿದ್ದಾರೆ. ಇವರು ‘ನಮೋ ಮೋಯರ್ ಗ್ಲೋಬಲ್ ಫೌಂಡೇಶನ್’ ಈ ಸಂಸ್ಥೆಯನ್ನು, ವೇದಿಕೆಯಲ್ಲಿರುವ ಇತರ ಗಣ್ಯರೊಂದಿಗೆ ಉದ್ಘಾಟಿಸಿ, ಸಂಘಟನೆಯ ಲೋಗೋವನ್ನು ಅನಾವರಣಗೊಳಿಸಿ ಮಾತನಾಡುತ್ತಾ, ಕ್ಯಾನ್ಸರ್ ನಿಂದ ಜಾಗೃತರಾಗಿರಲು ರಾಸಾಯನಿಕ ಹೊಂದಿದ ವಸ್ತುಗಳಾದ ಪ್ಲಾಸ್ಟಿಕ್ ನ್ನು ಹಾಗೂ ಸಕ್ಕರೆಯನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವುದು ಉತ್ತಮ. ಪ್ರತಿಯೊಬ್ಬರು ಪ್ರತೀ ತಿಂಗಳು ನೂರು ರೂಪಾಯಿಯಾದರೂ ಸಂಸ್ಥೆಗೆ ನೀಡಿದಲ್ಲಿ, ಅದು ಕಷ್ಟದಲ್ಲಿರುವವರಿಗೆ ಸಹಕಾರಿಯಾಗುವುದು. ಕ್ಯಾನ್ಸರ್ ರೋಗಿಗಳು ರಸ್ತೆಯ ಬದಿಯಲ್ಲಿ ಕಾಲ ಕಳೆಯುತ್ತಿದ್ದು, ಸಮಾಜದ ಶ್ರೀಮಂತರು ವಸತಿ ಸೌಕರ್ಯ ಒದಗಿಸಿದಲ್ಲಿ, ಸಮಾಜದ ಯಾವುದೇ ವ್ಯಕ್ತಿ, ಅನಾಥರಾಗಲು ಅಸಾಧ್ಯ ಎಂದರು.
ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿಯ ಕನ್ನಡಿಗರಾದ, ಮೋಯಾ (ಬೋವಿ) ಸಮುದಾಯದವರು, ಸುಮಾರು 150 ವರ್ಷಗಳ ಹಿಂದೆಯೇ ಮುಂಬಯಿ ಸೇರಿದ್ದು, ಸಮಾಜದ ಅನೇಕ ಸಂಘಟನೆಗಳನ್ನು ಸ್ಥಾಪಿಸಿ, ಸಮಾಜ ಸೇವೆ, ಕ್ರೀಡಾ, ಶೈಕ್ಷಣಿಕ ಹಾಗೂ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿದ್ದು, ಇದೀಗ ಒಂದು ಹೆಚ್ಚೆ ಮುಂದಿಡುತ್ತಾ ಕೋವಿಡ್ ಸಮಯದಲ್ಲಿನ ತಮ್ಮ ಅನುಭವವನ್ನು ನೆನಪಿಸಿಕೊಂಡು, ಅಂತರಾಷ್ಟ್ರೀಯ ಮಟ್ಟದ ಇಂತಹ ಸಂಘಟನೆ ಸ್ಥಾಪಿಸಿದ್ದು , ಜನರ ಶ್ಲಾಘನೆಗೆ ಪಾತ್ರವಾಗಿದೆ.
ಗೌರವ ಅತಿಥಿಗಳಾದ ಚಂದ್ರೇಶ್ ಮೆಹ್ತಾ, ಸಂಜಯ ಗುರೂಜಿ, ಕೀಮ್ಚೀಬಾಯಿ ಮಮಾನಿಯ, ನಿತಿನ್ ಬಾಯಿ ಗಗ್ಲಾನಿ, ಶಶಿಕಾಂತ್ ಅಹಿರೆ,ವಿಜಯಲಕ್ಷ್ಮಿ ಉಚ್ಚಿಲ್ ಮತ್ತು ಇತರ ಅತಿಥಿಗಳಾದ ಮಾಧವ ಐಲ್, ಕರ್ನೂರು ಮೋಹನ ರೈ, ಶಶಿಕಾಂತ್ ಅಹಿರೆ, ಪಾವೆಲ್ಜಿ, ಆನಂದ್ ಬೇರಿಕ, ವಿಪುಲಾ ಉಚ್ಚಿಲ್ ಪುರುಷೋತ್ತಮ ಅಡ್ಕ, ಮೊದಲಾದವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಗೌರವ ಕಾರ್ಯದರ್ಶಿ ರಾಧೇಶ್ ಉಚ್ಚಿಲ್, ಗೌರವ ಕೋಶಾಧಿಕಾರಿ ಯಶವಂತ್ ಐಲ್ ಮತ್ತು ಇತರ ಪದಾಧಿಕಾರಿಗಳು ಉಪಾಸ್ಥಿತರಿದ್ದರು.
ನಮೋ ಮೋಯರ್ ಮೆಲೋಡಿಯಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಪ್ನಾ ಉಚ್ಚಿಲ್ ಮತ್ತು ಈಶಾನ್ ಉಚ್ಚಿಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷರಾಗಿ ರವಿ ಉಚ್ಚಿಲ್,ಗೌರವ ಕಾರ್ಯದರ್ಶಿಯಾಗಿ ರಾಧೇಶ್ ಉಚ್ಚಿಲ್, ಗೌರವ ಕೋಶಾಧಿಕಾರಿಯಾಗಿ ಯಶವಂತ್ ಐಲ್, ಉಪಾಧ್ಯಕ್ಷರುಗಳಾಗಿ ಕುಮಾರಯ್ಯ ಐಲ್, ಶ್ವೇತಾ ಉಚ್ಚಿಲ್, ರವೀಂದ್ರ ಬತ್ತೇರಿ, ಸೌರಭ್ ಐಲ್, ಜೊತೆ ಕಾರ್ಯದರ್ಶಿಗಳಾಗಿ ಸುಶ್ಮಾ ಕುಂಬ್ಲೆ, ಸ್ವಪ್ನಾ ಉಚ್ಚಿಲ್, ಜೊತೆ ಕೋಶಾಧಿಕಾರಿಗಳಾಗಿ ಧನ್ಯಶ್ರೀ ಐಲ್ ಮತ್ತು ರೂಪಾ ಉಚ್ಚಿಲ್ ಆಯ್ಕೆಯಾಗಿದ್ದಾರೆ. ಈಶಾನ್ ಉಚ್ಚಿಲ್, ಪ್ರೀತಿ. ಸಿ ಉಚ್ಚಿಲ್,ದಿಪ್ತೇಶ್ ಕೋಟೆಕಾರ್, ಶ್ರಾವ್ಯ ಉಚ್ಚಿಲ್, ಯಶ್ವಿತ್ ಉಚ್ಚಿಲ್ , ಯೋಗಿತಾ ಉಚ್ಚಿಲ್ ಇವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಸಲಹಾ ಸಮಿತಿಯಲ್ಲಿ ಈಶ್ವರ ಕೆ. ಐಲ್, ಸತೀಷ್ ಐಲ್, ಚಂದ್ರಕಾಂತ್ ಉಚ್ಚಿಲ್, ಪುರುಷೋತ್ತಮ ಐಲ್, ನಂದಕುಮಾರ್ ಕುಂಬ್ಳೆ, ರವಿ ವಿಠ್ಠಲ್, ಮೀರಾ ಶೆಟ್ಟಿ, ರಘು ಕರ್ನೂರ್, ವಿನು ಪೂಜಾರಿ, ರವಿ ಕೆ ಕುಂಜತ್ತೂರು, ವಿಜಯ್ ಕುಮಾರ್ ಉಚ್ಚಿಲ್ (ಗೋವಾ), ಜಗದೀಶ್ ಉದ್ಯಾವರ್ (ಗೋವಾ) ಮತ್ತು ನವೀನ್ ಬೆಳ್ಚಪ್ಪಾಡ ಆಡ್ಕ ಇವರು ಕಾರ್ಯನಿರ್ವಹಿಸುತ್ತಿರುವರು.